Actor Yash fulfills veteran actor Ambareesh's wish

ಹಿರಿಯ ನಟ ಅಂಬರೀಷ್ ಆಸೆ ಈಡೇರಿಸಿದ ನಟ ಯಶ್ - CineNewsKannada.com

ಹಿರಿಯ ನಟ ಅಂಬರೀಷ್ ಆಸೆ ಈಡೇರಿಸಿದ ನಟ ಯಶ್

ನಟ ರಾಕಿಂಗ್ ಸ್ಟಾರ್ ಯಶ್ -ರಾಧಿಕಾ ಪಂಡಿತ್ ಪುತ್ರಿ ಐರಾಳಿಗೆ ಹಿರಿಯ ನಟ ರೆಬೆಲ್ ಸ್ಟಾರ್ ಅಂಬರೀಷ್ ಅವರು ಕಲಘಟಗಿ ತೊಟ್ಟಿಲು ಮಾಡಿಸಿ ಉಡುಗೊರೆಯಾಗಿ ನೀಡಿದ್ದರು. ಇದೀಗ ಅದೇ ತೊಟ್ಟಿಲನ್ನು ನಟ ಯಶ್, ಅಭಿಷೇಕ್ ಅಂಬರೀಷ್ ಮತ್ತು ಅವಿವಾ ದಂಪತಿಯ ಪುತ್ರನಿಗೆ ನೀಡಿದ್ದಾರೆ

ಅಂಬಿ ಮೊಮ್ಮಗನಿಗೆ ತಾತ ಕೊಡಿಸಿದ್ದ ತೊಟ್ಟಿಲು ಕೊಟ್ಟ ನಟ ಯಶ್ , ಅಂಬರೀಷ್ ಅವರು ಕಂಡಿದ್ದ ಆಸೆಯನ್ನು ಈಡೇರಿಸಿದ್ದಾರೆ. ಅಂಬರೀಷ್ ಕೊಟ್ಟಿದ್ದ ತೊಟ್ಟಿಲು ಮತ್ತೆ ಅಂಬರೀಷ್ ಮನೆ ಸೇರಿದೆ

ಇದು ನಟ ಅಂಬರೀಷ್ ಅವರ ಆಸೆಯೂ ಆಗಿತ್ತು. ಮಗನಿಗೆ ಮಗುವಾದಾಗ ಇದೇ ತೊಟ್ಟಿಲಲ್ಲೇ ಮಗುವನ್ನು ಮಲಗಿಸಿ ತೋಗಿಸಬೇಕು ಎನ್ನುವುದು ಅಂಬರೀಷ್ ಅವರ ಕನಸಾಗಿತ್ತು ಎನ್ನುವುದನ್ನು ನೆನಪು ಮಾಡಿಕೊಂಡು ತೊಟ್ಟಿಲು ಹಿಂದಿರುಗಿಸಿದ್ದಾರೆ ನಟ ಯಶ್.

ಈ ಮೂಲಕ ನಟ ರಾಕಿಂಗ್ ಸ್ಟಾರ್ ಯಶ್ ಅಭಿಷೇಕ್ ಅಂಬರೀಷ್ ಮಗನ ನಾಮಕರಣಕ್ಕೆ ಆ ಅವಿಸ್ಮರಣೀಯ ಉಡುಗೊರೆಯನ್ನ ನೀಡಿದ್ದಾರೆ. ಅಂಬರೀಷ್ ಅವರ ಆಸೆಯನ್ನೂ ಈಡೇರಿಸಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin