On April 26, the murder mystery film 'Ityadi' will hit the screens

ಏಪ್ರಿಲ್ 26ಕ್ಕೆ ಮರ್ಡರ್ ಮಿಸ್ಟ್ರಿ ಕಥನ ‘ಇತ್ಯಾದಿ” ಚತ್ರ ತೆರೆಗೆ - CineNewsKannada.com

ಏಪ್ರಿಲ್ 26ಕ್ಕೆ ಮರ್ಡರ್ ಮಿಸ್ಟ್ರಿ ಕಥನ ‘ಇತ್ಯಾದಿ” ಚತ್ರ ತೆರೆಗೆ

‘ಇತ್ಯಾದಿ’ ಚಿತ್ರಕ್ಕೆ ಚರಣ್‍ದೇವ್ ಕ್ರಿಯೇಶನ್ಸ್, ಅದ್ವೈತ ಫಿಲಿಂಸ್, ನೀಲಕಂಠ ಫಿಲಂಸ್ ಬ್ಯಾನರ್ ಅಡಿಯಲ್ಲಿ ಮಹೇಂದ್ರನ್, ಶ್ರೀನಿವಾಸ್ ಮತ್ತು ನೀಲಕಂಠನ್ ಜಂಟಿಯಾಗಿ “ಇತ್ಯಾದಿ” ಚಿತ್ರ ಏಪ್ರಿಲ್ 26ಕ್ಕೆ ತೆರೆಗೆ ಬರಲಿದೆ

ನಿರ್ದೇಶಕ ಡಿ.ಯೋಗರಾಜ್ ಮಾತನಾಡಿ ಇದೊಂದು ಮರ್ಡರ್ ಮಿಸ್ಟ್ರಿ ಕ್ರೈಂ ಥ್ರಿಲ್ಲರ್ ಕಥೆಯನ್ನು ಒಳಗೊಂಡಿದೆ. ಶೇಕಡ 75ರಷ್ಟು ಕಾಲ್ಪನಿಕ, ಉಳಿದವು ಸತ್ಯ ಘಟನೆಯಾಗಿರುತ್ತದೆ. ಶೃಂಗೇರಿ ಬಳಿ ಇರುವ ಬಿಳಿಗದ್ದೆ ಎಂಬ ಊರಿನಲ್ಲಿ ಕಲ್ಲು ದೇವರು ಇರುತ್ತದೆ. ಅದಕ್ಕೆ ತಾಯಿ ಹೊಟ್ಟೆಯಲ್ಲಿ ಹುಟ್ಟಬೇಕೆಂಬ ಆಸೆಯಾಗಿರುತ್ತದೆ. ಅದು ಕೊನೆಗೂ ಕಲ್ಲಾಗೇ ಹುಟ್ಟಿಕೊಂಡಿರುತ್ತದೆ.

ಊರಿನಲ್ಲಿರುವ ಗರ್ಭಣಿಯರು ಆ ಜಾಗಕ್ಕೆ ಹೋಗಿ ಪೂಜೆ ಮಾಡಿಕೊಂಡು ಬಂದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇರುತ್ತದೆ. ಆದರೆ ಅಲ್ಲಿಗೆ ಹೋದವರೆಲ್ಲಾ ಕೊಲೆಯಾಗುತ್ತಿರುತ್ತಾರೆ.

ಇದನ್ನು ಮಾಡುವವರು ಯಾರು ಯಾಕೆ ನಡೀತಾ ಇದೆ ಎಂಬುದನ್ನು ಕುತೂಹಲಕಾರಿಯಾಗಿ ತೋರಿಸಲಾಗಿದೆ. ಶೃಂಗೇರಿ, ಚಿಕ್ಕಮಗಳೂರು, ಆಗುಂಬೆ ಸುಂದರ ತಾಣಗಳಲ್ಲಿ 62 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ ಅಂತ ಮಾಹಿತಿ ತೆರೆದಿಟ್ಟರು.

ಸಚ್ಚಿನ್ ನಾಯಕ. ಡಾ.ಸೌಮ್ಯ ನಾಯಕಿ. ಮತ್ತೊಂದು ಮುಖ್ಯ ಪಾತ್ರದಲ್ಲಿ ಮಹೇಶ್.ಬಿ., ಅರ್ಚನಾ ಉದಯಕುಮಾರ್. ತಾರಾಗಣದಲ್ಲಿ ಆಂಜನಪ್ಪ, ತಮಿಳು ಖ್ಯಾತ ನಟ ಶಿವರಾಜ್, ಮಂಜುಳಾವೆಂಕಟೇಶ್,ಮಣಿ ಮುಂತಾದವರು ನಟಿಸಿದ್ದಾರೆ.

ಎರಡು ಹಾಡುಗಳಿಗೆ ಸಂಗೀತ ಪುಣ್ಯೇಶ್, ಛಾಯಾಗ್ರಹಣ ಭರಣಿ-ಡಿ.ಯೋಗರಾಜ್-ಲಕ್ಷೀಕಾಂತ್, ಸಂಕಲನ ಸಂತೋಷ್ ನಿರ್ವಹಿಸಿದ್ದಾರೆ. ಸೆನ್ಸಾರ್‍ನಿಂದ ಪ್ರಶಂಸೆಗೆ ಒಳಪಟ್ಟಿರುವ ಸಿನಿಮಾವು ಇದೇ ತಿಂಗಳು ತೆರೆ ಕಾಣಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin