ಹ್ಯಾಪಿ ನ್ಯೂ ಹಿಯರ್ ಬಳಿಕ ಮತ್ತೆ ಜೊತೆಯಾದ ವಿಜಯ್ ರಾಘವೇಂದ್ರ- ಸೋನು ಗೌಡ
ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಹಾಗೂ ಸೋನು ಗೌಡ ನಟನೆಯ ಮರೀಚಿ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಹ್ಯಾಪಿ ನ್ಯೂ ಹಿಯರ್ ಚಿತ್ರದ ಬಳಿಕ ಈ ಜೋಡಿ ತೆರೆಯ ಮೇಲೆ ಗಂಡ ಹೆಂಡತಿಯಾಗಿ ಕಾಣಿಸಿಕೊಂಡಿದ್ದಾರೆ.
ಸಸ್ಪೆನ್ಸ್ ಥ್ರಿಲ್ಲಿಂಗ್ ಅಂಶಗಳ ಝಲಕ್ ಕುತೂಹಲ ಹೆಚ್ಚಿಸಿದೆ. ಪೆÇಲೀಸ್ ಖದರ್‍ನಲ್ಲಿ ರಾಘು ಕಾಣಿಸಿಕೊಂಡಿದ್ದಾರೆ. ಟೀಸರ್ ಬಗ್ಗೆ ಚಿತ್ರತಂಡ ಸಾಕಷ್ಟು ಮಾಹಿತಿ ಹಂಚಿಕೊಂಡಿದೆ.
ನಿರ್ದೇಶಕ ಕಮ್ ರ್ಮಾಪಕ ಸಿದ್ಧ್ರುವ್ ಮಾತನಾಡಿ, ಮರೀಚಿ ಟೈಟಲ್ ಇಡುವ ಮೊದಲು 150 ಟೈಟಲ್ ನಮ್ಮ ಮುಂದೆ ಇತ್ತು. ಅದರಲ್ಲಿ ಋಷಿ ಹೆಸರು ಇಡುವ ಟೈಟಲ್ ಆಯ್ಕೆ ಮಾಡಬೇಕಿತ್ತು. ಅದಕ್ಕೆ ಮರೀಚಿ ಆಯ್ಕೆ ಮಾಡಿದ್ದೇನೆ. ಮರೀಚಿ ಎಂದರೆ ಬ್ರಹ್ಮನ ಮಗ. ದೇವದಾಸ್ ಹಾಗೂ ಅಸುರರ ಗಾಡ್ ಫಾದರ್. ನಮ್ಮ ಚಿತ್ರದಲ್ಲಿ ಒಳ್ಳೆಯದು ಕೆಟ್ಟದಕ್ಕೆ ಮರೀಚಿ ಗಾಡ್ ಫಾದರ್ ಎಂದು ತೆಗೆದುಕೊಂಡಿದ್ದೇವೆ. ತುಂಬಾ ಅದ್ಭುತವಾಗಿ ಕಥೆ ಮೂಡಿ ಬಂದಿದೆ. ಒಂದೊಳ್ಳೆ ಪ್ರಯತ್ನ ಮಾಡಿದ್ದೇವೆ. ಸ್ಕ್ರೀನ್ ಪ್ಲೇ, ಸ್ಟೋರಿ ಎಲ್ಲವೂ ಚೆನ್ನಾಗಿ ಬಂದಿದೆ ಎಂದರು.
ನಟ ವಿಜಯ್ ರಾಘವೇಂದ್ರ ಮಾತನಾಡಿ, ಮರೀಚಿ ಟೀಸರ್ ಲಾಂಚ್ ಆಗಿದೆ. ಟ್ಯಾಗ್ ಲೈನ್ ಹೇಳುವಂತೆ ಪ್ರತಿಯೊಬ್ಬರ ಮನಸ್ಸಿನಲ್ಲಿ ಕಥೆ ಎಣೆಯುವ ಮನಸ್ಸು ಆಗುತ್ತದೆ. ನಮ್ಮಗೂ ಅದೇ ಬೇಕಿರುವುದು. ಮರೀಚಿ ಸಿನಿಮಾ ಒಂದು ಕ್ರೈಮ್ ಥ್ರಿಲ್ಲರ್ ಟೀಸರ್ ನೋಡಿದರೆ ಗೊತ್ತಾಗುತ್ತದೆ. ಈ ಚಿತ್ರದಲ್ಲಿ ಪೆÇಲೀಸ್ ಪಾತ್ರ ಮಾಡುವ ಅವಕಾಶ ನಿರ್ದೇಶಕರು ಕೊಟ್ಟಿದ್ದಾರೆ. ಮರೀಚಿ ಸಿನಿಮಾದಲ್ಲಿ ತಾಂತ್ರಿಕ ವರ್ಗದವರನ್ನು ಎಷ್ಟು ಜವಾಬ್ದಾರಿಯಿಂದ ಆಯ್ಕೆ ಮಾಡಿದ್ದರೋ ಅದೇ ರೀತಿ ತೆರೆಮೇಲೆ ಬರುವ ಕಲಾವಿದರನ್ನು ಅಷ್ಟೇ ಜವಾಬ್ದಾರಿಯಿಂದ ಆಯ್ಕೆ ಮಾಡಿದ್ದಾರೆ. ಅದರಲ್ಲಿ ನಾನು ಒಬ್ಬ ಇದ್ದೇನೆ ಎಂದು ಹೇಳಲು ಖುಷಿಯಾಗುತ್ತದೆ ಎಂದರು.
ನಟಿ ಸೋನುಗೌಡ ಮಾತನಾಡಿ, ಮರೀಚಿ ಸ್ಟೋರಿ ಲೈನ್ ನನಗೆ ಬಹಳ ಇಷ್ಟವಾಯಿತು. ಈ ಚಿತ್ರದಲ್ಲಿ ಫಾರ್ಪಮೆನ್ಸ್ ಗೆ ತುಂಬಾ ಸ್ಕೋಪ್ ಇತ್ತು. ನನ್ನ ಪಾತ್ರ ತುಂಬಾ ಚೆನ್ನಾಗಿ ಬಂದಿದೆ. ಹ್ಯಾಪಿ ನ್ಯೂ ಇಯರ್ ನಲ್ಲಿ ಗಂಡ ಹೆಂಡತಿಯಾಗಿ ನಾನು ವಿಜಯ್ ಸರ್ ನಟಿಸಿದ್ದೇವು. ಇಲ್ಲಿಯೂ ಗಂಡ ಹೆಂಡತಿಯಾಗಿ ನಟಿಸಿದ್ದೇವೆ. ಎಮೋಷನಲ್ ಆಗಿ ಮರೀಚಿ ಸಿನಿಮಾ ಮೂಡಿಬಂದಿದೆ. ಸ್ಕ್ರೀನ್ ನಲ್ಲಿ ನಾವು ಹೇಗೆ ಕಾಣಿಸುತ್ತೇವೆ ಎಂಬುದನ್ನು ನೋಡಲು ನಾನು ಕೂಡ ಕಾತುರಳಾಗಿದ್ದೇನೆ ಎಂದರು.
ಮರೀಚಿ ಲವ್ ಸ್ಟೋರಿ ಒಳಗೊಂಡಂತೆ ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ. ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿ, ಒಂದಿಷ್ಟು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ದುಡಿದ ಅನುಭವ ಇರುವ ಸಿದ್ಧ್ರುವ್ ನಿರ್ದೇಶನದ ಮೊದಲ ಸಿನಿಮಾವಿದು. ಚಿತ್ರಕ್ಕೆ ಕಥೆ, ಚಿತ್ರಕಥೆ ಕೂಡ ಇವರೇ ಬರೆದಿದ್ದಾರೆ .
ವಿಜಯ ರಾಘವೇಂದ್ರ ಜೋಡಿಯಾಗಿ ನಟಿ ಸೋನು ಗೌಡ ನಟಿಸುತ್ತಿದ್ದು. ಅಭಿ ದಾಸ್, ಸ್ಪಂದನ ಸೋಮಣ್ಣ, ಆರ್ಯನ್, ಶೃತಿ ಪಾಟೀಲ್, ಗೋಪಾಲ್ ಕೃಷ್ಣ ದೇಶಪಾಂಡೆ, ಅರುಣ ಬಾಲರಾಜ್ ಚಿತ್ರದ ತಾರಾಬಳಗದಲ್ಲಿದ್ದಾರೆ. ಮನೋಹರ್ ಜೋಶಿ ಛಾಯಾಗ್ರಹಣ, ಜ್ಯೂಡ ಸ್ಯಾಂಡಿ ಸಂಗೀತ ನಿರ್ದೇಶನ ಚಿತ್ರಕ್ಕಿರಲಿದೆ. ಎಸ್ ಎಸ್ ರೆಕ್ ಬ್ಯಾನರ್ ನಡಿ ನಿರ್ದೇಶಕ ಸಿದ್ಧ್ರುವ್ ಹಾಗೂ ಸಂತೋಷ್ ಮಾಯಪ್ಪ ಚಿತ್ರವನ್ನು ನಿರ್ಮಿಸಿದ್ದಾರೆ. ಶೂಟಿಂಗ್ ಮುಗಿಸಿರುವ ಚಿತ್ರತಂಡ ಶೀಘ್ರದಲ್ಲೇ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ.