Actor Dhananjaya worships wedding invitation in the presence of Srikantha

ಶ್ರೀಕಂಠನ ಸನ್ನಿಧಿಯಲ್ಲಿ ಮದುವೆ ಆಹ್ವಾನ ಪತ್ರಿಕೆಗೆ ನಟ ಧನಂಜಯ ಪೂಜೆ - CineNewsKannada.com

ಶ್ರೀಕಂಠನ ಸನ್ನಿಧಿಯಲ್ಲಿ ಮದುವೆ ಆಹ್ವಾನ ಪತ್ರಿಕೆಗೆ ನಟ ಧನಂಜಯ ಪೂಜೆ

ಕನ್ನಡ ಚಿತ್ರರಂಗದ ನಟ, ನಿರ್ಮಾಪಕ ಡಾಲಿ ಧನಂಜಯ ಅವರು ಮುಂದಿನ ತಿಂಗಳು ವೈದ್ಯೆ ಧನ್ಯತಾ ಅವರನ್ನು ವರಿಸಲಿರುವ ಹಿನ್ನೆಲೆಯಲ್ಲಿ ನಂಜನಗೂಡಿನ ಶ್ರೀಕಂಠೇಶ್ವರನ ಸನ್ನಿಧಿಯಲ್ಲಿ ಆಹ್ವಾನ ಪತ್ರಿಕೆ ಇಟ್ಟು ಪೂಜೆ ಸಲ್ಲಿಸಿದರು.

ಈ ವೇಳೆ ನಟ ಡಾಲಿ ಧನಂಜಯಗೆ ಶಾಸಕ ದರ್ಶನ್ ಧ್ರುವನಾರಾಯಣ್ ಸಾಥ್ ನೀಡಿದ್ದರು. ದೇವಸ್ಥಾನ ಅರ್ಚಕರು ಸಿಬ್ಬಂದಿಗೆ ಮದುವೆಗೆ ಆಹ್ವಾನಿಸಿದ ಡಾಲಿ ಧನಂಜಯ ದಾಸೋಹ ಭವನದಲ್ಲಿ ಪ್ರಸಾದ ಸ್ವೀಕರಿಸಿದರು.

ಮೈಸೂರಿನ ವಿವಿಧ ಗಣ್ಯರು ಸ್ನೇಹಿತರಿಗೆ ಮದುವೆ ಆಹ್ವಾನ ಪತ್ರಿಕೆಯನ್ನು ಡಾಲಿ ಧನಂಜಯ್ ನೀಡಲಿದ್ದಾರೆ. ಮೈಸೂರಿನಲ್ಲಿ ವ್ಯಾಸಂಗ ಮಾಡಿದ ಹಿನ್ನೆಲೆಯಲ್ಲಿ ಸ್ನೇಹಿತರು ಆಪ್ತ ಬಳಗ ಹೆಚ್ಚಿನ ಸಂಖ್ಯೆಯಲ್ಲಿದೆ

ಈಗಾಗಲೇ ನಾಡಿನ ವಿವಿಧ ಮಠಾದೀಶರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಮತ್ತು ಚಿತ್ರರಂಗದ ಪ್ರಮುಖರು ಸೇರಿದಂತೆ ಹಲವರನ್ನು ಮದುವೆಗೆ ಆಹ್ವಾನಿಸಿದ್ದಾರೆ.

ಫೆಬ್ರವರಿ 15 ಮತ್ತು 16 ರಂದು ಡಾಲಿ ಧನಂಜಯ ಮತ್ತು ಧನ್ಯತಾ ಅವರ ವಿವಾಹ ಮೈಸೂರಿನ ಪ್ರದರ್ಶನ ಮೈದಾನದಲ್ಲಿ ನಡೆಯಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin