ನಟ ಉಪೇಂದ್ರ ಹುಟ್ಟುಹಬ್ಬಕ್ಕೆ “45” ಚಿತ್ರತಂಡದಿಂದ ವಿಶೇಷ ಬೈಕ್ ಅನಾವರಣ
ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖಪಾತ್ರದಲ್ಲಿ ನಟಿಸಿರುವ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಹಾಗೂ ಎಂ. ರಮೇಶ್ ರೆಡ್ಡಿ ನಿರ್ಮಿಸುತ್ತಿರುವ ಬಹು ನಿರೀಕ್ಷಿತ “45” ಚಿತ್ರದ ವಿಶೇಷ ಬೈಕ್ ಅನ್ನು ಬಿಡುಗಡೆ ಮಾಡಲಾಗಿದೆ

ಚಿತ್ರದ ನಾಯಕರಲ್ಲಿ ಒಬ್ಬರಾದ ಉಪೇಂದ್ರ ಹುಟ್ಟುಹಬ್ಬದ ದಿನ ಸಹಸ್ರಾರು ಅಭಿಮಾನಿಗಳ ಸಮ್ಮುಖದಲ್ಲಿ ವಿಶೇಷವಾದ ಬೈಕ್ ಅನಾವರಣ ಮಾಡುವ ಮೂಲಕ “45” ಚಿತ್ರತಂಡ ಉಪೇಂದ್ರ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ.
ನಿರ್ದೇಶಕ ಅರ್ಜುನ್ ಜನ್ಯ ಮಾತನಾಡಿ ಉಪೇಂದ್ರಹುಟ್ಟುಹಬ್ಬದ ಪ್ರಯುಕ್ತ ಅನಾವರಣಗೊಂಡಿರುವ ಈ ವಿಶೇಷ ಬೈಕ್ ಅನ್ನು ನಮ್ಮ ಚಿತ್ರದಲ್ಲಿ ಉಪೇಂದ್ರ ಅವರೆ ಓಡಿಸಿದ್ದಾರೆ ಸಿನಿಮಾದಲ್ಲಿ ಒಂದು ಪಾತ್ರ ಎಂದು ಹೇಳಬಹುದು. ಇಂದಿನಿಂದ ಚಿತ್ರ ಬಿಡುಗಡೆಯವರೆಗೂ ಈ ಬೈಕ್ ನ ಸಂಚಾರ ಆರಂಭವಾಗಲಿದೆ. ಉಪೇಂದ್ರ ಅಭಿಮಾನಿಗಳು ಈ ಬೈಕ್ ನ ಜೊತೆಗೆ ರೀಲ್ ಮಾಡಬಹುದು. ಸೆಲ್ಫಿ ತೆಗೆದುಕೊಳ್ಳಬಹುದು. ಅದನ್ನು ನಮಗೆ ಅಥವಾ ಉಪೇಂದ್ರ ಅವರಿಗೆ ಟ್ಯಾಗ್ ಮಾಡಬಹುದು. ಅದನ್ನು ಉಪೇಂದ್ರ ಅವರು ವೀಕ್ಷಸಲಿದ್ದಾರೆ ಎಂದರು.
ನಿರ್ಮಾಪಕ ರಮೇಶ್ ರೆಡ್ಡಿ ಮಾತನಾಡಿ ಚಿತ್ರದಲ್ಲಿ ವಿಶೇಷ ಬೈಕ್ ಕೂಡ ಒಂದು ಪಾತ್ರ. ಉಪೇಂದ್ರ ಈ ಬೈಕ್ ಓಡಿಸುವ ಸನ್ನಿವೇಶಗಳನ್ನು ಚಿತ್ರದಲ್ಲೇ ನೋಡಬೇಕು. ಬೈಕ್ ನಿರ್ಮಾಣಕ್ಕೆ ಬಹಳ ದಿನಗಳೆ ತೆಗೆದುಕೊಂಡಿದೆ. ಉಪೇಂದ್ರ ಅಭಿಮಾನಿಗಳು ಇದರ ಜೊತೆಗೆ ಫೋಟೋ ತೆಗೆದುಕೊಂಡು ತಂಡದವರಿಗೆ ಟ್ಯಾಗ್ ಮಾಡಬಹುದು ಎಂದು ಹೇಳಿದರು

ನಾಯಕ ಉಪೇಂದ್ರ ಮಾತನಾಡಿ ಸಾಮಾನ್ಯವಾಗಿ ಹುಟ್ಟುಹಬ್ಬದ ದಿನ ಟೀಸರ್, ಪೆÇೀಸ್ಟರ್ ಮುಂತಾದವುಗಳನ್ನು ಬಿಡುಗಡೆ ಮಾಡುತ್ತಾರೆ. ಆದರೆ “45” ಚಿತ್ರತಂಡ ಈ ಬೈಕ್ ಅನಾವರಣ ಮಾಡಿದ್ದು ವಿಶೇಷವಾಗಿದೆ. ಎಲ್ಲರ ಪ್ರೀತಿಗೆ ಅನಂತ ಧನ್ಯವಾದ ಎಂದರು
“45” ಚಿತ್ರ ಇದೇ ಡಿಸೆಂಬರ್ 25 ರಂದು ಬಿಡುಗಡೆಯಾಗಲಿದೆ.

