‘ಆರಾಮ್ ಅರವಿಂದ್ ಸ್ವಾಮಿ’…ಕಾಮಿಡಿ ಟ್ರೈಲರ್ ಬಿಡುಗಡೆ: ನವಂಬರ್ 22ಕ್ಕೆ ಚಿತ್ರ ತೆರೆಗೆ
ಅನೀಶ್ ತೇಜೇಶ್ವರ್ ನಟನೆಯ ಆರಾಮ್ ಅರವಿಂದ್ ಸ್ವಾಮಿ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಕಾಮಿಡಿ ಜೊತೆಗೆ ಎಮೋಷನ್, ಆಕ್ಷನ್ ಅಂಶಗಳನ್ನು ಬ್ಲೆಂಡ್ ಮಾಡಿ ಟ್ರೇಲರ್ ಕಟ್ ಮಾಡಲಾಗಿದೆ. 2 ನಿಮಿಷ 14 ಸೆಕೆಂಡ್ ಇರುವ ಆರಾಮ್ ಅರವಿಂದ್ ಸ್ವಾಮಿ ಟ್ರೇಲರ್ ಫುಲ್ ಫನ್ ಆಗಿ ಕೂಡಿದೆ.
ನೋಡೋಕ್ಕೆ ಫುಲ್ ಆರಾಮ್ ಆಗಿ ಇರುವ ಅರವಿಂದ್ ಸ್ವಾಮಿ ಲೈಫ್ ನಲ್ಲಿ ಬರೀ ಟೆನ್ಷನ್ ಗಳೇ ತುಂಬಿವೆ. ಪ್ರೀತಿ, ಮದುವೆ, ದುಡ್ಡ, ಫ್ಯಾಮಿಲಿ ಸುತ್ತ ಕಥೆ ಸಾಗುತ್ತಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಆರಾಮ್ ಅರವಿಂದ್ ಸ್ವಾಮಿ ಪಕ್ಕ ಫ್ಯಾಮಿಲಿ ಎಂಟರ್ ಟೈನರ್ ಸಿನಿಮಾ..
ಆರಾಮ್ ಅರವಿಂದ್ ಸ್ವಾಮಿ ಝಲಕ್ ,ನಟ ಅನೀಶ್‍ಗೆ ಬ್ರೇಕ್ ನೀಡುವ ಎಲ್ಲಾ ಲಕ್ಷಣ ಕಾಣ್ತಿದೆ. ಮಿಲನಾ ನಾಗರಾಜ್, ಹೃತಿಕಾ ಶ್ರೀನಿವಾಸ್ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ವೈವಿಬಿ ಶಿವಸಾಗರ್ ಕ್ಯಾಮರಾವರ್ಕ್, ಉಮೇಶ್ ಆರ್.ಬಿ ಸಂಕಲನ ಮಾಡಿದ್ದಾರೆ. ಶ್ರೀಕಾಂತ್ ಪ್ರಸನ್ನ ಹಾಗೂ ಪ್ರಶಾಂತ್ ರೆಡ್ಡಿ ಚಿತ್ರಕ್ಕೆ ದುಡ್ಡುಹಾಕಿದ್ದಾರೆ. ನಮ್ ಗಣಿ ಬಿಕಾಂ ಪಾಸ್',
ಗಜಾನನ ಆಂಡ್ ಗ್ಯಾಂಗ್’ ಚಿತ್ರಗಳ ಮೂಲಕ ಭರವಸೆ ಮೂಡಿಸಿರುವ ನಿರ್ದೇಶಕ ಅಭಿಷೇಕ್ ಶೆಟ್ಟಿ ಆ?ಯಕ್ಷನ್ ಕಟ್ ಹೇಳಿರುವ ಮೂರನೇ ಚಿತ್ರ ಇದಾಗಿದ್ದು, ಇದೇ ತಿಂಗಳ 22ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ
ಟಿಕೆಟ್ ಆಫರ್
ಆರಾಮ್ ಅರವಿಂದ್ ಸ್ವಾಮಿ ಚಿತ್ರ ಇದೇ ತಿಂಗಳು 22 ರಂದು ರಿಲೀಸ್ ಆಗುತ್ತಿದೆ. ನವೆಂಬರ್ 22 ರಂದು ಎಲ್ಲೆಡೆ ಬರ್ತಿರೋ ಈ ಚಿತ್ರದ ಟಿಕೆಟ್ ಕೇವಲ 99 ರೂಪಾಯಿ ಆಗಿದೆ. ಆದರೆ ಈ ಒಂದು ಆಫರ್ ಸಿನಿಮಾ ಥಿಯೇಟರ್‍ನಲ್ಲಿರೋವರೆಗೂ ಇರೋದಿಲ್ಲ ಬಿಡಿ. ಆದರೆ, ಮೂರು ದಿನ ಇರೋದಂತೂ ಗ್ಯಾರಂಟಿ ನೋಡಿ. ಅಂದರೆ ಸಿನಿಮಾ ರಿಲೀಸ್ ಆದ ಮೂರು ದಿನ ಮಾತ್ರ ಈ ಒಂದು ಆಫರ್ ಇರುತ್ತದೆ. ಆ ಮೇಲೆ ಎಂದಿನಂತೆ ಟಿಕೆಟ್ ದರ ಇರಲಿದೆ.