“ದಿ ಡೆವಿಲ್” ಚಿತ್ರದ ಭಾಗವಾಗಿದ್ದೇನೆ: ಕಲಾವಿದೆಯಾಗಿ ಇನ್ನೇನು ಬೇಕು”: ನಟಿ ರಚನಾ ರೈ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ “ ದಿ ಡೆವಿಲ್” ಚಿತ್ರದ ಮೂಲಕ ಮಂಗಳೂರು ಮೂಲದ ಪ್ರತಿಭಾನ್ವಿತ ನಟಿ ರಚನಾ ರೈ ಕನ್ನಡ ಚಿತರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ನಡುವೆ “ದಿ ಡೆವಿಲ್” ಚಿತ್ರ ಇದ್ರೆ ನೆಮ್ಮದಿಯಾಗಿರಬೇಕು ಹಾಡು ಬಿಡುಗಡೆ ಮಾಡಿದ್ದು ಸಾಮಾಜಿಕ ಮಾದ್ಯಮದಲ್ಲಿ ಹವಾ ಸೃಷ್ಠಿಸಿದೆ.

ಈ ನಡುವೆ ಚಿತ್ರದ ನಾಯಕಿ ರಚನಾ ರೈ ಮಾಹಿತಿ ಹಂಚಿಕೊಂಡಿದ್ದು ಬಹುನಿರೀಕ್ಷಿತ ಡೆವಿಲ್ ಸಿನಿಮಾದ ಭಾಗವಾಗಿದ್ದೇನೆ. ಒಬ್ಬ ಕಲಾವಿದರಿಗೆ ಇದಕ್ಕಿಂತ ಇನ್ನೇನೂ ಬೇಕು. ಡೆವಿಲ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದೇನೆ. ಚಿತ್ರದ ಮೇಲೆ ನಿಮ್ಮ ಬೆಂಬಲವಿರಲಿ. ಇಲ್ಲಿವರೆಗೆ ನೀವು ನನಗೆ ನೀಡಿದ ಪ್ರೀತಿ, ಈ ಸಿನಿಮಾದ. ಮೇಲೂ ಇರಲಿ ಎಂದು ಕೇಳಿಕೊಂಡಿದ್ದಾರೆ.
ಪ್ರತಿ ಹೆಜ್ಜೆಯಲ್ಲಿ ಜೊತೆಯಾದವರು ನೀವು. ನನ್ನ ತಪ್ಪುಗಳನ್ನು ತಿದ್ದಿದವರು ನೀವು. ನಿಮ್ಮ ಬೆಂಬಲ, ಆಶೀರ್ವಾದದಿಂದ ದಿ ಡೆವಿಲ್ ಚಿತ್ರದಲ್ಲಿ ನಾಯಕಿಯಾಗಿದ್ದೇನೆ. ಇದಕ್ಕಿಂತ ಸೌಭಾಗ್ಯ ಇನ್ನೇನು ಬೇಕು ಎಂದಿದ್ದಾರೆ.

ಇದೇ ಮೊದಲ ಬಾರಿಗೆ ಮಾಹಿತಿ ಹಂಚಿಕೊಂಡಿರುವ ನಟಿ ರಚನಾ ರೈ,ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆ ನಟಿಯಾಗುವ ಎಲ್ಲಾ ಮುನ್ಸೂಚನೆ ನೀಡಿದ್ಧಾರೆ, ಅದಕ್ಕೆ ಪೂರಕವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಮೊದಲ ಚಿತ್ರದಲ್ಲಿಯೇ ನಟಿಸಿರುವುದು ಅವರ ವಿಶ್ವಾಸನ್ನು ದುಪ್ಪಟ್ಟು ಮಾಡಿದೆ.
ಹಿರಿಯ ಅನುಭವಿ ನಿರ್ದೇಶಕ ಪ್ರಕಾಶ್ ವೀರ್ ಅವರು ತಾಯಿ ಹೆಸರಲ್ಲಿ ಚಿತ್ರವನ್ನು ನಿರ್ಮಾಣ ಮಾಡುವ ಜೊತೆಗೆ ನಿರ್ದೇಶನ ಮಾಡಿದ್ದು ಚಿತ್ರದಲ್ಲಿ ಹಲವು ಅನುಭವಿ ಮತ್ತು ಹಿರಿಯ ಕಲಾವಿದರ ದಂಡೇ ಇದೆ.
ಈ ನಡುವೆ ಚಿತ್ರದ ಇದ್ರೆ ನೆಮ್ಮದಿಯಾಗಿ ಇರಬೇಕು ಹಾಡು ಗಾಂಧಿನಗರದಲ್ಲಿ ಹೊಸ ಅಲೆ ಸೃಷ್ಠಿ ಮಾಡಿದ್ದು ಚಿತ್ರ ಡಿಸೆಂಬರ್ 12 ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ.

ಇದೇ ವೇಳೆ ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯ ಕೋರಿರುವ ಅವರು ಗೌರಿ ಗಣೇಶರು ಎಲ್ಲರಿಗೂ ಸನ್ಮಂಗಳವನ್ನುಂಟು ಮಾಡಲಿ ಎಂದು ಪ್ರಾರ್ಥಿಸಿದ್ದಾರೆ


