ರೀಲ್, ರಿಯಲ್ ಜೀವನದಲ್ಲಿ “ವಿಚಾರಣೆ ” ಮುಗಿಸಿದ ನಟ ಮಡೇನೂರು ಮನು ಈಗ “ಮತ್ತರಸ’

ರೀಲ್, ರಿಯಲ್ ಜೀವನದಲ್ಲಿ “ವಿಚಾರಣೆ ” ಮುಗಿಸಿದ ನಟ ಮಡೇನೂರು ಮನು ಈಗ “ಮತ್ತರಸ’ - CineNewsKannada.com

ರೀಲ್, ರಿಯಲ್ ಜೀವನದಲ್ಲಿ “ವಿಚಾರಣೆ ” ಮುಗಿಸಿದ ನಟ ಮಡೇನೂರು ಮನು ಈಗ “ಮತ್ತರಸ’

“ಕುಲದಲ್ಲಿ ಕೀಳ್ಯಾವುದೊ” ಚಿತ್ರದ ಮೂಲಕ ನಾಯಕನಾಗಿ ಗುರುತಿಸಿಕೊಂಡ ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೇನೂರು ಮನು, ನಾಯಕನಾದೆ ಎನ್ನುವ ಅಹಂ ತಲೆಗೆ ಅತ್ತಿ, ಹಿರಿಯ ನಟರಾದ ಶಿವರಾಜ್ ಕುಮಾರ್, ದರ್ಶನ್ ಹಾಗು ದೃವ ಸರ್ಜಾ ಬಗ್ಗೆ ಕೆಟ್ಟದಾಗಿ ಮಾತನಾಡಿ ಸಿನಿಮಾರಂಗದಿಂದಲೇ ಬಹಿಷ್ಕಾರದ ಭೀತಿಗೆ ಒಳಗಾಗಿದ್ದರು. ಹಾಗೋ ಹೀಗೂ ಮಾಡಿ ಬೀಸೋದೊಣ್ಣೆಯಿಂದ ಬಚಾವ್ ಆಗಿದ್ದಾರೆ

“ಕುಲದಲ್ಲಿ ಕೀಳ್ಯಾವುದೋ” ಚಿತ್ರ ಚಿತ್ರಮಂದಿರಕ್ಕೆ ಬಂದಷ್ಟೇ ವೇಗವಾಗಿ ಚಿತ್ರಮಂದಿರದಿಂದ ಕಾಣೆಯಾಗಿತ್ತು, ಈ ನಡುವೆ ತಮ್ಮ ತಪ್ಪಿಗಾಗಿ ಜೈಲು ಸೇರಿ ತನಿಖೆ ಯನ್ನೂ ಎದುರಿಸಿದ್ದರು. ಈ ನಡುವೆ ಸದ್ದುಗದ್ದಲವಿಲ್ಲದೆ ಎರಡನೇ ಚಿತ್ರ “ ವಿಚಾರಣೆ” ಚಿತ್ರೀಕರಣ ಪೂರ್ಣಗೊಳಿಸಿದ್ದು ಮೂರನೇ ಚಿತ್ರ ‘ ಮುತ್ತರಸ”ದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಮಡೇನೂರು ಮನು

ಕೆ.ಎಂ.ನಟರಾಜ್ ನಿರ್ಮಾಣ ಮಾಡುತ್ತಿರುವ ಚಿತ್ರವನ್ನು “ಮುತ್ತರಸ”ಚಿತ್ರದ ಪೋಸ್ಟರ್ ಅನ್ನು ನಟ ವಸಿಷ್ಠ ಸಿಂಹ, ಹಿರಿಯ ನಟರಾದ ಎಂ.ಎಸ್.ಉಮೇಶ್, ಕರಿ ಸುಬ್ಬು, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಮತ್ತಿತರರು ಬಿಡುಗಡೆ ಮಾಡಿ ಶುಭ ಹಾರೈಸಿದರು. ಈ ವೇಳೆ ಪದ್ಮಶ್ರೀ ಪುರಸ್ಕೃತರಾದ ಮಂಜಮ್ಮ ಜೋಗತಿ ಶೀರ್ಷಿಕೆ ಅನಾವರಣ ಮಾಡಿದರು.

ಈ ವೇಳೆ ಮಾತಿಗಿಳಿದ ನಟ ಮಡೇನೂರು ಮನು, ಕೆಲವು ದಿನಗಳ ಹಿಂದೆಜೀವನದಲ್ಲಿ ಆದ ಕಹಿ ಘಟನೆಗಳನೆಲ್ಲಾ ಮರೆತಿದ್ದೇನೆ. ಸದ್ಯಕ್ಕೆ ಯಾವುದೇ ಸಮಸ್ಯೆಗಳು ಇಲ್ಲ. ಆ ಸಮಯದಲ್ಲಿ ನನ್ನ ಜೊತೆಗೆ ನಿಂತವರಿಗೆ ಚಿರಋಣಿ . ಹೊಸ ಸಿನಮಾದ ಶೀರ್ಷಿಕೆ ಬಿಡುಗಡೆಯಾಗಿದೆ. ವಸಿಷ್ಠ ಸಿಂಹ ಅವರೊಟ್ಟಿಗೆ ತಲ್ವಾರ್ ಪೇಟೆ ಚಿತ್ರದಲ್ಲಿ ನಟಿಸಿದ್ದೇನೆ. ಇನ್ನೂ “ಮುತ್ತರಸ” ಚಿತ್ರದ ಶೀರ್ಷಿಕೆ ಕೊಟ್ಟದ್ದು ನಿರ್ದೇಶಕ ರಾಮ್ ನಾರಾಯಣ್. ಮುಂದಿನ ತಿಂಗಳಿನಿಂದ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ ಎಂದರು

ಕóಷ್ಟಕಾಲದಲ್ಲಿ ಜೊತೆಯಾಗಿ ನಿಂತಿದ್ದ ಎನ್ ಆರ್ ರಮೇಶ್, ಶಿವಕುಮಾರ್ ನಾಯಕ್, ಯೋಗರಾಜ್ ಭಟ್ ಹಾಗೂ ನನ್ನ ಹಿಂದಿನ ಚಿತ್ರದ ನಿರ್ಮಾಪಕರಾದ ಸಂತೋಷ್ ಕುಮಾರ್, ವಿದ್ಯಾ ಮತ್ತು ನಿರ್ದೇಶಕ ರಾಮ್ ನಾರಾಯಣ್ ಅವರನ್ನು ನೆನೆಯುತ್ತೇನೆ ಎಂದು ಅವರು “ವಿಚಾರಣೆ” ಚಿತ್ರ ಸಹ ತೆರೆಗೆ ಬರಲಿದೆ ಎಂದು ತಿಳಿಸಿದರು.

ನಿರ್ಮಾಪಕ ನಟರಾಜ್ ಮಾತನಾಡಿ ಹಿಂದಿನ ನಿರ್ಮಾಣದ ಚಿತ್ರದಲ್ಲೂ ನಟಿಸಿದ್ದ.ಅವರ ಕಾಂಬಿನೇಷನ್ ನಲ್ಲಿ ಎರಡನೇ ಚಿತ್ರ ಮೂಡಿ ಬರುತ್ತಿದೆ. ಶೀರ್ಷಿಕೆ ಅನಾವರಣ ಮಾಡಿಕೊಟ್ಟ ಗಣ್ಯರಿಗೆ ಧನ್ಯವಾದ ಎಂದರು ಹೇಳಿದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin