Actor Rishi's 'Rama's Avatar' Darshan on May 10...

ಮೇ 10ರಂದು ನಟ ರಿಷಿ ಅಭಿನಯದ ‘ರಾಮನ ಅವತಾರ’ ದರ್ಶನ… - CineNewsKannada.com

ಮೇ 10ರಂದು ನಟ ರಿಷಿ ಅಭಿನಯದ ‘ರಾಮನ ಅವತಾರ’ ದರ್ಶನ…

ಲೋಕಸಭಾ ಚುನಾವಣೆ ಕಾವು ರಂಗೇರಿದ್ದು, ಹೀಗಾಗಿ ಒಂದಷ್ಟು ಸಿನಿಮಾಗಳ ಬಿಡುಗಡೆ ತಡವಾಗಿದೆ. ಇದೀಗ ರಾಮನ ಅವತಾರವೆಂಬ ಸಿನಿಮಾವನ್ನು ಚುನಾವಣಾ ಗಡಿಬಿಡಿ ಕಳೆದ ಬಳಿಕ ಆದರೆ, ಚುನಾವಣಾ ಫಲಿತಾಂಶಕ್ಕೆ ಮೊದಲೇ ರಿಲೀಸ್ ಮಾಡಲು ಚಿತ್ರತಂಡ ಯೋಜಿಸಿದೆ. ರಾಮನ ಅವತಾರ ಸಿನಿಮಾ ಮೇ 10ರಂದು ಬಿಡುಗಡೆಯಾಗಲಿದೆ.

ನಟ ರಿಷಿ, ಪ್ರಣೀತಾ ಸುಭಾಷ್, ಶುಭ್ರ ಅಯ್ಯಪ್ಪ ನಟಿಸಿರುವ ಈ ಸಿನಿಮಾಕ್ಕೆ ವಿಕಾಸ್ ಪಂಪಾಪತಿ ಆಕ್ಷನ್ ಕಟ್ ಹೇಳಿದ್ದಾರೆ. ರಾಮನ ಅವತಾರ’ ಸಿನಿಮಾದಲ್ಲಿ ಪ್ರಣೀತಾ ಸುಭಾಷ್ ಹಾಗೂ ಶುಭ್ರ ಅಯ್ಯಪ್ಪ ನಾಯಕಿಯರಾಗಿ ನಟಿಸಿದ್ದಾರೆ. ಪ್ರತಿಭಾನ್ವಿತ ನಟ ಅರುಣ್ ಸಾಗರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ವಿಕಾಸ್ ಪಂಪಾಪತಿ ‘ರಾಮನ ಅವತಾರ’ ಸಿನಿಮಾ ನಿರ್ದೇಶಿಸಿದ್ದಾರೆ. ಇದು ಇವರ ಚೊಚ್ಚಲ ಸಿನಿಮಾವಾಗಿದೆ. ಈ ಚಿತ್ರದ ಮೂಲಕ ವಿಕಾಸ್ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ಟೀಸರ್ ಹಾಗೂ ಹಾಡುಗಳ ಮೂಲಕ ರಾಮನ ಅವತಾರ ಸಿನಿಮಾ ಸಿನಿಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿದೆ.

ಸ್ಟಾರ್ ಫ್ಯಾಬ್ ಪ್ರೊಡಕ್ಷನ್ಸ್ ನಡಿ ‘ಆಪರೇಷನ್ ಅಲಮೇಲಮ್ಮ’ ಸಿನಿಮಾ ನಿರ್ಮಾಣ ಮಾಡಿದ್ದ ಅಮರೇಜ್ ಸೂರ್ಯವಂಶಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ರೋಮ್ಯಾಂಟಿಕ್ ಕಾಮಿಡಿ ಜಾನರ್‍ನ ಈ ಚಿತ್ರಕ್ಕೆ ಸಿನಿಮಾಗೆ ವಿಷ್ಣುಪ್ರಸಾದ್ ಹಾಗೂ ಸಮೀರ್ ದೇಶ್ ಪಾಂಡೇ ಕ್ಯಾಮೆರಾ ಹಿಡಿದಿದ್ದಾರೆ.

ಜೂಡಾ ಸ್ಯಾಂಡಿ ಟ್ಯೂನ್ ಹಾಕಿದ್ದು, ಅಮರನಾಥ್ ಸಂಕಲನವಿದೆ. ರಾಮನ ಅವತಾರ ಸಿನಿಮಾದ ಶೂಟಿಂಗ್ ಅನ್ನು ಉಡುಪಿ, ಬೆಂಗಳೂರು ಸುತ್ತಮುತ್ತ ಮಾಡಲಾಗಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin