ಆನಂದ್ ಆಡಿಯೋ ಸಂಸ್ಥೆಗೆ ಪ್ರತಿಷ್ಠಿತ ಡೈಮಂಡ್ ಬಟನ್ ಗೌರವ

ಕನ್ನಡದ ಪ್ರತಿಷ್ಠಿತ ಆನಂದ್ ಆಡಿಯೋ ಸಂಸ್ಥೆಗೆ ದೊರಕಿದೆ ಡೈಮಂಡ್ ಬಟನ್ .

ಕಳೆದ 24 ವರ್ಷಗಳಿಂದ ಶ್ರೋತೃಗಳಿಗೆ ಕನ್ನಡ ಚಿತ್ರಗಳ ಸುಮಧುರ ಹಾಡುಗಳನ್ನು ತಲುಪಿಸುತ್ತ ಬಂದಿರುವ
ಪ್ರತಿಷ್ಠಿತ ಆನಂದ್ ಆಡಿಯೋ ಸಂಸ್ಥೆಗೆ ಮುಂದಿನ ವರ್ಷ ರಜತ ವರ್ಷದ ಸಂಭ್ರಮ. ಈಗ ಆನಂದ್ ಆಡಿಯೋ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿ. ಆನಂದ್ ಆಡಿಯೋ ಯೂಟ್ಯೂಬ್ ಚಾನಲನ್ನು ಒಂದು ಕೋಟಿ ಜನರು ಸಬ್ ಸ್ಕ್ರೈಬ್ ಮಾಡಿಕೊಂಡಿದ್ದಾರೆ. ಹಾಗಾಗಿ ಯೂಟ್ಯೂಬ್ ಸಂಸ್ಥೆಯಿಂದ ಆನಂದ್ ಆಡಿಯೋ ಸಂಸ್ಥೆಗೆ ಡೈಮಂಡ್ ಬಟನ್ ಸಿಕ್ಕಿದೆ.

ಕನ್ನಡ ಚಿತ್ರರಂಗದಲ್ಲಿ ಆನಂದ್ ಆಡಿಯೋ, ಮುಂಚೂಣಿಯಲ್ಲಿರುವ ಆಡಿಯೋ ಕಂಪನಿಗಳಲ್ಲಿ ಒಂದು.
ನಿರ್ಮಾಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಕನ್ನಡ ಚಿತ್ರರಂಗಕ್ಕೆ ಸದಾಭಿರುಚಿಯ ಚಿತ್ರಗಳನ್ನು ನೀಡುವ ಜೊತೆಗೆ ನಿರ್ಮಾಪಕರನ್ನು ಕೈ ಹಿಡಿಯುವ ಕೆಲಸ ಮಾಡುವ ಮೂಲಕ ಪ್ರೋತ್ಸಾಹ ನೀಡುತ್ತಿದೆ.
ಹೊಸ ನಿರ್ಮಾಪಕರು ,ನಿರ್ದೇಶಕರು, ಹೊಸ ಕಲಾವಿದನಿರುವ ಚಿತ್ರಗಳಿಂದ ಹಿಡಿದು ಸ್ಟಾರ್ ನಟರ ಚಿತ್ರಗಳ ಆಡಿಯೋ ಹಕ್ಕನ್ನು ಖರೀದಿಸುವ ಮೂಲಕ ಚಿತ್ರ ತಂಡಗಳಿಗೆ ಕಳೆದ 24 ವರ್ಷಗಳಿಂದಲೂ ಬೆನ್ನೆಲುಬಾಗಿ ನಿಂತಿದೆ.
ಚಿತ್ರ ನಿರ್ಮಾಣ ಧಾರಾವಾಹಿ ನಿರ್ಮಾಣ ಸೇರಿದಂತೆ ವಿವಿಧ ನಿರ್ಮಾಣ ಗಳಲ್ಲಿ ಆನಂದ್ ಆಡಿಯೋ ಸಂಸ್ಥೆ ತೊಡಗಿಸಿ ಕೊಂಡಿದೆ. ಆನಂದ್ ಆಡಿಯೋ ಸಂಸ್ಥೆಯ ಮುಡಿಗೆ ಇದೀಗ ಮತ್ತೊಂದು ಹೆಮ್ಮೆಯ ಗರಿ ಮೂಡಿದೆ ಅದುವೇ ಡೈಮಂಡ್ ಬಟನ್.

