ಸೆಟ್ಟೇರಿದ ಹೊಸ ಚಿತ್ರ “ಪತ್ರಕರ್ತ”
‘ಪತ್ರಕರ್ತ’ ಚಿತ್ರದ ಮುಹೂರ್ತ ಸಮಾರಂಭ ತಾವರೆಕೆರೆ ಬಳಿ ಇರುವ ಶ್ರೀಪ್ರಸನ್ನ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆಯಿತು. ಪತ್ರಕರ್ತ ಮುರಳಿಪ್ರಸಾದ್.ಬಿ.ಎನ್ ಕ್ಲಾಪ್ ಮಾಡಿದರೆ, ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್.ಕೆ.ವಿಶ್ವನಾಥ್ ಕ್ಯಾಮಾರ ಆನ್ ಮಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ
ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವ ಕೆ.ಹೆಚ್.ಮೂರ್ತಿಕುಮಾರ್ ಕಥೆ,ಚಿತ್ರಕಥೆ,ಸಂಭಾಷಣೆ ಬರೆದಿದ್ದು, ಜಿ.ರಂಗಸ್ವಾಮಿ ಕ್ಯಾಮಾರಾ ಕೈಚಳಕದಲ್ಲಿ ಮೊದಲ ದೃಶ್ಯವನ್ನು ಚಿತ್ರೀಕರಿಸಲಾಯಿತು. ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಪೆÇ್ರಡಕ್ಷನ್ ಅಡಿಯಲ್ಲಿ ರಾಧಮ್ಮ ಬಂಡವಾಳ ಹೂಡುತ್ತಿದ್ದಾರೆ.
ಈ ಚಿತ್ರಕ್ಕೆ ದಿವಂಗತ ಶ್ರೀ.ರವಿಬೆಳಗೆರೆ ಸಾರಥ್ಯದ ‘ಹಾಯ್ ಬೆಂಗಳೂರು’ ಪತ್ರಿಕೆ ಸ್ಪೂರ್ತಿಯಾಗಿದೆ. ಇದು ಒಬ್ಬ ಪತ್ರಕರ್ತನ ಜೀವನದ ಕಥೆಯಾಗಿರುತ್ತದೆ. ಎಲ್ಲಾ ಕುಟುಂಬವರ್ಗದವರು ಹಾಗೂ ರಾಜಕಾರಣಿಗಳು ಕುಳಿತು ನೋಡುವ ಸಿನಿಮಾವಾಗಿರುತ್ತದೆ.
ಕಿರುತೆರೆ ಹಾಗೂ ಜಗ್ಗೇಶ್ ಅಭಿನಯದ ‘ಶ್ರೀ ರಾಘವೇಂದ್ರ ಸ್ಟೋರ್ಸ್’ದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಶ್ರೀನಿಧಿ ನಾಯಕನಾಗಿ ಬಡ್ತಿ ಹೊಂದಿದ್ದಾರೆ. ‘ಕ್ಟಿಪ್ರ’ ಮತ್ತು ‘ಪಾರ್ಟನರ್’ ಚಿತ್ರದ ಪ್ರೀತಿಮೀರಾಜ್‍ಕರ್ ನಾಯಕಿಯಾಗಿ ಮೂರನೇ ಅವಕಾಶ.
ತಾರಾಗಣದಲ್ಲಿ ರಮೇಶ್‍ಭಟ್, ಮೈಸೂರು ರಮಾನಂದ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಜಿ.ಕೆ.ಗೋವಿಂದಗೌಡ ಮತ್ತು ಮಿಮಿಕ್ರಿರಾಜು. ಇವರೊಂದಿಗೆ ರವಿರಾಮ್, ಮಂಜುಮದ್ವಿತ್, ಅರ್ಜುನ್, ರತ್ನ, ಮಾಧುರಿ, ಸುರೇಶ್‍ಪಟೇಲ್ ಬ್ಯಾಡಗೆರೆ, ನಾಗರಾಜು ಕೃಷ್ಣಪ್ಪನಕೊಪ್ಪಲು ಮುಂತಾದವರು ನಟಿಸುತ್ತಿದ್ದಾರೆ. ಡಾ.ವಿ.ನಾಗೇಂದ್ರಪ್ರಸಾದ್ ಬರೆದಿರುವ ನಾಲ್ಕು ಹಾಡುಗಳಿಗೆ ಎ.ಟಿ.ರವೀಶ್ ಸಂಗೀತ ಸಂಯೋಜಿಸಿದ್ದಾರೆ.
ಈ ಪೈಕಿ ತಾಯಿ ಮಗನ ಸಂಬಂದ ಹೇಗಿದೆ ಎಂಬ ಗೀತೆಯ ಸಾಲುಗಳು ಕರುಳು ಕಿವುಚುವಂತದಾಗಿರುತ್ತದೆ. ಸಂಕಲನ ಅರವಿಂದರಾಜ್, ನೃತ್ಯ ತ್ರಿಭುವನ್, ಸಾಹಸ ಚಂದ್ರು ಬಂಡೆ, ಪ್ರಸಾದನ ಆರ್.ಪ್ರಭಾಕರ್ ಅವರದಾಗಿದೆ.
ಬೆಂಗಳೂರು,ಹುಲಿಯೂರುದುರ್ಗ, ಆಗುಂಬೆ, ತೀರ್ಥಹಳ್ಳಿ, ಉಡುಪಿ, ಚಿಕ್ಕಮಗಳೂರು, ಸಕಲೇಶಪುರ ಸುಂದರ ತಾಣಗಳಲ್ಲಿ ಶೂಟಿಂಗ್ ನಡೆಸಲು ತಂಡವು ಸಿದ್ದತೆ ಮಾಡಿಕೊಂಡಿದೆ.