Ankita and Vihaan's acting is guaranteed to win the best actor and actress awards this time: Producer Rakshit Shetty

ಅಂಕಿತ, ವಿಹಾನ್ ನಟನೆಗೆ ಈ ಬಾರಿ ಅತ್ಯುತ್ತಮ ನಟ,ನಟಿ ಪ್ರಶಸ್ತಿ ಬರುವುದು ಖಾತರಿ : ನಿರ್ಮಾಪಕ‌ ರಕ್ಷಿತ್ ಶೆಟ್ಟಿ - CineNewsKannada.com

ಅಂಕಿತ, ವಿಹಾನ್ ನಟನೆಗೆ ಈ ಬಾರಿ ಅತ್ಯುತ್ತಮ ನಟ,ನಟಿ ಪ್ರಶಸ್ತಿ ಬರುವುದು ಖಾತರಿ : ನಿರ್ಮಾಪಕ‌ ರಕ್ಷಿತ್ ಶೆಟ್ಟಿ

ಯುವ ಕಲಾವಿದರಾದ ವಿಹಾನ್ ಮತ್ತು ಅಂಕಿತ ಅಮರ್ ನಟಿಸಿರುವ ಬಹು ನಿರೀಕ್ಣಿತ ಚಿತ್ರ ” ಇಬ್ಬನಿ ತಬ್ಬಿದ ಮಳೆಯಲಿ” ಸೆಪ್ಟೆಂಬರ್ 5 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಚಿತ್ರ ಬಿಡುಗಡೆ ಆಗುವುದಕ್ಕೂ ಮುನ್ನ ಇಬ್ಬರಿಗೂ ಅತ್ಯುತ್ತಮ ನಟ,ನಟಿ ಪ್ರಶಸ್ತಿ ಬರಲಿದೆ ಎಂದು ನಿರ್ಮಾಪಕ ರಕ್ಷಿತ್ ಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚಂದ್ರಜಿತ್ ಬೆಳ್ಳಿಯಪ್ಪ ಆಕ್ಷನ್ ಕಟ್ ಹೇಳಿರುವ ಚಿತ್ರವನ್ನು ನಟ ರಕ್ಷಿತ್ ಶೆಟ್ಟಿ ಮತ್ರು ಜಿ ಎಸ್ ಗುಪ್ತ ನಿರ್ಮಾಣ ಮಾಡಿದ್ದಾರೆ. ಸೆಂಟಿಮೆಂಟ್ ಕಾರಣದಿಂದ ಎಂದಿನಂತೆ ನಟ ರಕ್ಣಿತ್ ಶೆಟ್ಟಿ ಅವರು ಶಂಕರ್ ನಾಗ್ ಚಿತ್ರಮಂದಿರದಲ್ಲಿ ಚಿತ್ರದ ಮಾಹಿತಿ ನೀಡಲು ಟ್ರೈಲರ್ ಬಿಡುಗಡೆ ಇತ್ತು.

ಇದೇ ವೇಳೆ ಚಿತ್ರ ತಂಡ ಪವರ್ ಸ್ಟಾರ್ ಅವರಿಗೆ ಗೌರವ ಸಲ್ಲಿಸುವ ಕಾರಣದಿಂದ ಅವರ ಚಿತ್ರಗಳ ಗೀತೆ ಹಾಡಿ ಅಪ್ಪು ಅಭಿಮಾನ ಮೆರೆದರು

ನಿರ್ಮಾಪಕರಲ್ಲಿ ಒಬ್ಬರಾಗಿರುವ ರಕ್ಷಿತ್ ಶೆಟ್ಟಿ ಮಾತನಾಡಿ ನಿರ್ದೇಶಕ ಚಂದ್ರಜಿತ್ ಅವರು 8 – 9 ವರ್ಷ ಹಿಂದೆ ಬ್ಲಾಗ್ ಮೆಸೇಜ್ ಮಾಡಿದ್ರು. ಲಿಂಕ್ ಒಪನ್ ಮಾಡಿದೆ ಬರವಣೆಗೆ ವಿಶೇಷತೆ ಅನ್ನಿಸಿತು. ಆ ಥರದ ಸಿನಿಮಾ ಬಂದಿರಬಹುದು‌.ಈ ಸಿನಿಮಾ ವಿಶೇವಾಗಿದೆ. 9 ವರ್ಷದ ಹಿಂದಿನ ಬ್ಲಾಗ್ ಸಿನಿಮಾ ಆಗಿದೆ‌ ಟ್ರೈಲರ್ ಅಷ್ಟೇ ಅಲ್ಲ, ಸಿನಿಮಾ ಕೂಡ ಇಷ್ಟ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚಿತ್ರವನ್ನು ಮೂರು ಬಾರಿ ನೋಡಿದ್ದೇನೆ , ಚಿತ್ರದ ನಟನೆಗೆ ವಿಹಾನ್ ಮತ್ತು ಅಂಕಿತಾ ಗೆ ಅತ್ಯುತ್ತಮ ನಟ ನಟಿ ಪ್ರಶಸ್ತಿ ಬರುತ್ತದೆ. ಜೊತೆಗೆ ಮುಯೂರಿ ಕೆಲವೇ ಸನ್ನಿವೇಶದಲ್ಲಿ ಕಾಣಿಸಿಕೊಂಡರೂ ನಾನಿದ್ಸೇನೆ ಎನ್ನುವುದನ್ನು ನಿರೂಪಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಿರ್ದೇಶಕ ಚಂದ್ರಜಿತ್ ಬೆಳ್ಳಿಯಪ್ಪ ಮಾತನಾಡಿ , ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ನಿರ್ಮಾಪಕ ರಕ್ಷಿತ್ ಶೆಟ್ಟಿ ಸೇರಿದಂತೆ ಇಡೀ ತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿ ಬಂದಿದೆ ನಿಮ್ಮ ಸಹಕಾರ ಪ್ರೋತ್ಸಾಹ ಇರಲಿ ಎಂದು ಕೇಳಿಕೊಂಡರು

ಇಡೀ ಚಿತ್ರವನ್ನು ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ನನ್ನ ಜೊತೆ ಕೆಲಸ ಮಾಡುವುದು ತುಂಬಾ ಕಷ್ಡ. ಹೀಗಾಗಿ ಸಹಾಯಕ‌ ನಿರ್ದೇಶಕರಿಗೆ ಸಾಕಷ್ಟು ಬೈಯ್ದಿದ್ದೇನೆ. ಎಲ್ಲರು ಕ್ಷಮಿಸಿ ಎಂದು ಕೇಳಿಕೊಂಡರು. ಚಿತ್ರ‌ನಿರ್ದೇಶನ ಮಾಡಲು ಅವಕಾಶ ಕೊಟ್ಟಿದಕ್ಲೆ ಧನ್ಯವಾದ ಎಂದರು

ನಟ ವಿಹಾನ್ ಮಾತನಾಡಿ ಹಾಡು ಇಷ್ಡವಾಗಿದೆ ಸಿನಿಮಾ ಕೂಡ ಇಷ್ಟವಾಗಲಿದೆ. ಸಿನಿಮಾ ನೋಡಿದವರು ಇನ್ನಷ್ಡು ಜನರನ್ನು ಚಿತ್ರಮಂದಿರಕ್ಕೆ ಕರೆತರುತ್ತಾರೆ. ನಿರ್ದೇಶಕ ಚಂದ್ರಜಿತ್ ಹೇಳಿದ ಕಥೆ ಆಸಕ್ತಿಕರವಾಗಿತ್ತು. ನಟ ರಕ್ಷಿತ್ ಶೆಟ್ಟಿ ಅವರು ಪ್ರತಿಭೆ ನೋಡಿ ಆಯ್ಕೆ ಮಾಡಿಕೊಳ್ಳುವಲ್ಲಿ ರಕ್ಣಿತ್ ಕೂಡ ಒಬ್ಬರು. ಸಿನಿಮಾಗೆ ಆಯ್ಮೆಯಾದ ಅವರಿಗೆ ಮೆಸೇಜ್ ಮಾಡಿ ಧನ್ಯವಾದ ಹೇಳಿದ್ದೆ ಎಂದರು.

