Actor Darling Krishna releases the title of his script-based film 'Neelavanthi'

ಗ್ರಂಥಾಧಾರಿತ ‘ನೀಲವಂತಿ’ ಶೀರ್ಷಿಕೆ ಬಿಡುಗಡೆ ಮಾಡಿದ ನಟ ಡಾರ್ಲಿಂಗ್ ಕೃಷ್ಣ - CineNewsKannada.com

ಗ್ರಂಥಾಧಾರಿತ ‘ನೀಲವಂತಿ’ ಶೀರ್ಷಿಕೆ ಬಿಡುಗಡೆ ಮಾಡಿದ ನಟ ಡಾರ್ಲಿಂಗ್ ಕೃಷ್ಣ

ಆಕ್ಷನ್, ಲವ್ ಸ್ಟೋರಿ, ಕ್ರೈಮ್-ಥಿಲ್ಲರ್ ಕಥೆಯಾಧಾರಿತ ಸಿನಿಮಾಗಳೇ ಹೆಚ್ಚು ನಿರ್ಮಾಣವಾಗುತ್ತಿದೆ. ಇದರ ಮಧ್ಯೆ ನೀಲವಂತಿ ಎಂಬ ಗ್ರಂಥ ಆಧರಿಸಿ ಅದೇ ಹೆಸರಿನಲ್ಲಿ ನೀಲವಂತಿ ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿದೆ. ಚಿತ್ರದ ಟೈಟಲ್ ಬಿಡುಗಡೆಯಾಗಿದ್ದು ನಟ ಡಾರ್ಲಿಂಗ್ ಕೃಷ್ಣ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ

ಹಾರರ್ ಜೊತೆ ಫ್ಯಾಂಟಸಿ ಕಥೆಯ ಆಧರಿತ ನೀಲವಂತಿ ಚಿತ್ರ ಚಿತ್ರೀಕರಣ ಈಗಾಗಲೇ ಶೇಕಡಾ 30ರಷ್ಟು ಚಿತ್ರೀಕರಣ ಮುಗಿದಿದೆ. ಎರಡನೇ ಹಂತದ ಚಿತ್ರೀಕರಣವನ್ನು ಸಕಲೇಶಪುರ, ಕಳಸ ಸುತ್ತಮುತ್ತ ಚಿತ್ರೀಕರಿಸಲು ಚಿತ್ರತಂಡ ಸಜ್ಜಾಗಿದೆ.

ಈ ವೇಳೆ ಮಾತನಾಡಿದ ನಟ ಡಾರ್ಲಿಂಗ್ ಕೃಷ್ಣ ಮಾತನಾಡಿ, ಟೈಟಲ್ ಆಗಿರಲಿ. ಪುಸ್ತಕದ ಬಗ್ಗೆ ಹೇಳಿರುವುದು. ಹಾಗೇಯೇ ಅದಕ್ಕೆ ಹಾರರ್ ಟಚ್ ಕೊಟ್ಟಿರುವುದು ನೋಡಿದರೆ ಬಹಳ ಅದ್ಭುತವಾಗಿ ಮಾಡಿದ್ದಾರೆ ಅನ್ನುವುದು ಗೊತ್ತಾಗುತ್ತಿದೆ. ನನಗೆ ಹಾರರ್ ಸಬ್ಜೆಕ್ಟ್ ಇಷ್ಟ. ಸಿನಿಮಾ ತುಂಬಾ ಡಿಮ್ಯಾಂಡ್ ಮಾಡುತ್ತದೆ. ಮೇಕಿಂಗ್ , ಬಜೆಟ್ , ಎಕ್ಸಿಬ್ಯೂಷನ್ ಇರಬಹುದು. ತುಂಬಾ ಡಿಮ್ಯಾಂಡ್ ಮಾಡುವ ಸಬ್ಜೆಕ್ಟ್. ಈಗಾಗಲೇ ಚಿತ್ರೀಕರಣ ಶುರುವಾಗಿದೆ. ಚಿತ್ರ ತುಂಬಾ ಶ್ರಮ ಕೇಳುತ್ತದೆ. ಅದರಂತೆ ಶ್ರಮ ಹಾಕಿ ಮಾಡಿ. ಇದು ಕನ್ನಡಕ್ಕೆ ಬೇರೆ ರೀತಿಯ ಸಿನಿಮಾವಾಗುತ್ತದೆ. ಇಡೀ ತಂಡಕ್ಕೆ ಒಳ್ಳೆಯದು ಆಗಲಿ ಎಂದರು.

ನಾಯಕ ಕರಣ್ ಆರ್ಯನ್ ಮಾತನಾಡಿ, ಒಂದಷ್ಟು ಸಿನಿಮಾಗಳಲ್ಲಿ ಖಳನಾಯಕನಾಗಿ ನಟಿಸುತ್ತಿದ್ದೆ. ಮೊದಲು ಹಾರರ್ ಚಿತ್ರದ ಮೂಲಕವೇ ಇಂಡಸ್ಟ್ರೀಗೆ ಬಂದಿದ್ದು. ಆದರೆ ಅಷ್ಟು ಸಕ್ಸಸ್ ಸಿಗಲಿಲ್ಲ. ಹೀಗಾಗಿ ಖಳನಾಯಕನಾಗಿ ಸಿನಿಮಾ ಮಾಡೋಣಾ. ಬಳಿಕ ಹೀರೋ ಆಗಬೇಕು ಎಂದುಕೊಂಡಿದ್ದೆ. ಒಂದಷ್ಟು ದೊಡ್ಡ ದೊಡ್ಡ ಪೆÇ್ರಡಕ್ಷನ್ ನಲ್ಲಿ ವಿಲನ್ ಆಗಿ ನಟಿಸಿದ್ದೇನೆ. ಈಗ ಹೀರೋ ಆಗಿ ಲವ್ ಹಾಗೂ ಮಾಸ್ ಸಬ್ಜೆಕ್ಟ್ ಮಾಡುತ್ತಿದ್ದೇನೆ. ನೀಲವಂತಿ ಹಾರರ್ ಸಿನಿಮಾ. ಕಥೆ ಬಹಳ ವಿಭಿನ್ನ ಎನಿಸಿತು. ಇದು ನೈಜ ಘಟನೆಯಾಧಾರಿತ ಚಿತ್ರ. ಯಾರು ಟಚ್ ಮಾಡದ ಕಥೆಯನ್ನು ಟಚ್ ಮಾಡಿದ್ದೇವೆ. ರಿಸ್ಕ್ ಇಲ್ಲದೇ ಯಾವುದು ಆಗಲ್ಲ ಅಂತರಲ್ಲ. ಹಾಗೇ ನಾವು ರಿಸ್ಕ್ ತೆಗೆದುಕೊಂಡು ಈ ಚಿತ್ರ ಮಾಡಿದ್ದೇವೆ ಎಂದರು.

ನಿರ್ದೇಶಕ ಶ್ರೀಮುರಳಿ ಪ್ರಸಾದ್ ಮಾತನಾಡಿ, ನೀಲವಂತಿ ಸಿನಿಮಾ ಟಾಕ್ ಕ್ರಿಯೇಟ್ ಮಾಡಲಿದೆ ಎಂಬ ಭರವಸೆ ಇದೆ. ತಂತ್ರಜ್ಞನರನ್ನು ಹೊರಗಡೆ ಕರೆಸಿ ಮಾಡಿಸುತ್ತಿದ್ದೇವೆ. ನನ್ನ ಸ್ನೇಹಿತ ಕಥೆ ಇಷ್ಟಪಟ್ಟು ಚಿತ್ರ ನಿರ್ಮಾಣ ಮಾಡಿದ್ದಾರೆ. ನೀಲವಂತಿ ಅನ್ನೋದು ಒಂದು ಗ್ರಂಥ. ಅದನ್ನು ಇಟ್ಕೊಂಡು ಫಿಕ್ಷನಲ್ ಸಿನಿಮಾ ಮಾಡುತ್ತಿರುವುದಾಗಿ ತಿಳಿಸಿದರು.

ನೀಲವಂತಿ ಸಿನಿಮಾವನ್ನು ಶ್ರೀಮುರಳಿ ಪ್ರಸಾದ್ ನಿರ್ದೇಶನ ಮಾಡುತ್ತಿದ್ದಾರೆ. ಒಂದಷ್ಟು ಚಿತ್ರಗಳಲ್ಲಿ ಅಸೋಸಿಯೇಟ್ ಹಾಗೂ ಕೋ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಅವರೀಗ ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ.

ಮಲಯಾಳಂ ನಟಿ ಮೋಕ್ಷಾ ಬಹಳ ಇಷ್ಟಪಟ್ಟು ಈ ಕಥೆ ಒಪ್ಪಿಕೊಂಡಿದ್ದಾರೆ. ಇಲ್ಲಿ ಕರಣ್ ಗೆ ಜೋಡಿಯಾಗಿ ಅವರು ನಟಿಸುತ್ತಿದ್ದಾರೆ. ಉಳಿದಂತೆ ಕಾರ್ತಿಕ್ ಸುಂದರಂ, ದೀಪಿಕಾ ಕೆಟಿ, ಕಾವ್ಯ ಗೌಡ, ವಿರಾಟ್, ಭಾರ್ಗವ್, ಭಾಸ್ಕರ್ ಗೌಡ, ಆನಂದ ಕೆಂಗೇರಿ , ವಂಶಿ ಗೌಡ, ಕ್ಯಾಂಡಿ ದಾಸ್, ಧನಿ ಬೋಸ್ ತಾರಾಬಳಗದಲ್ಲಿದ್ದಾರೆ.

ಕೋಗರ ಸಿನಿ ಕ್ರಿಯೇಷನ್ ಬ್ಯಾನರ್ ನಡಿ ಮುಕುಂದ್ ಕೋಗರ ನೀಲವಂತಿ ನಿರ್ಮಾಣ ಮಾಡುತ್ತಿದ್ದಾರೆ. ಗಗನ್ ಗೌಡ ಕ್ಯಾಮೆರಾ ಹಿಡಿಯುವುದರ ಜೊತೆಗೆ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆಕಾಶ್ ಸಂಕಲನವಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin