“ಸರ್ವಾಂತರ್ಯಾಮಿ”ಚಿತ್ರದ ಹಾಡು ಬಿಡುಗಡೆ
ರಂಗಭೂಮಿ ಹಿನ್ನೆಲೆ ಇರುವ ರಂಗಸ್ವಾಮಿ ಕಪಿನಿಪಾಳ್ಯ ನಿರ್ದೇಶನದ, ಹಿತ ಆರ್ ಗೌಡ ನಿರ್ಮಾಣದ “ಸರ್ವಾಂತರ್ಯಾಮಿ” ಚಿತ್ರದ ಮೊದಲ ಹಾಡು ಇತ್ತೀಚೆಗೆ ಬಿಡುಗಡೆಯಾಗಿ ಜನಪ್ರಿಯತೆ ಪಡೆದ ಬೆನ್ನಲ್ಲೇ ಯುಗಾದಿ ಹಬ್ಬದ ಸಂದರ್ಭದಲ್ಲಿ ಚಿತ್ರದ ಮತ್ತೊಂದು ಹಾಡು ಅನಾವರಣವಾಗಿದೆ.

ಜೀವನದ ಕಹಿ ಸತ್ಯವನ್ನು ಈ ಹಾಡಿನ ಮೂಲಕ ಹೇಳಲಾಗಿದೆ. ನಿರ್ದೇಶಕ ರಂಗಸ್ವಾಮಿ ಕಪನಿಪಾಳ್ಯ ಹಾಡನ್ನು ಬರೆದಿದ್ದಾರೆ. ರವೀಂದ್ರ ಸೊರಗಾವಿ ಹಾಡಿರುವ, ರಮೇಶ್ ಕೃಷ್ಣ ಸಂಗೀತ ಸಂಯೋಜಿಸಿರುವ ಈ ಹಾಡು ವೇದಸ್ಯ ಮ್ಯೂಸಿಕ್ ಯೂಟ್ಯೂಬ್ ಚಾನಲ್ ನಲ್ಲಿ ಲಭ್ಯವಿದೆ.
ಡಾ.ಎಚ್ ಎಂ ಕೃಷ್ಣಮೂರ್ತಿ ಹಾಡಿನಲ್ಲಿ ಅಭಿನಯಿಸಿದ್ದಾರೆ. ಆಟೋ ನಾಗರಾಜ್, ತೇಜಸ್ವಿನಿ, ಮಾಯಾರಾ, ಅಮೂಲ್ಯ, ರಂಗಸ್ವಾಮಿ, ವಿಕ್ಟರಿ ವಾಸು, ಪೃಥ್ವಿ, ರಾಗ ಸುಬ್ರಹ್ಮಣ್ಯ, ನಿಖಿತ ಗೌಡ, ರಘು, ನಂದನ್ ಮುಂತಾದವರ ತಾರಾಬಳಗವಿರುವ ಈ ಚಿತ್ರಕ್ಕೆ ರಾಜು ಹೆಮ್ಮಿಗೆಪುರ ಛಾಯಾಗ್ರಹಣ ಹಾಗೂ ದೀಪು.ಸಿ.ಎಸ್ ಸಂಕಲನವಿದೆ. ಪೃಥ್ವಿರಾಜ್ ಸಂಭಾಷಣೆ ಬರೆದಿದ್ದಾರೆ. ನಿರ್ದೇಶಕ ಹಾಗೂ ಗೀತರಚನೆಕಾರ ರಾಮ್ ನಾರಾಯಣ್ ಸಹಕಾರ ನೀಡುತ್ತಿದ್ದಾರೆ.


