ಕಾಂತಾರ ಚಾಪ್ಟರ್-1 ಹಿಂದಿ ವಿತರಣೆ ಜವಾಬ್ದಾರಿ ಎಎ ಫಿಲ್ಮ್ ಹೆಗಲಿಗೆ
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ, ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ ಚಾಪ್ಟರ್ 1’ ಅಕ್ಟೋಬರ್ 2,ರಂದು ವಿಶ್ವಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. 2022 ರ ಬ್ಲಾಕ್‍ಬಸ್ಟರ್ ‘ಕಾಂತಾರ’ದ ಬಹು ನಿರೀಕ್ಷಿತ ಪ್ರಿಕ್ವೆಲ್ ಈಗಾಗಲೇ ದೇಶಾದ್ಯಂತ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ.
ಉತ್ತರ ಭಾರತದಾದ್ಯಂತ ವಿತರಣೆಯನ್ನು ಎಎ ಫಿಲ್ಮ್ಸ್ ವಹಿಸಿಕೊಂಡಿದ್ದು, ಹಿಂದಿ ಮಾತನಾಡುವ ಪ್ರದೇಶಗಳಲ್ಲೂ ಈ ಚಿತ್ರ ದೊಡ್ಡ ಪರದೆಯ ಮೇಲೆ ಪ್ರದರ್ಶನಗೊಳ್ಳಲಿದೆ.
ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಚಿತ್ರದಲ್ಲಿ ರಿಷಬ್ ಶೆಟ್ಟಿ ಮುಖ್ಯ ಪಾತ್ರದಲ್ಲಿದ್ದು, ಕ್ರಿ.ಶ 4ನೇ ಶತಮಾನದ ಸಂಸ್ಕೃತಿ ಮತ್ತು ವೈಭವವನ್ನು ತೆರೆಯ ಮೇಲೆ ತರಲು ದೊಡ್ಡ ತಾರಾಗಣವಿದೆ.
ಈ ಚಿತ್ರ ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಪ್ರಾದೇಶಿಕ ಕಥೆಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಹೊಂಬಾಳೆ ಫಿಲ್ಮ್ಸ್‍ನ ದೃಷ್ಟಿಕೋನವನ್ನು ಇದು ಮತ್ತಷ್ಟು ಬಲಪಡಿಸಲಿದೆ.ತನ್ನ ಅದ್ಭುತ ಕಥೆ, ದೃಶ್ಯ ವೈಭವ ಮತ್ತು ಮನಮುಟ್ಟುವ ಸಂಗೀತದೊಂದಿಗೆ, ‘ಕಾಂತಾರ ಚಾಪ್ಟರ್ 1’ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ.