ನಿರ್ದೇಶಕ ಚಂದ್ರಜಿತ್ ಎಲ್ಲರಿಂದ ಕೆಲಸ ತೆಗೆಸಿದ್ದಾರೆ. ಸಿನಿಮಾದ ನಿಜವಾದ ನಾಯಕರು ಛಾಯಾಗ್ರಾಹಕ ಮತ್ತು ಸಂಗೀತ ನಿರ್ದೇಶಕರು. ನಿರ್ದೇಶಕರ ಆಲೋಚನೆಗೆ ಪೂರಕವಾಗಿ ಕೆಲಸ ಮಾಡಿದ್ದಾರೆ. ನಟ ರಕ್ಣಿತ್ ಅವರು ಸೆಟ್ ಗೆ ಬರುತ್ತಿರಲಿಲ್ಲ‌ ಎಲ್ಲಿಯು ತೊಂದರೆ ಆಗದಂತೆ ಆಗದಂತೆ ಮಾಡಿದ್ಸಾರೆ. ಜೊತೆಗೆ ಇಬ್ಬರು ನಟಿಯರು ಅತ್ಯುತ್ತಮ ಪಾತ್ರ ಮಾಡಿದ್ದಾರೆ. ಚಿತ್ರ ನೋಡಿದ ನಂತರ ರೈಟರ್ ಗೆ ಹೆಚ್ಚು ಪ್ರಾಮುಖ್ಯತೆ ಕೊಡ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಟಿ ಅಂಕಿತ ಅಮರ್ ಮಾತನಾಡಿ , ಟ್ರೈಲರ್ ನೋಡಿದ್ದರೆ ತಂದೆ ತಾಯಿ ಖುಷಿ ಪಡೋರು. ಪ್ರತಿಯೊಬ್ಬರಿಗೂ ಸಾಕಷ್ಟು ಕನಸುಗಳಿವೆ. ಕನಸು, ಹೊಂಬಿಸಲಾಗಿ ಬಂದ ಚಿತ್ರ ಇಬ್ಬನಿ‌ ತಬ್ಬಿದ ಇಳೆಯಲಿ ಚಿತ್ರ. ಒಂದು ರೀತಿ ಮ್ಯಾಜಿಕ್ ಕ್ರಿಯೇಟ್ ಮಾಡಿದೆ. ಇಬ್ಬನಿ ತಬ್ಬಿದ ಇಳೆಯಲಿ ಚಿತ್ರದಲ್ಲಿ ಸಂದರ್ಭ ಖಳನಾಯಕ. ಸಂದರ್ಭದ ಅನುದಾರ ಪಾತ್ರಗಳ ಪರಿಚಯ ಮಾಡಿದ್ಸಾರೆ. ಕಲಾವಿದರಿಗೆ ನಿರ್ದೇಶಕ ಎನ್ನುವ ರೋಲ್ ಬಹು ಮುಖ್ಯ. ಪ್ರತಿಯೊಂದು ನಿರ್ದೇಶಕ ಚಂದ್ರಜಿತ್ ಅವರಿಂದ ಆಗಿರುವುದು. ಪ್ರೀತಿಯ ಆಚರಣೆಯನ್ನು ಸಂಗೀತ ಮತ್ತು ವಿಶ್ಯುಯಲ್ ಮೂಲಕ ಕಟ್ಟಿಕೊಡಲಾಗಿದೆ. ಈ ಆಚರಣೆಗೆ ಮತ್ತಷ್ಟು ಕಳೆ ಬರಬೇಕಾದರೆ ಚಿತ್ರಮಂದಿರಕ್ಕೆ ಬಂದು ಎಲ್ಲರೂ ಸಿನಿಮಾ‌ ನೋಡಿ ಹೊಸ ಕಲಾವಿದರು ತಂತ್ರಜ್ಞರಿಗೆ ಪ್ರೋತ್ಸಾಹ ನೀಡಿ ಎಂದು ಕೇಳಿಕೊಂಡರು.

