ಸೈಮಾ ಪ್ರಶಸ್ತಿ, ‘ಕಾಟೇರ’, ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಕ್ಕೆ ಸಿಂಹಪಾಲು: ಶಿವಣ್ಣನಿಗೆ ವರ್ಷದ ಮನರಂಜನೆ ನಟ ಪ್ರಶಸ್ತಿ

ದಕ್ಷಿಣ ಭಾರತೀಯ ಚಿತ್ರಗಳನ್ನು ಪ್ರೋತ್ಸಾಹಿಸಲು ಆರಂಭಿಸಿರುವ ಸೈಮಾ ಪ್ರಶಸ್ತಿ ವಿಭಾಗದಲ್ಲಿ ಕನ್ನಡ ಚಿತ್ರರಂಗದಿಂದ ನಟ ದರ್ಶನ್ ಅಭಿನಯದ “ಕಾಟೇರ” ಮತ್ತು ನಟ ರಕ್ಷಿತ್ ಶೆಟ್ಟಿ ಅಭಿನಯದ “ಸಪ್ತ ಸಾಗರದಾಚೆ ಎಲ್ಲೋ” ಚಿತ್ರಗಳು ಪ್ರಶಸ್ತಿಯಲ್ಲಿ ಸಿಂಹಪಾಲು ಪಡೆದಿವೆ. ಇದರ ಜೊತೆಗೆ ಹಿರಿಯ ನಟ ಶಿವರಾಜ್ ಕುಮಾರ್ ಅವರಿಗೆ ವರ್ಷದ ಮನರಂಜನೆಯ ನಟ ಎನ್ನುವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕನ್ನಡದ ಯಾವಾವ ಚಿತ್ರಗಳಿಗೆ ಯಾವಾವ ಪ್ರಶಸ್ತಿ ಬಂದಿದೆ ಎನ್ನುವ ಮಾಹಿತಿ ಇಲ್ಲಿದೆ
• ವರ್ಷದ ಮನರಂಜನೆ – ಹಿರಿ ನಟ ಶಿವರಾಜಕುಮಾರ್

• ಅತ್ಯುತ್ತಮ ಚಲನಚಿತ್ರ – ಕಾಟೇರ -ರಾಕ್‍ಲೈನ್ ಎಂಟರ್‍ಟೈನ್‍ಮೆಂಟ್ಸ್ – ರಾಕ್‍ಲೈನ್ ವೆಂಕಟೇಶ್
• ಚೊಚ್ಚಲ ನಟಿ – ಆರಾಧನಾ ರಾಮ್ –ಕಾಟೇರ
• ಹಿನ್ನೆಲೆ ಗಾಯಕಿ – ಮಂಗ್ಲಿ ‘ಪಸಂದಾಗವ್ನೆ” ಕಾಟೇರ
• ಸಂಗೀತ ನಿರ್ದೇಶಕ – ವಿ ಹರಿಕೃಷ್ಣ -ಕಾಟೇರ
• ಸಾಹಿತ್ಯ ಲೇಖಕ – ಧನಂಜಯ್ ರಂಜನ್ -ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಟೈಟಲ್ ಟ್ರ್ಯಾಕ್
• ಹಿನ್ನೆಲೆ ಗಾಯಕ -ಕಪಿಲ್ ಕಪಿಲನ್ -ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಶೀರ್ಷಿಕೆ ಟ್ರ್ಯಾಕ್
• ನೆಗೆಟಿವ್ ಲೀಡ್ – ರಮೇಶ್ ಇಂದಿರಾ -ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ
• ಅತ್ಯುತ್ತಮ ನಟಿ -ಜನಪ್ರಿಯ ಆಯ್ಕೆ – ರುಕ್ಮಿಣಿ ವಸಂತ್ -ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ
• ಅತ್ಯುತ್ತಮ ನಟ -ಜನಪ್ರಿಯ ಆಯ್ಕೆ – ರಕ್ಷಿತ್ ಶೆಟ್ಟಿ -ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ
• ಅತ್ಯುತ್ತಮ ನಿರ್ದೇಶಕ – ಹೇಮಂತ್ ರಾವ್ -ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ
• ಅತ್ಯುತ್ತಮ ನಟ -ವಿಮರ್ಶಕರ ಆಯ್ಕೆ – ಡಾಲಿ ಧನಂಜಯ -ಗುರುದೇವ್ ಹೊಯ್ಸಳ
• ಚೊಚ್ಚಲ ನಿರ್ದೇಶಕ – ನಿತಿನ್ ಕೃಷ್ಣಮೂರ್ತಿ -ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ
• ಹಾಸ್ಯ ನಾಯಕ – ಅನಿರುದ್ಧ್ ಆಚಾರ್ಯ -ಆಚಾರ್ ಅಂಡ್ ಕೋ
• ಚೊಚ್ಚಲ ನಟ – ಶಿಶಿರ್ ಬೈಕಾಡಿ -ಡೇರ್‍ಡೆವಿಲ್ ಮುಸ್ತಫಾ
• ಭರವಸೆಯ ನಟಿ – ವೃಷಾ ಪಾಟೀಲ್ – ಲವ್
• ಚೊಚ್ಚಲ ನಿರ್ಮಾಪಕ – ಅಭುವನಸ ಕ್ರಿಯೇಷನ್ಸ್ -ಕೈವ ಚಿತ್ರ
• ಛಾಯಾಗ್ರಾಹಕ – ಶ್ವೇತ್ ಪ್ರಿಯಾ ನಾಯಕ್ – ಕೈವಾ ಚಿತ್ರ
• ಉದಯೋನ್ಮುಖ ನಿರ್ಮಾಪಕ – ಪಿಬಿ ಸ್ಟುಡಿಯೋಸ್ ಮತ್ತು ಅನ್ವಿತ್ ಸಿನಿಮಾಸ್ -ತತ್ಸಮ ತದ್ಭವ
• ಅತ್ಯುತ್ತಮ ಪೋಷಕ ನಟ – ನವೀನ್ ಶಂಕರ್ -ಹೊಂದಿಸಿ ಬರೆಯಿರಿ
• ಅತ್ಯುತ್ತಮ ಪೋಷಕ ನಟಿ – ಸಂಯುಕ್ತಾ ಹೊರನಾಡು -ಟೋಬಿ
• ಅತ್ಯುತ್ತಮ ನಟಿ -ವಿಮರ್ಶಕರ ಆಯ್ಕೆ – ಚೈತ್ರಾ ಜೆ ಆಚಾರ್ -ಟೋಬಿ