3ಡಿ ತಂತ್ರಜ್ಞಾನದಲ್ಲಿ “ಕೊರಗಜ್ಜ” ಚಿತ್ರ: ಅಂಡರ್ ವಾಟರ್ ಸನ್ನಿವೇಶ ಮರು ಚಿತ್ರೀಕರಣ
ಸುಧೀರ್ ಅತ್ತಾವರ್ ನಿರ್ದೇಶನದ ಕೊರಗಜ್ಜ ಚಿತ್ರ ಮತ್ತೆ ಮುಂದಕ್ಕೆ ಹೋಗಿದೆ.ಆದರೆ ಈ ಬಾರಿ ಯುಗಾದಿಗೆ ವಿಶೇಷ ಮಾಹಿತಿ ಹೊರ ಹಾಕಿದೆ, ಈಗ 3ಡಿ ತಂತ್ರಜಾÐನದಲ್ಲಿ ಚಿತ್ರ ತಯಾರಾಗುತ್ತಿದೆ.

ಸಾಮಾನ್ಯವಾಗಿ ಚಿತ್ರೀಕರಣದ ವೇಳೆಯಲ್ಲೇ 3ಡಿ ಶೂಟಿಂಗ್ ವಾಡಿಕೆ. 2ಡಿ ಯಲ್ಲಿ ಶೂಟಿಂಗ್ ಮಾಡಿ ಮತ್ತೆ 3ಡಿ ಗೆ ಕನ್ವರ್ಟ್ ಮಾಡುವುದು ಹೆಚ್ಚು ದುಬಾರಿ. ಆದರೆ ಚಿತ್ರದ ಗುಣಮಟ್ಟ ನೋಡಿ ಅಂತಾರಾಷ್ಟ್ರೀಯ ವಿತರಣಾ ಸಂಸ್ಥೆಯೊಂದು ವರ್ಲ್ಡ್ ಕ್ಲಾಸ್ ರೀತಿಯ ಸಿನಿಮಾ.ಇದರ ಲೊಕೇಷನ್ ಮತ್ತು ಮೇಕಿಂಗ್ ನೋಡಿ ಭಾಷಾ ಚೌಕಟ್ಟು 3ಡಿ ಚಿತ್ರೀಕರಣ ಮಾಡಲು ಮುಂದಾಗಿದ್ಧಾರೆ
ನಿರ್ದೇಶಕ ಸುಧೀರ್ ಅತ್ತಾವರ್ ಮಾಹಿತಿ ನೀಡಿ ತ್ರಿವಿಕ್ರಮ ಸಿನಿಮಾಸ್ ಮತ್ತು ಸಕ್ಸಸ್ ಫಿಲಂಸ್ ಬ್ಯಾನರ್ ಅಡಿಯ” “ಕೊರಗಜ್ಜ” ಚಿತ್ರವನ್ನು 2ಡಿ ಜೊತೆ 3ಡಿ ಚಿತ್ರವಾಗಿ ರೂಪಿಸಲು ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಮನಸ್ಸು ಮಾಡಿದ್ದಾರೆ ಸುಮಾರು 40 ಜನರ ತಂಡ ಈಗಾಗಲೇ ಇದಕ್ಕಾಗಿ ಕಾರ್ಯಪ್ರವ್ರತ್ತರಾಗಿದ್ಧಾರೆ ಎಂದು ಮಾಹಿತಿ ಹಂಚಿಕೊಂಡಿದ್ಧಾರೆ
“ಕೊರಗಜ್ಜ” ಚಿತ್ರಕ್ಕೆ ಅಂಡರ್ ವಾಟರ್ ಕ್ಲೈಮ್ಯಾಕ್ಸ್ ಟಚ್ ನೀಡಲಾಗಿದ್ದು ಡಾ ರಾಜ್ ಕುಮಾರ್ ಅವರ ನಂತರ ಕನ್ನಡದಲ್ಲಿ ಮೊತ್ತ ಮೊದಲದಾಗಿ ನಟಿ ಶ್ರತಿ ಅಂಡರ್ ವಾಟರ್ ನಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ .ಕ್ಲೈಮ್ಯಾಕ್ಸ ಅನ್ನು ವೈಭವೀಕರಿಸುವ ಸಲುವಾಗಿ ಅಂಡರ್ ವಾಟರ್ ಶೂಟಿಂಗ್ ಪುನರ್ ಚಿತ್ರೀಕರಿಸಲಾಗಿದೆ ಎಂದಿದ್ದಾರೆ

