"Koragajja" is all set for release: Best wishes to actress Shruti

ಬಿಡುಗಡೆಗೆ ಸಜ್ಜುಗೊಂಡ “ಕೊರಗಜ್ಜ” : ನಟಿ ಶೃತಿಗೆ ಶುಭಹಾರೈಕೆ - CineNewsKannada.com

ಬಿಡುಗಡೆಗೆ ಸಜ್ಜುಗೊಂಡ “ಕೊರಗಜ್ಜ” : ನಟಿ ಶೃತಿಗೆ ಶುಭಹಾರೈಕೆ

ಬಹುನಿರೀಕ್ಷಿತ ಪಾನ್ ಇಂಡಿಯಾ ಸಿನಿಮಾ “ಕೊರಗಜ್ಜ” ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಕೊರಗಜ್ಜನ ಸಾಕುತಾಯಿ ‘ಬೈರಕ್ಕೆ’ ವಿಶೇಷ ರೀತಿಯ ಪಾತ್ರ ನಿರ್ವಹಿಸಿರುವ ನಟಿ ಹಿರಿಯ ಶ್ರತಿ ಹುಟ್ಟುಹಬ್ಬಕ್ಕೆ ಚಿತ್ರತಂಡ ಶುಭ ಹಾರೈಸಿದೆ

ನಿರ್ದೇಶಕ ಸುಧೀರ್ ಅತ್ತಾವರ್, ನಟಿ ಭವ್ಯ, ನಿರ್ಮಾಪಕ ತ್ರಿವಿಕ್ರಮ ಸಪಲ್ಯ , ಕಾರ್ಯಕಾರಿ ನಿರ್ಮಾಪಕ ಮತ್ತು ಎಡಿಟರ್ ವಿದ್ಯಾಧರ್ ಶೆಟ್ಟಿ ಮೊದಲಾದವರು ನಟಿ ಶೃತಿ 50ನೇ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದರು

ವಿ ಎಫ್ ಎಕ್ಸ್ ಮತ್ತು ಗ್ರಾಫಿಕ್ಸ ಕೆಲಸ ವಿಳಂಬ ಗೊಂಡಿರುವುದೇ ಚಿತ್ರ ಬಿಡುಗಡೆ ಮುಂದೂಡಲು ಕಾರಣ ಎಂದು ಚಿತ್ರತಂಡ ಹೇಳಿದ್ದು ಈಗ ಸಿನಿಮಾದ ಎಲ್ಲಾ ವಿಭಾಗದ ಕೆಲಸಗಳು ಮುಗಿದು ಬಿಡುಗಡೆಗೆ ಸಿದ್ಧವಾಗಿದೆ.

ನಟಿ ಶ್ರುತಿ ಅವರ ಬೈರಕ್ಕೆ ಪಾತ್ರ ಜೀವಮಾನದ ಎಂಬ ಮಾತು ಕೇಳಿಬರುತ್ತಿದೆ. ಅಭಿನಯಿಸಿರುವ ಪಾತ್ರದ ಕ್ಲೈಮ್ಯಾಕ್ಸನ್ನು 4ಬಾರಿ ಚಿತ್ರೀಕರಿಸಲಾಗಿತ್ತು ಎಂದು ಚಿತ್ರತಂಡ ಹೇಳಿದೆ

ಹಾಲಿವುಡ್ ನಟ ಕಬೀರ್ ಬೇಡಿ, ಭವ್ಯ, ಬಾಲಿವುಡ್ ಕೊರಿಯೋಗ್ರಾಫರ್ ಗಳಾದ ಸಂದೀಪ್ ಸೋಪರ್ಕಾರ್, ಗಣೇಶ್ ಆಚಾರ್ಯ, ಶುಭ ಪೂಂಜ ಮೊದಲಾದವರ ತಾರಾಗಣವಿದದ. ಚಿತ್ರದಲ್ಲಿ ಋತಿಕ ಎನ್ನುವ ಅಚ್ಚ ಕನ್ನಡದ ಪ್ರತಿಭೆ ಚಿತ್ರರಂಗಕ್ಕೆ ಪರಿಚಯವಾಗಲಿದ್ದಾರೆ. ಚಿತ್ರಕ್ಕೆ ಗೋಪಿ ಸುಂದರ್ ಸಂಗೀತ,ಮಲಯಳಂ ನ ಖ್ಯಾತ ಮನೋಜ್ ಪಿಳ್ಳೈ ಕ್ಯಾಮರ ಕೈ ಚಳಕ ಇದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin