“ರಾಜದ್ರೋಹಿ” ಚಿತ್ರದ ಮೊದಲ ಪ್ರತಿ ಸಿದ್ಧ
ದೀರ್ಘ ಕಾಲದ ಗ್ಯಾಪ್ ನಂತರ ಹಿರಿಯ ನಟ ಅನಂತನಾಗ್, ಲಕ್ಷ್ಮೀ ಅಭಿನಯಿಸಿರುವ ‘ರಾಜದ್ರೋಹಿ’ ಚಿತ್ರದ ಪ್ರಥಮ ಪ್ರತಿ ಸಿದ್ದಗೊಂಡಿದೆ.

ಧನುಷ್ ಕಂಬೈನ್ಸ್ ಬ್ಯಾನರ್‍ದಲ್ಲಿ ಮಹದೇವಯ್ಯ ನಿರ್ಮಾಣ ಮಾಡಿದ್ದು, ಸಮರ್ಥರಾಜ್ ಕಥೆ,ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ತಾರಾಗಣದಲ್ಲಿ ಶರಣ್, ಪಟ್ರೆಅಜಿತ್, ಮಾನಸಿ, ಯೋಗಿಣಿವೀರ್, ನೀನಾಸಂಅಶ್ವಥ್, ಅವಿನಾಶ್, ಬಾಲರಾಜ್, ಪಲ್ಲಕ್ಕಿ ರಾಧಾಕೃಷ್ಣ, ಕಿಶೋರ್, ಬ್ಯಾಂಕ್ ಜನಾರ್ಧನ್, ಲಲಿತಾ, ರಾಧಾಕೃಷ್ಣ, ಕುರಿರಂಗ, ಸುನಿಲ್, ಕುರಿ ಪ್ರತಾಪ್, ಶ್ರೀಲಕ್ಷ್ಮೀ, ಶಿವಮೊಗ್ಗ ಸುನಿತಾ ಮುಂತಾದವರು ನಟಿಸಿದ್ದಾರೆ.

ಸಂಗೀತ ರಘುತುಮಕೂರು, ಛಾಯಾಗ್ರಹಣ ಸತೀಶ್‍ಮನೋಹರ್-ವೀನಸ್‍ಮೂರ್ತಿ-ನಾಗರಾಜ್, ಸಂಕಲನ ಕುಮಾರ್ ಕೊಟಿಕೊಪ್ಪ, ಕಲೆ ಬಾಬುಖಾನ್, ಸಾಹಸ ಅಲ್ಟಿಮೇಟ್ ಶಿವು, ಸಹ ನಿರ್ದೇಶನ ಬಸವರಾಜ್-ಮಂಜು ನವೀನ್ ಆನಂದ್ ಅವರದಾಗಿದೆ.