ಕೇರಳದ ತಿರುವನಂತಪುರಂ ನಲ್ಲಿ ನಟ ಮೋಹನ್ ಲಾಲ್ ಅವರ “ವಿಸ್ಮಯ” ಸ್ಟುಡಿಯೋದಲ್ಲಿ ಅಂಡರ್ ವಾಟರ್‍ನ ವಿಶೇಷ ಸೆಟ್ ನಿರ್ಮಿಸಿ ನಟಿ ಶ್ರತಿ ಅಭಿನಯಿಸಿದ ಭಾಗಗಳನ್ನು ನೀರಿನ ಅಡಿಯಲ್ಲಿ ಮಲಯಾಳಂ ಸಿನೆಮಾಟೋಗ್ರಾಫರ್ ಮನೋಜ್ ಪಿಳ್ಳೈ ನಾಲ್ಕು ಕ್ಯಾಮರ ಬಳಿಸಿ ಚಿತ್ರೀಕರಿಸಿಕೊಂಡಿದ್ದಾರೆ. ಕನ್ನಡದ ನಟಿಯೊಬ್ಬರು ಅಪಾಯಕಾರಿ ಅಂಡರ್ ವಾಟರ್ ನಲ್ಲಿ ಅಭಿನಯಿಸುತ್ತಿರುವುದು ಬಹುಷಃ ಇದೇ ಮೊದಲು ಎಂದು ಮಾಹಿತಿ ನೀಡಿದ್ದಾರೆ
ಚಿತ್ರದ ಸನ್ನಿನೇಶಕ್ಕಾಗಿ ಶ್ರತಿ ಸುಮಾರು 15ದಿನಗಳ ತಯಾರಿಯಲ್ಲಿದ್ದರು. ಸೆಟ್ ನಲ್ಲಿ ಸ್ಕ್ಯೂಬಾ ಡೈವರ್ಸ್ ಗಳನ್ನು ನಿಯೋಜಿಸಲಾಗಿತ್ತು. ಅಲ್ಲದೆ ಆಂಬ್ಯಲೆನ್ಸ್ ಮತ್ತು ವೈದ್ಯರ ತಂಡ ಕೂಡಾ ಸ್ಥಳದಲ್ಲಿ ಮೊಕ್ಕಾಂ ಹೂಡಿತ್ತು. ಸುಮಾರು 30ಅಡಿ ಎತ್ತರದಿಂದ ನೀರಿಗೆ ಜಿಗಿದು ಮತ್ತೆ ಹಾರಿ ಹೊರಬರುವ ಮೈ ನವಿರೇಳಿಸುವ ಅಪಾಯಕಾರಿ ಸ್ಟಂಟ್ ನಲ್ಲಿ ನಟಿ ಶ್ರತಿ ಸ್ವತಃ ಅಭಿನಯಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನೀರಿನೊಳಗೆ 22 ಸೆಕೆಂಡ್ ಗಳ ಕಾಲ ಯಾವುದೇ ಆಮ್ಲಜನಕದ ಸಹಾಯವಿಲ್ಲದೆ ಶ್ರತಿ ಅಭಿನಯಿಸಿದ್ದಾರೆ ಎಂದಿದ್ಧಾರೆ
ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿ ಮಾಹಿತಿ ನೀಡಿ ಚಿತ್ರದ ಬಜೆಟ್ ಸುಮಾರು 12 ಕೋಟಿ ರುಪಾಯಿಯಷ್ಟು ಏರಿಕೆಯಾಗಿದೆ ಎದಿದ್ಧಾರೆ


