” 6-5= 2 ಹಾಗು ದಿಯಾ ಚಿತ್ರಗಳ ಬಳಿಕ ಕೆ.ಎಸ್ ಅಶೋಕ ನಿರ್ದೇಶನದ ಹೊಸ ಚಿತ್ರದ ” ಪ್ರೆಂಡ್ಸ್ ಅಂಡ್ ಫ್ಯಾಮಿಲಿ” ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಿದ್ದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚು ಮಾಡಿದೆ.

ಹಾರರ್, ಲವ್ ಸ್ಟೋರಿ ಬಳಿಕ ಹಳ್ಳಿ ಹಿನ್ನೆಲೆಯಲ್ಲಿ ಮತ್ತೊಂದು ಕೌಟುಂಬಿಕ ಚಿತ್ರ ” ಫ್ರೆಂಡ್ಸ್ ಅಂಡ್ ಫ್ಯಾಮಿಲಿ”. ಚಿತ್ರ ಮುಂದಿನ ವರ್ಷ ಜನವರಿಯಲ್ಲಿ ತೆರೆಗೆ ಬರಲು ಸಜ್ಜಾಗಿದೆ.
2013 ರಲ್ಲಿ 6-5= 2 , 2020ರಲ್ಲಿ ದಿಯಾ ಬಿಡುಗಡೆಯಾಗಿತ್ತು ಈಗ 2027 ರಲ್ಲಿ ಹೊಸ ಚಿತ್ರ “ಪ್ರೆಂಡ್ಸ್ ಅಂಡ್ ಪ್ಯಾಮಿಲಿ” ಬಿಡುಗಡೆ ಆಗಲಿದೆ. ಪ್ರತಿ 7 ವರ್ಷಕ್ಕೊಮ್ಮೆ ಯಶಸ್ವಿ ಚಿತ್ರ ನೀಡಿದ ಅಶೋಕ ತಂಡ ಇದೀಗ ಮತ್ತೊಂದು ವಿಭಿನ್ನ ಚಿತ್ರದ ಶೀರ್ಷಿಕೆ ಮೂಲಕ ಜನರ ಗಮನ ಸೆಳೆದಿದ್ದಾರೆ
ಈ ಚಿತ್ರದಲ್ಲಿ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಮತ್ತು ದೀಕ್ಷಿತ್ ಶೆಟ್ಟಿ ಜೋಡಿ ಇಲ್ಲಿಯೂ ಮುಂದುವರಿದಿದೆ. ಜೊತೆಗೆ ದೀಪಿಕಾ, ಚಿತ್ಕಳಾ ಬಿರಾದಾರ್, ನಿವೀತ್ ಮತ್ತಿತರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಸದ್ದು ಗದ್ದಲವಿಲ್ಲದೆ ಚಿತ್ರ ” ಪ್ರೆಂಡ್ಸ್ ಅಂಡ್ ಫ್ಯಾಮಿಲಿ” ಚಿತ್ರೀಕರಣ ಪೂರ್ಣಗೊಳಿಸಿದ್ದು ಚಿತ್ರದ ತಂಡ ಶೀರ್ಷಿಕೆ ಅನಾವರಣ ಮಾಡಿದ್ದು ಚಿತ್ರದ ಮೇಲಿನ ನಿರೀಕ್ಷೆ ಮತ್ತು ಕುತೂಹಲ ಹೆಚ್ಚು ಮಾಡಿದೆ. ಚಿತ್ರಕ್ಕೆ ನಿರ್ಮಾಪಕ ಕೃಷ್ಣ ಚೈತನ್ಯ , ಮಧು ಗುರುಸ್ವಾಮಿ ಚಿತ್ರಕ್ಕೆ ಶುಭ ಹಾರೈಸಿದರು.
ನಿರ್ದೇಶಕ ಕೆ.ಎಸ್ ಅಶೋಕ ಮಾತನಾಡಿ ಸೊಸಿಯಲ್ ಡ್ರಾಮ, ಮೂರು ಪಾತ್ರಕ್ಕೂ ಎಮೋಷನ್ ಹಿನ್ನೆಲೆ ಇದೆ. ಸಿನಿಮಾ ನೋಡುವ ಮಂದಿಗೆ ಕನ್ನಡಿ ಥರ ಕಾಣುತ್ತೆ. ಅಂದುಕೊಂಡದಕ್ಕಿಂತ ಎಲ್ಲರೂ ಅದ್ಬುತವಾಗಿ ನಟಿಸಿದ್ದಾರೆ. ಮನಸ್ಸಿಗೆ ಮುಟ್ಟುವ ರೀತಿ ಇದೆ. ಎಡಿಟ್ ಮಾಡುವಾಗ ಪಾತ್ರಗಳನ್ನು ನೋಡಿ ನಕ್ಕಿದ್ದೇನೆ. 6-5= 2, ದಿಯಾ ಚಿತ್ರಕ್ಕಿಂತ ಉತ್ತಮ ಕಥೆ ಈ ಚಿತ್ರದಲ್ಲಿದೆ. ಎಲ್ಲರಿಗೂ ಚಿತ್ರ ಇಷ್ಟವಾಗಲಿದೆ ಎಂದರು.
ಇಡೀ ಸಿನಿಮಾಗೆ ಎಮೋಷನ್ ಕೇಂದ್ರ ಬಿಂಧು, ಹೊಸ ಕಥೆ ಏನೂ ಇಲ್ಲ ಇರುವ ಕಥೆಯನ್ನು ಹೊಸ ರೀತಿಯಲ್ಲಿ ತೋರಿಸಿದರೆ ಜನರಿಗೆ ಇಷ್ಟವಾಗಲಿದೆ. ನಮ್ಮ ಮನೆಯಲ್ಲಿ ನಡೆಯುವ ಘಟನೆ ಅನ್ನುವ ರೀತಿ ಚಿತ್ರ ಕಟ್ಟಿಕೊಡಲಾಗಿದೆ. ಮಂಡ್ಯ ಹಿನ್ನೆಲೆಯಲ್ಲಿ ನಡೆಯುವ ಕಥೆ. ಅಲ್ಲಿನ ಸೊಗಡಿನ ಕಥೆಯನ್ನು ಆಧರಿಸಿ ಚಿತ್ರ ಮಾಡಲಾಗಿದೆ. ಬೇರೆ ಬೇರೆ ಜಾನರ್ ಮಾಡುವ ಹಂಬಲ. ದೆವ್ವ ಅಥವಾ ಪ್ರೀತಿಯ ಸಿನಿಮಾ ಮಾಡಿದರೆ ಹಿಂದಿನ ಸಿನಿಮಾ ಥರನಾ ಕಾಣುತ್ತದೆ ಅದು ನನ್ನ ಲಿಮಿಟ್ ಅಷ್ಟೇ ಎಂದು ಹೇಳಿದರು
ನಟ ಪೃಥ್ವಿ ಅಂಬರ್ ಮಾತನಾಡಿ 2014 ರಲ್ಲಿ ಅಶೋಕ ಅವರನ್ನು ಭೇಟಿ ಮಾಡಿದ್ದೆ. 6-5 = 2 ಚಿತ್ರ ಬಿಡುಗಡೆ ಆದಾಗ ಅಶೋಕ ಅವರನ್ನು ಬೈದಿದ್ದೆ. ದಿಯಾ ಬಳಿಕ ಪ್ರೆಂಡ್ಸ್ ಅಂಡ್ ಪ್ಯಾಮಿಲಿ ಸೇರಿ ನಾಲ್ಕು ಚಿತ್ರ ಅವರ ಜೊತೆ ಕೆಲಸ ಮಾಡಿದ್ದೇನೆ ಎನ್ನುತ್ತಲೇ ಭಾವುಕರಾದರು
ಕಲಾವಿದರಿಗೆ ಇಂತಹ ನಿರ್ದೇಶಕರು ಸಿಕ್ಕರೆ ಲಕ್ಕಿ, ಸ್ಟಾರ್ ಕಲಾವಿದರಿಗೆ ಚಿತ್ರ ಮಾಡುವುದಕ್ಕಿಂತ ಹೆಚ್ಚಾಗಿ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುವ ಕಲಾವಿದರಿಗೆ ಚಿತ್ರ ಮಾಡಿದರೆ ಅವರಿಗೂ ಅನುಕೂಲವಾಗಲಿದೆ. ಚಿತ್ರ ಬಿಡುಗಡೆ ಆದ ನಂತರ ಚಿತ್ರದ ಮೇಲೆ ಚಿತ್ರದ ಬಗ್ಗೆ ಜನರು ಮಾತನಾಡುತ್ತಾರೆ ಎಂದು ಭವಿಷ್ಯ ನುಡಿದರು.
ನಟ ದೀಕ್ಷಿತ್ ಅದ್ಬುತ ಕಲಾವಿದ, ತೆಲುಗು ರೀತಿಯಲ್ಲಿ ಕನ್ನಡದಲ್ಲಿಯೂ ಬ್ಯುಸಿ ಆಗಬೇಕು. ಮತ್ತೊಬ್ಬ ಕಲಾವಿದ ನಿವಿತ್ ಅವರಿಗೂ ಒಳ್ಳೆಯದಾಗಲಿ, ಪ್ರೇಕ್ಷಕರ ನಾಡಿ ಮಿಡಿತ ಅರಿತು ನಿರ್ದೇಶಕರು ಚಿತ್ರವನ್ನು ಕಟ್ಟಿ ಕೊಟ್ಟಿದ್ದಾರೆ. ಮತ್ತೊಂದು ಮಾಸ್ಟರ್ ಪೀಸ್ ಚಿತ್ರವಾಗಲಿದೆ.ಒಳ್ಳೆಯ ನಿರ್ದೇಶಕರಿಗೆ ಒಳ್ಳೆಯ ನಿರ್ಮಾಪಕರು ಸಿಕ್ಕಿದ್ದಾರೆ ಎಂದರು.
ನಟ ದೀಕ್ಷಿತ್ ಶೆಟ್ಟಿ ಮಾತನಾಡಿ ಸ್ನೇಹಿತರು ಮತ್ತು ಕುಟುಂಬದವರು ಕುಳಿತು ನೋಡುವ ಚಿತ್ರ. ಮೂರು ಪಾತ್ರ ಎಲ್ಲರನ್ನೂ ಪ್ರತಿಬಿಂಬಿಸಲಿದೆ. ಸಿನಿಮಾದಲ್ಲಿರುವ ಕಥೆ ಎಲ್ಲಡೆ ಇದೆ. ಎಲ್ಲರಿಗೂ ಇಷ್ಟವಾಗಲಿದೆ. 2015 ರಲ್ಲಿ ಆಡಿಷನ್ ಗೆ ಹೋಗಿದ್ದೆ ಅಲ್ಲಿಂದ ನಿರ್ದೇಶಕ ಅಶೋಕ ಅವರ ಜೊತೆ ಸಂಬಂಧ. ಪ್ರತಿಯೊಂದು ಚಿತ್ರದಲ್ಲಿ ಕಥೆಗೆ ಆದ್ಯತೆ ನೀಡುತ್ತೇನೆ. ಪ್ರತಿಯೊಬ್ಬರೂ ಮುಖ್ಯ. ದಿಯಾ ಎಲ್ಲರಿಗೂ ಮೆಟ್ಟಿಲಾಗಿದೆ. ಕಥೆ, ಬರವಣೆಗೆ ಚೆನ್ನಾಗಿರಬೇಕು ಅಂದರೆ ಸಮಯ ಬೇಕಾಗುತ್ತದೆ .ನಾನು ಕುಂದಾಪುರದವ, ಪೃಥ್ಬಿ ಅಂಬಾರ್ ಮಂಗಳೂರಿನ, ನಾಬಿಬ್ಬರೂ ಸೇರಿ ಮಂಡ್ಯ ಭಾಷೆಯ ಸಿನಿಮಾ ಮಾಡಿದ್ದೇವೆ ಎಂದು ಹೇಳಿದರು.
ನಟ ನಿವೀತ್ ಮಾತನಾಡಿ ಅಂದುಕೊಂಡ ಪಾತ್ರಕ್ಕೆ ಸರಿ ಆಗಿದ್ದೀಯಾ ಹಾಗಾಗಿ ಆಯ್ಕೆ ಮಾಡಿಕೊಂಡಿದ್ದೇನೆ ಎಂದರು ಆದರೂ ಚಿತ್ರದಲ್ಲಿ ಇರುತ್ತೇನೆ ಇರಲ್ವಾ ಎನ್ನುವ ಆತಂಕ ಇತ್ತು. ಇದುವರೆಗೂ ಮಾಡಿದ ನಾಟಕ, ಸಿನಿಮಾ ಮಾಡಿರುವುದನ್ನು ಬಿಟ್ಟುಬಿಡು. ನಾನು ಏನು ಹೇಳ್ತೇನೆ ಅದನ್ನು ಮಾಡು ಎಂದು ಹೇಳಿದರು. ನಿರ್ದೇಶಕರು ಹೇಳಿದಂತೆ ನಟಿಸಿದ್ದೇನೆ ಮಂಡ್ಯದಲ್ಲಿ ಕೊರವ ಚಳಿಯಲ್ಲಿ ಚಿತ್ರೀಕರಣ ಮಾಡಿದ್ದೇನೆ ಎಂದರು
ನಿರ್ಮಾಪಕ ನವೀನ್ ಮಾತನಾಡಿ ನಿರ್ದೇಶಕ ಅಶೋಕ ಅವರ ಜೊತೆ 30 ವರ್ಷಗಳ ಪರಿಚಯ, ಹೊಸಬರಿಗೆ ಅವಕಾಶ ನೀಡಿದ್ದಾರೆ ಧನ್ಯವಾದ ಎಂದರು
ಸಂಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮಾತನಾಡಿ , ನಿರ್ದೇಶಕ ಅಶೋಕ ಮತ್ತು ನಾನು ಸ್ಲೋ ಆಗಿರುವುದರಿಂದ ಸ್ಟಡಿಯಾಗಿ ಕೆಲಸ ಮಾಡಿದ್ದೇವೆ. ನೈಜವಾಗಿ ಎಮೋಷನ್ ಕಟ್ಟಿಕೊಟ್ಟಿದ್ದಾರೆ. ಒಂದೊಂದು ಪಾತ್ರವೂ ಅದ್ಬುತವಾಗಿ ನಟಿಸಿದ್ದಾರೆ. ಎಮೋಷನ್ ಅನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ದಿಯಾ ಬಿಡುಗಡೆಯಾಗಿ ಒಂದು ವಾರದ ನಂತರ ಹಾಡು ಮಾಡಿದ್ದೇವೆ. ನಾವಿಬ್ಬರು ಅಷ್ಟು ನಿಧಾನ, ಒಂದೊಂದು ಹಾಡು ಸೆಲೆಕ್ಟ್ ಮಾಡಿದ್ದಾರೆ ಎಲ್ಲವೂ ಚೆನ್ನಾಗಿ ಬಂದಿದೆ ಎಂದು ಹೇಳಿದರು
ಹಿರಿಯ ಕಲಾವಿದೆ ಚಿತ್ಕಳಾ ಬಿರಾದಾರ್ ಮಾತನಾಡಿ ಪ್ರಮುಖ ಪಾತ್ರ. ನಿರ್ದೇಶಕ ಅಶೋಕ ಅವರ ಚಿತ್ರಗಳ ಅಭಿಮಾನಿ, ಖುಷಿ ಪಟ್ಟು ಮಾಡಿದ ಚಿತ್ರ. ವಿಭಿನ್ನ ಪಾತ್ರ ಮಾಡಿಸಿದ್ದಾರೆ. ಕಣ್ಣು ರೆಪ್ಪೆ ಬಡಿಯುವುದರಿಂದ ಹಿಡಿದು ಪ್ರತಿಯೊಂದು ಸನ್ನಿವೇಶವನ್ನು ನಿಖರವಾಗಿ ಮಾಡಿಸಿದ್ದಾರೆ. ನಿರ್ದೇಶಕ ಅಶೋಕ ಅವರ ಹ್ಯಾಟ್ರಿಕ್ ಹಿಟ್ ಚಿತ್ರ ಆಗಲಿದೆ ಎಂದರು
ಕಲಾವಿದ ಯತೀಶ್ ಎನ್ ಕೊಳ್ಳೆಗಾಲ ಮಾತನಾಡಿ ಒಳ್ಳೆಯ ಹಾಗು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಪ್ಯಾಮಿಲಿ ರೀತಿ ಚಿತ್ರೀಕರಣದಲ್ಲಿ ಇದ್ದೆವು ಎಂದು ಹೇಳಿದರು.
ದೀಪಿಕಾ ಮಾತನಾಡಿ ಚಿತ್ರದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆ.ಅನುಭವಿ ಕಲಾವಿದರ ಜೊತೆ ಕೆಲಸ ಮಾಡಿದ್ದೇನೆ. ಎಲ್ಲರಿಗೂ ಸಹಕಾರವಿರಲಿ ಎಂದರು







