ವಜ್ರಮುನಿ ‘ಲುಕ್’ನಲ್ಲಿ “ಲಕ್” ಕಂಡುಕೊಳ್ಳಲು ಮುಂದಾದ ನಟ ಕೋಮಲ್

ಕನ್ನಡ ಚಿತ್ರರಂಗ ಕಂಡ ಅಪರೂಪದ ಖಳನಟ, ಕಂಚಿನ ಕಂಠದ ಕಲಾವಿದ ಕಣ್ಣಲ್ಲೇ ಅಭಿನಯ ಮಾಡಿ ಅಭಿಮಾನಿಗಳ ಮನಸೂರೆಗೊಂಡವರು. ಅದರಲ್ಲಿಯೂ ಅವರ ನಗು,ನಟನೆಗೆ ಮಾರು ಹೋಗದ ಸಿನಿ ರಸಿಕರಿಲ್ಲ.
ಇದೀಗ ಮತ್ತೊಮ್ಮೆ ಬೆಳ್ಳಿತೆರೆಯ ಮೇಲೆ ವಜ್ರಮುನಿ ಬರುತ್ತಿದ್ದಾರೆ. ಅದು ನಟ ಕೋಮಲ್ ಮೂಲಕ. ನಟ ಕೋಮಲ್ ಲುಕ್ ನೋಡಿದರೆ ವಜ್ರಮುನಿ ಇಲ್ಲೇ ಇದ್ದಾರೆ ಅನ್ನುವ ಮಟ್ಟಿಗೆ ನೈಜವಾಗಿ ಮೂಡಿಬಂದಿದೆ. ಈ ಮೂಲಕ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಹೆಚ್ಚು ಮಾಡಿದೆ.

ಸೌಂದರ್ಯ ಸಿನಿ ಕಂಬೈನ್ಸ್ ಹಾಗೂ ನರಸಿಂಹ ಸಿನಿಮಾಸ್ ಲಾಂಛನದಲ್ಲಿ ಅನುಸೂಯ ಕೋಮಲ್ ಕುಮಾರ್, ಸಹನ ಮೂರ್ತಿ ನಿರ್ಮಿಸಿರುವ, ಹೊಸ ಪ್ರತಿಭೆ ಎನ್.ಆರ್ ಪ್ರದೀಪ್ ಕಥೆ, ಚಿತ್ರಕಥೆ, ಸಾಹಿತ್ಯ,ಸಂಭಾಷಣೆ ಬರೆದು ನಿರ್ದೇಶಿಸಿರುವ ಹಾಗೂ ಕೋಮಲ್ ಕುಮಾರ್ ನಾಯಕರಾಗಿ ನಟಿಸಿರುವ “ಯಲಾಕುನ್ನಿ” ಚಿತ್ರದ ಟೀಸರ್ ಬಿಡುಗಡೆಯಾಗಿ ಗಮನ ಸೆಳೆದಿದೆ.

ಕೋಮಲ್ ಕುಮಾರ್ ಸ್ಟುಡಿಯೋಸ್ ಯೂಟ್ಯೂಬ್ ಚಾನಲ್ ನಲ್ಲಿ ಈ ಚಿತ್ರದ ಟೀಸರ್ ಲಭ್ಯವಿದೆ. ಟೀಸರ್‍ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದ್ದು, ಕೋಮಲ್ ಕುಮಾರ್ ಅವರ ವಜ್ರಮುನಿ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಯಲಾ ಕುನ್ನಿ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. “ಯಲಾಕುನ್ನಿ” ಚಿತ್ರಕ್ಕೆ ‘ಮೇರಾ ನಾಮ್ ವಜ್ರಮುನಿ’ ಎಂಬ ಅಡಿಬರಹವಿದೆ. ಚಿತ್ರ ಮೂಲಕ ನಟ ಕೋಮಲ್ ಕುಮಾರ್ ಹೊಸ ಲುಕ್‍ನಲ್ಲಿ ಲಕ್ ಕಂಡುಕೊಳ್ಳಲು ಮುಂದಾಗಿದ್ಧಾರೆ