ಮಹಿಳಾ ಪ್ರಧಾನ ಚಿತ್ರ “ಕ್ಯಾಲೆಂಡರ್” ಏಪ್ರಿಲ್ 3 ರಂದು ಬಿಡುಗಡೆ
ಕನ್ನಡದಲ್ಲಿ ಆಗಾಗ ಮಹಿಳಾ ಕೇಂದ್ರಿತ ವಿಷಯಗಳನ್ನು ಮುಂದಿಟ್ಟುಕೊಂಡು ಸಿನಿಮಾಗಳು ಬರುತ್ತಿವೆ, ಆ ಸಾಲಿಗೆ ಮತ್ತೊಂದು ಸೇರ್ಪಡೆ ನಟ ಆದರ್ಶ್ ಗುಂಡೂರಾವ್ ನಟನೆ, ನಿರ್ಮಾಣದ ” ಕ್ಯಾಲೆಂಡರ್ ” ಚಿತ್ರ. ಏಪ್ರಿಲ್ 3 ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ.

ನವೀನ್ ಶಕ್ರಿ ನಿರ್ದೇಶನದ ಚಿತ್ರದಲ್ಲಿ ಹಿರಿಯ ಕಲಾವಿದರಾದ ಮಾಲಾಶ್ರೀ, ಸುಚೇಂದ್ರ ಪ್ರಸಾದ್, ರಮೇಶ್ ಇಂದಿರಾ , ಪ್ರಮೋದ್ ಶೆಟ್ಟಿ, ಪ್ರಕಾಶ್ ತಮಿನಾಡು ಮತ್ತಿತರರು ಚಿತ್ರದಲ್ಲಿ ನಟಿಸಿದ್ದಾರೆ.
ಚಿತ್ರದ ಬಿಡುಗಡೆಗೆ ಸಜ್ಜಾಗಿರುವ ಹಿನ್ನೆಲೆಯಲ್ಲಿ ಟ್ರೈಲರ್ ಬಿಡುಗಡೆ ಆಯಿತು, ಈ ವೇಳೆ ಚಿತ್ರತಂಡ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡಿತು.
ನಟ,ನಿರ್ಮಾಪಕ ಆದರ್ಶ್ ಗುಂಡೂರಾವ್ ಮಾತನಾಡಿ ಮಹಿಳಾ ಕೇಂದ್ರಿಯ ಸಿನಿಮಾ, ಕನ್ನಡದ ಜೊತೆಗೆ ಹಿಂದಿಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ವಿಜಯ್ ಕಿರಂಗದೂರು ಅವರ ವಿಕೆ ಫಿಲ್ಮ್‍ಂ ವತಿಯಿಂದ ಚಿತ್ರ ವಿತರಣೆ ಮಾಡುತ್ತಿದ್ದಾರೆ. ಸುನಾದ್ ಗೌತಮ್ ಸಂಗೀತ ಚಿತ್ರಕ್ಕಿದೆ. ಎಲ್ಲಾ ಕಲಾವಿದರಿಗೆ ಕತೆ ಇಷ್ಟಪಟ್ಟು ಪ್ರೀತಿಯಿಂದ ನಟಿಸಿದ್ದಾರೆ. ಈ ರೀತಿ ಸಿನಿಮಾ ಕನ್ನಡದಲ್ಲಿ ಬಂದಿಲ್ಲ. ಎಲ್ಲರಿಗೂ ಇಷ್ಟವಾಗಲಿದೆ ಎಂದರು
ಸೆನ್ಸಾರ್ ಮಂಡಳಿಯ ಸೋಷಿಯಲ್ ಕೆಟಗರಿಯಲ್ಲಿ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿದೆ. ಮೊದಲು ಕನ್ನಡ, ಹಿಂದಿ ಆ ಬಳಿಕ ಚಿತ್ರದ ಪ್ರತಿಕ್ರಿಯೆ ನೋಡಿಕೊಂಡು ಬೇರೆ ಭಾಷೆಯಲ್ಲಿಯೂ ಬಿಡುಗಡೆ ಮಾಡುವ ಉದ್ದೇಶವಿದೆ, ಮೊದಲಿಗೆ ಸೀಮಿತ ಚಿತ್ರಂಮದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಉದ್ದೇಶವಿದೆ ಎಲ್ಲರ ಸಹಕಾರ ಮತ್ತು ಬೆಂಬಲ ಬೇಕು ಎಂದು ಕೇಳಿಕೊಂಡರು

ನಟಿ ಸುಶ್ಮಿತಾ ಮಾತನಾಡಿ ಕನ್ನಡದಲ್ಲಿ ಎರಡನೇ ಚಿತ್ರ. ನನ್ನ ಪಾತ್ರ ಆಗಾಗ ಮೈಂಡ್ ಆಫ್ ಆಗುತ್ತದೆ, ಅದು ಯಾಕೆ ಎನ್ನುವುದನ್ನು ಚಿತ್ರದಲ್ಲಿ ನೋಡಬೇಕು. ಪಾತ್ರ ಚೆನ್ನಾಗಿ ಮೂಡಿಬಂದಿದೆ ಸಹಕಾರ ಪ್ರೋತ್ಸಾಹ ಇರಲಿ ಎಂದರು,
ಸಹ ನಿರ್ಮಾಪಕ ಶಿವಪ್ರದೀಪ್ ಮಾತನಾಡಿ ಚಿತ್ರದ ಕಥೆ ಇಷ್ಟವಾಗಿ ನಿರ್ಮಾಣದಲ್ಲಿ ಕೈಜೋಡಿಸಿದ್ದೇನೆ, ಜೊತೆಗೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು
ನಿರ್ದೇಶಕ ನವೀನ್ ಶಕ್ತಿ ಮಾತನಾಡಿ ಮನೆ ಮನೆಯ ಕಥೆ, ಕ್ಯಾಲೆಂಡರ್ ಅಂದ ಮೇಲೆ ಯಾವ ದಿನಾಂಕ ಮುಖ್ಯ ಅನ್ನುವುದು ತಿಳಿಯಲಿದೆ. ಮನೆ ಮನೆಯಲ್ಲಿ ನಡೆಯುವ ಕಥೆ, ರಂಗಭೂಮಿಯಿಂದ ಬಂದವನು ಮೊದಲ ಚಿತ್ರ. 5 ಸಾವಿರಕ್ಕೂ ಹೆಚ್ಚು ಬೀದಿ ನಾಟಕ ಮಾಡಿದ್ದೇನೆ. ಮಾಲಾಶ್ರೀ ಅವರು ಆರೋಗ್ಯ ಸಚಿವರ ಪಾತ್ರ ಮಾಡಿದ್ದಾರೆ ಎಂದರು.