ಆನಂದ್ ಆಡಿಯೋ ಸಂಸ್ಥೆ ಒಂದು ಕೋಟಿಗೂ ಅಧಿಕ ಚಂದದಾರರನ್ನು ಹೊಂದಿದೆ. ಇದಕ್ಕಾಗಿ ಯುಟ್ಯೂಬ್ ಸಂಸ್ಥೆ ಆನಂದ್ ಆಡಿಯೋ ಸಂಸ್ಥೆಗೆ ಗೌರವ ನೀಡಿದೆ. ದೇಶದಲ್ಲಿ ಈ ರೀತಿಯ ವಜ್ರದ ಬಟನ್ ಹೊಂದಿರುವ ಕೆಲವೇ ಕೆಲವು ಮಂದಿಯಲ್ಲಿ ಆನಂದ್ ಆಡಿಯೋ ಕೂಡ ಒಂದು ಎನ್ನುವುದು ಹೆಗ್ಗಳಿಕೆಯ ವಿಷಯ.
ಆನಂದ್ ಆಡಿಯೋ ಸಂಸ್ಥೆಯನ್ನು ಮೋಹನ್ ಛಾಬ್ರಿಯ ಹುಟ್ಟು ಹಾಕಿದ್ದರು. ಇದೀಗ ಅವರ ಸೋಹೋದರ ಶ್ಯಾಮ್ ಚಾಬ್ರಿಯ ಮತ್ತು ಮೋಹನ್ ಅವರ ಪುತ್ರ ಆನಂದ್ ಅವರು ಇದೀಗ ಆನಂದ್ ಆಡಿಯೋ ಜವಾಬ್ದಾರಿಯನ್ನು ವಹಿಸಿಕೊಂಡು ಯಶಸ್ವಿಯಾಗಿ ಮುನ್ನಡೆಸುತ್ತಾ ಬಂದಿದ್ದಾರೆ.
ವಜ್ರದ ಮಟನ್ ಸಿಕ್ಕಿರುವುದಕ್ಕೆಶ್ಯಾಮ್ ಚಾಬ್ರಿಯ ಮತ್ತು ಆದ್ ಛಾಬ್ರಿಯಾ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
“ಮೇ 24, ಆನಂದ್ ಆಡಿಯೋ ಮಾಲೀಕರಾದ ಮೋಹನ್ ಚಾಬ್ರಿಯಾ ಅವರ ಹುಟ್ಟುಹಬ್ಬ. ಅದೇ ದಿನ ಡೈಮಂಡ್ ಬಟನ್ ದೊರಕಿರುವುದು ಖುಷಿಯ ವಿಚಾರ. ಇದಕ್ಕೆ ಕಾರಣರಾದ ಕನ್ನಡ ಚಿತ್ರರಂಗದ ನಿರ್ಮಾಪಕರಿಗೆ, ನಿರ್ದೇಶಕರಿಗೆ, ಸಂಗೀತ ನಿರ್ದೇಶಕರಿಗೆ, ಗಾಯಕರಿಗೆ ಹಾಗೂ ಕನ್ನಡ ಕಲಾಭಿಮಾನಿಗಳಿಗೆ ಆನಂದ್ ಆಡಿಯೋ ಸಂಸ್ಥೆಯ ಶ್ಯಾಮ್ ಚಾಬ್ರಿಯಾ ಮತ್ತು ಆನಂದ್ ಚಾಬ್ರಿಯಾ ಧನ್ಯವಾದಗಳನ್ನು ತಿಳಿಸಿದ್ದಾರೆ