ರಾಕಿಂಗ್ ಸ್ಟಾರ್ ಯಶ್ ನಟನೆಯ “ಟಾಕ್ಸಿಕ್” ಚಿತ್ರದ ಆಕ್ಷನ್ ಚಿತ್ರೀಕರಣ ಆರಂಭ - CineNewsKannada.com

ರಾಕಿಂಗ್ ಸ್ಟಾರ್ ಯಶ್ ನಟನೆಯ “ಟಾಕ್ಸಿಕ್” ಚಿತ್ರದ ಆಕ್ಷನ್ ಚಿತ್ರೀಕರಣ ಆರಂಭ

ಹಾಲಿವುಡ್ ನ ಲೆಜೆಂಡ್ ಸ್ಟಂಟ್ ಮಾಸ್ಟರ್ ಜೆಜೆ ಪೆರ್ರಿ ಭಾರತೀಯ ಚಿತ್ರರಂಗದ ಖ್ಯಾತ ಸ್ಟಂಟ್ಸ್ ಟೀಮ್ ಜೊತೆಗೂಡಿ ಬರೊಬ್ಬರಿ 45ದಿನಗಳ ಸಾಹಸ ದೃಶ್ಯಗಳ ಚಿತ್ರೀಕರಣಕ್ಕೆ ಸಜ್ಜಾಗಿದ್ದಾರೆ. “ಟಾಕ್ಸಿಕ್” ಚಿತ್ರದ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹವಾ ಸೃಷ್ಠಿಸಲು ಈ ಜೋಡಿ ಸಜ್ಜಾಗಿದೆ.

ರಾಕಿಂಗ್ ಸ್ಟಾರ್ ಯಶ್ ಮತ್ತು ಹಾಲಿವುಡ್ ಸಾಹಸ ನಿರ್ದೇಶಕ ಜೆಜೆ ಪೆರ್ರಿ ಜೊತೆಯಾಗಿರುವುಉ ಭಾರತೀಯ ಚಿತ್ರರಂಗದಲ್ಲಿ ನೂತನ ದಾಖಲೆ ಬರೆಯಲಿದೆ ಟಾಕ್ಸಿಕ್. ಹಾಲುವುಡ್‍ಗೆ ಸೆಡ್ಡು ಹೊಡೆಯುವಂತಹ ಸ್ಟಂಟ್ಸ್ ಮಾಡೋದಕ್ಕೆ ತಯಾರಿ ನಡೆಸಿದ್ದಾರೆ ರಾಕಿಂಗ್ ಸ್ಟಾರ್ ಯಶ್.

ನಿರ್ದೇಶಕರಾದ ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಕೆ.ವಿ.ಎನ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿದ್ದು ದೇಶದ ಬಹುದೊಡ್ಡ ಚಿತ್ರ ಟ್ಯಾಕ್ಸಿಕ್ ಆಗಿದೆ. ಕೆಜಿಎಫ್ ಚಿತ್ರದ ಬಳಿಕ ನಟ ರಾಕಿಂಗ್ ಸ್ಟಾರ್ ಅವರ ಬಹು ನಿರೀಕ್ಷಿತ ಚಿತ್ರ ಇದು, ಹೀಗಾಗಿಯೇ ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಗಳಲ್ಲಿ ಚಿತ್ರದ ಬಗ್ಗೆ ನಿರೀಕ್ಷೆ ಮತ್ತು ಕುತೂಹಲ ಹೆಚ್ಚುವಂತೆ ಮಾಡಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin