Afzal, who became a director through the film "Hosatara"

“ಹೊಸತರ” ಚಿತ್ರದ ಮೂಲಕ ನಿರ್ದೇಶಕನಾದ ಅಫ್ಜಲ್ - CineNewsKannada.com

“ಹೊಸತರ” ಚಿತ್ರದ ಮೂಲಕ ನಿರ್ದೇಶಕನಾದ ಅಫ್ಜಲ್

ಪತ್ರಕರ್ತನಾಗಿ, ನಟನಾಗಿ ಹಾಗೂ ಕಾರ್ಯಕಾರಿ ನಿರ್ಮಾಪಕರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಿರುವ ಅಫ್ಜಲ್ “ಹೊಸತರ” ಚಿತ್ರದ ಮೂಲಕ ನಿರ್ದೇಶಕನಾಗಿ ಸ್ಯಾಂಡಲ್ ವುಡ್ ಪ್ರವೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಕೂಡ ಅಫ್ಜಲ್ ಅವರೆ ಬರೆದಿದ್ದಾರೆ. ಇತ್ತೀಚಿಗೆ ಚಿತ್ರದ ಶೀರ್ಷಿಕೆ ಅನಾವರಣಾವಾಗಿದ್ದು, “ಹೊಸತರ” ಎಂದು ಹೆಸರಿಡಲಾಗಿದೆ.

ಜೈವಿಜಯ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ “ಹೊಸತರ” ಚಿತ್ರದಲ್ಲಿ ಹೊಸ ತರಹದ ಕಥೆ ಇದೆ. ಸಿನಿಮಾದಲ್ಲೊಂದು ಸಿನಿಮಾ ಇದೆ. ಲವ್, ಸಸ್ಪೆನ್ಸ್, ಥ್ರಿಲ್ಲರ್ ಎಲ್ಲಾ ಅಂಶಗಳು ಇದೆ. ಕಾಮಿಡಿ ಸ್ವಲ್ಪ ಹೆಚ್ಚಾಗಿದೆ. ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.

ಮೂರು ಹಾಡುಗಳು ಹಾಗೂ ಎರಡು ಸಾಹಸ ಸನ್ನಿವೇಶಗಳಿದೆ. ರಾಜು ಎಮ್ಮಿಗನೂರು ಸಂಗೀತ ನಿರ್ದೇಶನ, ಅಲ್ಟಿಮೇಟ್ ಶಿವು ಸಾಹಸ ನಿರ್ದೇಶನ ಮಾಡಲಿದ್ದಾರೆ. ರಾಜೀವ್ ಗನೇಸನ್ ಛಾಯಾಗ್ರಹಣ, ಆಂಥೋನಿ ಪಯಾನೋ (ಕೆನಡಾ) ಹಿನ್ನೆಲೆ ಸಂಗೀತ ಹಾಗೂ ಬಾಬು ಶಿವಪುರ ಅವರ ಸಂಕಲನವಿರುವ ಈ ಚಿತ್ರಕ್ಕೆ ಅಮೇರಿಕಾದ ಜೆ ಹೆಚ್ ಜೆ ಸ್ಟುಡಿಯೋ ವಿ ಎಫ್ ಎಕ್ಸ್ ಮಾಡಲಿದೆ. ಹೆಸರಾಂತ ತಂತ್ರಜ್ಞರು ಈ ಚಿತ್ರದಲ್ಲಿ ಭಾಗಿಯಾಗುತ್ತಿದ್ದು, ಉತ್ತಮ ಗುಣಮಟ್ಟದಲ್ಲಿ ಚಿತ್ರ ಮೂಡಿ ಬರಲಿದೆ. ತಾರಾಬಳಗದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ನೀಡಿವುದಾಗಿ ನಿರ್ದೇಶಕ ಅಫ್ಜಲ್ ತಿಳಿಸಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin