ಧೀರ ಭಗತ್ ರಾಯ್ ” ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ನಟ ವಿಜಯ್ ಕುಮಾರ್: ಚಿತ್ರತಂಡಕ್ಕೆ ಭೀಮಬಲ
ಹೊಸ ನಿರ್ದೇಶಕ, ಹೊಸ ನಾಯಕ. ಹೊಸ ನಿರ್ಮಾಣ ಸಂಸ್ಥೆಗಳಿಗೆ ಚಿತ್ರರಂಗದಲ್ಲಿ ಬೆಂಬಲ ಸಿಗುವುದು ತೀರಾ ಅಪರೂಪ. ಅಂತಹುದರಲ್ಲಿ “ಧೀರ ಭಗತ್ ರಾಯ್ ” ಚಿತ್ರದ ಕಂಟೆಂಟ್ ನೋಡಿ ಮನಸಾರೆ ಮೆಚ್ಚಿ ನಿಮ್ಮ ಜೊತೆ ನಾನಿದ್ದೇನೆ ಎಂದು ಸ್ಯಾಂಡಲ್ ವುಡ್ ಸಲಗ ವಿಜಯ್ ಕುಮಾರ್ ಅಭಯ ನೀಡಿರುವುದು ಹೊಸ ತಂಡದಲ್ಲಿ “ಭೀಮ ಬಲ” ಬಂದಿದೆ.
ಚಿತ್ರದ ಮೂಲಕ ರಾಕೇಶ್ ದಳವಾಯಿ ಚಿತ್ರರಂಗಕ್ಕೆ ನಾಯಕನಟಾಗಿ ಪರಿಚಯವಾಗಿತ್ತಿದ್ದು ನಾಯಕಿಯಾಗಿ ಸುಚಾರಿತಾ ಕಾಣಿಸಿಕೊಂಡಿದ್ದಾರೆ. ಕರ್ಣನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವ “ಧೀರ ಭಗತ್ ರಾಯ್ ” ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ವಿಜಯ್ ಕುಮಾರ್ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಈ ಮೂಲಕ ಹೊಸ ತಂಡಕ್ಕೆ ಹೊಸ ಹುರುಪು ಮೂಡಿಸಿದೆ.
ಟ್ರೈಲರ್ ಬಿಡುಗಡೆಗೆ ಮಾಜಿ ಸಚಿವ ಎಚ್. ಆಂಜನೇಯ, ಹೋರಾಟಗಾರ ಭಾಸ್ಕರ್ ಪ್ರಸಾದ್ ಸೇರಿದಂತೆ ಚಿತ್ರತಂಡ ಜೊತೆಯಾಗಿ ಹೋರಾಟದ ಕಥೆಗಳ ಸಿನಿಮಾಗಳು ಹೆಚ್ಚಿನ ಸಂಖ್ಯೆಯಲ್ಲಿ ಬರಲಿ ಎಂದು ಶುಭ ಹಾರೈಸಿದ್ದಾರೆ.
ಟ್ರೈಲರ್ ಬಿಡುಗಡೆ ಮಾಡಿ ಮಾತನಾಡಿದ ನಟ,ನಿರ್ದೇಶಕ ದುನಿಯಾ ವಿಜಯ್ ,ಧೀರ ಭಗತ್ ರಾಯ್” ಸಮಾನತೆಗೆ ಒತ್ತು ಕೊಡುವ ಚಿತ್ರ. ,ಈ ತರಹದ ಚಿತ್ರಗಳಿಗೆ ಬೆಂಬಲ ನೀಡುವುದು ತುಂಬಾ ಇಷ್ಟ. ಸಮಾನತೆ ಅನ್ನೋದು ನನಗೆ ಬಹಳ ಹೆಮ್ಮೆ ತರುವ ವಿಚಾರ ಅದರಲ್ಲೂ ಹೋರಾಟಗಾರರು ಹೋರಾಟಗಾರರು ಕಥೆ ಅಂದರೆ ಪ್ರೀತಿ.ಹೋರಾಟದ ಕಥೆಗಳಲ್ಲಿ ಕಿಚ್ಚು ಇರುತ್ತೆ ನ್ಯಾಯ ನೀತಿ ಇರುತ್ತೆ ಅದಕ್ಕೆ ಈ ಚಿತ್ರ ಜೊತೆಗೆ ನಾ ನಿಂತಿದ್ದೀನಿ ಎಂದರು.
ಹೊಸ ತಂಡ ಹೊಸಬರು ಮಾಡುವಂತಹ ಕಥೆಗಳು ವಿಭಿನ್ನವಾಗಿರುತ್ತವೆ. ಸಿನಿಮಾ ಮಾಡುವಾಗಲೇ ತುಂಬಾ ಕಷ್ಟ ಇತ್ತು,,ಆದರೆ ಈಗ ಇನ್ನೂ ಕಷ್ಟ ಜಾಸ್ತಿ ಇದೆ ಒಂದು ಚಿತ್ರ ಮಾಡೋದು ಅಂದ್ರೆ ಏಳೆಂಟು ಜನ್ಮ ಎತ್ತಿದ ಹಾಗೆ..
ಧೀರ ಭಗತ್ ರಾಯ್ ಸತ್ಯ ನ್ಯಾಯ ನೀತಿ ಹೋರಾಟ ಇವೆಲ್ಲವುಗಳನ್ನ ಒಳಗೊಂಡ ಚಿತ್ರ ಇದು ಅನ್ನೋದು ನನ್ನ ಭಾವನೆ ಎಂದು ಮಾಹಿತಿ ನೀಡಿದರು
ಈ ಕುರಿತು ಚಿತ್ರತಂಡ ನನ್ನೊಟ್ಟಿಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದೆ ನನಗೆ ತುಂಬಾ ಖುಷಿಯಾಗಿದೆ..ಪೊಲೀಸು ಕೋರ್ಟು ನ್ಯಾಯ ಅನ್ನೋದನ್ನ ನಾವು ನಂಬಬೇಕು ಸತ್ಯಕ್ಕೆ ಜಯ ಸಿಗ್ತಾ ಇದೆ, ನಾನು ಕೂಡ ಪೊಲೀಸರನ್ನು ಕಾನೂನನ್ನ ಕೋರ್ಟ್ ಅನ್ನ ನ್ಯಾಯವನ್ನ ನಂಬ್ತಿನಿ ಹಾಗೂ ಅದನ್ನ ಬೆಂಬಲಿಸ್ತೀನಿ…ಪೊಲೀಸ್ ವ್ಯವಸ್ಥೆ ಕೋರ್ಟು ನ್ಯಾಯ ಅನ್ನೋದು ಇಲ್ಲದೆ ಹೋಗಿದ್ರೆ ಭಾರತದ ಪರಿಸ್ಥಿತಿ ನಮ್ಮ ಪರಿಸ್ಥಿತಿ ಕೆಟ್ಟದಾಗಿರುತ್ತಿತ್ತು…ಧೀರ ಭಗತ್ ರಾಯ್ ಟ್ರೈಲರ್ ಬಿಡುಗಡೆಗೆ ಮಾಡಿರುವುದು ಖುಷಿ ಕೊಟ್ಟಿದೆ. ಈ ರೀತಿಯ ಸಿನಿಮಾಗಳು ಗೆಲ್ಲಬೇಕು ನ್ಯಾಯ ನೀತಿ ಸತ್ಯ ಯಾವತ್ತೂ ಜನರಿಗೆ ಸಿಗುವಂತಾಗಬೇಕು ಎಂದು ಹಾರೈಸಿದರು.
ಈ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪ್ರತಿಭಾನ್ವಿತ ನಾಯಕ ನಾಯಕಿ ನಿರ್ದೇಶಕರು ಹಾಗೂ ಒಂದು ಒಳ್ಳೆಯ ತಂಡ ಸಿಕ್ಕಂತಾಗಿದೆ ಅನ್ನೋ ಭರವಸೆ ನನಗಿದೆ.ನೀವೆಲ್ಲರೂ ನಾವೆಲ್ಲರೂ ಕಥೆಯನ್ನ ಆರಾಧಿಸೋಣ ಕಥೆ ಗೆದ್ದರೆ ನಾವು ಗೆಲ್ತಿವಿ ನಮ್ಮನ್ನು ನಾವು ಆರಾಧಿಸಿಕೊಳ್ಳುವುದು ಬೇಡ ಇದು ನನ್ನ ಸಲಹೆ…ಭೀಮದಲ್ಲಿ ನಾನು ಕೂಡ ಒಂದು ಪಾತ್ರವಾಗಿದ್ದೆ ಅಷ್ಟೇ ಆದರೆ ಚಿತ್ರಕ್ಕೆ ತಿದ್ದು ಕಥೆಯಿಂದ ಹೀಗಾಗಿ ನಾವೆಲ್ಲರೂ ಕಥೆಯನ್ನು ಆರಾಧಿಸೋಣ.ಒಳ್ಳೆಯ ಕಲಾವಿದರು ಒಳ್ಳೆಯ ತಂತ್ರಜ್ಞರು ಸಹೃದಯಿ ನಿರ್ಮಾಪಕರು ನೀವೆಲ್ಲ ಸೇರಿ ಮಾಡಿದ ಈ ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಮನದುಂಬಿ ಹಾರೈಸಿದರು.
ನಟ ಅಕಾಶ್ ದಳವಾಯಿ ಮಾತನಾಡಿ, ಲಾಕ್ ಡೌನ್ ಸಮಯದಲ್ಲಿ ಊರಿನಲ್ಲಿದ್ದ ವೇಳೆ ನಿರ್ದೇಶಕರು ಕರೆ ಮಾಡಿ ಸಿನಿಮಾ ಮಾಡೋಣ ಹೋರಾಟದ ಕಥೆ ಎಂದು ಹೇಳಿದರು. ಅಲ್ಲಿಂದ ಅರಂಭವಾದ ಚಿತ್ರದ ಆರಂಭ ಇದೀಗ ಬಿಡುಗಡೆ ಹಂತಕ್ಕೆ ಬಂದಿದೆ. ಎಲ್ಲರ ಸಹಕಾರ ಬೆಂಬಲ ಚಿತ್ರದ ಮೇಲಿರಲಿ ಎಂದು ಕೇಳಿಕೊಂಡರು.
ನಟಿ ಸುಚಾರಿತ ಮಾತನಾಡಿ ,ಟ್ರೈಲರ್ ನೋಡಿ ಖುಷಿ ಅಯಿತು. ಅದ್ಬುವಾಗಿ ಮೂಡಿ ಬಂದಿದ್ದು ಇದಕ್ಕಾಗಿ ಇಡೀ ಚಿತ್ರತಂಡಕ್ಕೆ ಧನ್ಯವಾದಗಳು. ಚಿತ್ರದಲ್ಲಿ ಸಾವಿತ್ರಿ ಎನ್ನುವ ಪಾತ್ರ ಮಾಡಿದ್ದೇನೆ. ಸಮಾಜದಲ್ಲಿ ಹೆಣ್ಣುಮಕ್ಕಳನ್ನು ಬಲಿಷ್ಠವಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ ಎಂದು ಪಾತ್ರದ ಬಗ್ಗೆ ಮಾಹಿತಿ ನೀಡಿದರು
ನಿರ್ದೇಶಕ ಕರ್ಣನ್ ಮಾತನಾಡಿ ಭೂ ಸುಧಾರಣೆ ಕಾಯ್ದೆ ಹಿನ್ನೆಲೆಯಲ್ಲಿ ನಡೆಯುವ ಧೀರ ಭಗತ್ ರಾಯ್ ಚಿತ್ರದ ಟ್ರೈಲರ್ ನಾಲ್ಕಾರೂ ಆಯಾಮಾಗಳಲ್ಲಿ ಕಾಣ್ತಿದೆ. ಅಷ್ಟೇ ಭರವಸೆಯಾಗಿ ಕಾಣ್ತಿರೋ ಈ ಚಿತ್ರದ ಇದೇ ಡಿಸೆಂಬರ್‌ನಲ್ಲಿ ಪ್ರೇಕ್ಷಕರೆದುರಿಗೆ ಬರಲು ಸಜ್ಜಾಗಿದೆ ಎಂದರು.
ಚಿತ್ರದಲ್ಲಿ ಶರತ್ ಲೋಹಿತಶ್ವ, ನೀನಾಸಂ ಅಶ್ವಥ್, ಪ್ರವೀಣ್ ಗೌಡ ಹೆಚ್ ಸಿ, ಹರಿರಾಮ್ , ಕೆ.ಎ ಮ್ ಸಂದೇಶ್, ಸುಧೀರ್ ಕುಮಾರ್ ಮುರೋಳಿ ಸೇರಿ ಪ್ರತಿಭಾನ್ವಿತಾ ತಾರಾ ಬಳಗವಿದೆ. ಹೋರಾಟದ ಕಥೆ ಚಿತ್ರ ಚೆನ್ನಾಗಿ ಮೂಡಿಬಂದಿದೆ ಸಹಕಾರ ಇರಲಿ ಎಂದು ಕೇಳಿಕೊಂಡರು.
ವೈಟ್ ಲೋಟಸ್ ಎಂಟರ್ಟೈನ್ಮೆಂಟ್ ಮತ್ತು ಶ್ರೀ ಓಂ ಸಿನಿ ಎಂಟ್ರಟೈನರ್ಸ್ ಬ್ಯಾನರ್ ನಡಿಯಲ್ಲಿ ಚಿತ್ರ ನಿರ್ಮಾಣವಾಗಿದೆ. ಸಿನಿಮಾಗೆ ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜಿಸಿದ್ದು, ಸೆಲ್ಪಂ ಜಾನ್ ಛಾಯಾಗ್ರಹಣ ಮಾಡಿದ್ದಾರೆ. ಎನ್.ಎಂ ವಿಶ್ವ ಈ ಚಿತ್ರಕ್ಕೆ ಸಂಕಲನ ಮಾಡಿದ್ದಾರೆ.