ಚಿತ್ರದಲ್ಲಿ ನಾನೇ ಮಾಡಿರುವುದು ಅನ್ನಿಸಿತು. ತಂಗಿ ,ಅಪ್ಪ ಅಮ್ಮನ‌ ರಿಯಾಕ್ಷನ್ ಗಾಗಿ ಎದುರು ನೋಡುತ್ತಿದ್ದೇನೆ ಎಂದರು

ನಟಿ ಮಯೂರಿ ನಟರಾಜ್ ಮಾತನಾಡಿ , ಟ್ರೈಲರ್ ಬಿಡುಗಡೆಯಾಗಿರುವುದು ಖುಷಿ ಆಗಿದೆ. ಕಣ್ಣಲ್ಲೇ ಅಭಿನಯಿಸಬೇಕು ಎನ್ನುವುದು ಸವಾಲಾಗಿತ್ತು. ಸಿನಿಮಾ ನೋಡಿ ತಿಳಿಸಿ. ಹೊಸಬರು ಇರುವ ಚಿತ್ರವನ್ನು ಈ‌ ಮಟ್ಟವನ್ನು ತೆರೆಗೆ ತರುವುದು ದೊಡ್ಡ ವಿಷಯ. ಹೊಸಬರಿಗೂ ದೊಡ್ಡಮಟ್ಟದಲ್ಲಿ ಸಿನಿಮಾ ಮಾಡಲಿ ಎಂದು ಹಾರೈಸಿದರು.

ಛಾಯಾಗ್ರಾಹಕ ಶ್ರೀವತ್ಸನ್ ಸೆಲ್ವರಾಜನ್ ಮಾತನಾಡಿ ಬೆಂಗಳೂರು ಹೊಸದಲ್ಲ. ನನ್ನ ಹೆಂಡತಿ‌ ಕನ್ನಡತಿ . ನಿರ್ದೇಶಕರಿಗೆ ಏನು ಹೇಳಬೇಕು ಎನ್ಮುವ ದೃಡವಾದ ನಂಬಿಕೆ‌ ಇತ್ತು. ಅವರ ಆಲೋಚನೆಗೆ ತಕ್ಕಂತೆ ಕೆಲಸ ಮಾಡಿದ್ದೇನೆ. ತಮ್ಮ ಕಲಾ ನೈಪುಣ್ಯತೆ ಪ್ರದರ್ಶಿಸಲು ಅವಕಾಸ ಕೊಟ್ಟ ನಿರ್ಮಾಪಕ ರಕ್ಣಿತ್ ಶೆಟ್ಟಿ ಅವರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು ಎಂದು ಹೇಳಿದರು.

ಪರವಃ ಸಂಸ್ಥೆಯ ಸಿಇಓ ಶ್ರೀನಿ ಶೆಟ್ಟಿ, ಚಿತ್ರ ಕನ್ನಡದಲ್ಲಿ ಮತ್ತೊಂದು ಬ್ಲಾಕ್ ಬ್ಲಸ್ಟರ್ ಚಿತ್ರವಾಗಲಿದೆ. ಚಿತ್ರ ನೋಡಿದ ತಂಡ ನಿರ್ದೇಶಕ ಚಂದ್ರಜಿತ್ ಅವರನ್ನು ತಬ್ಬಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದೇವೆ ಎಂದರು

ಚಾರ್ಲಿ 777 ನಿರ್ದೇಶಕ ಚರಣ್ ರಾಜ್ ಮಾತನಾಡಿ, ಟ್ರೈಲರ್ ಚೆನ್ನಾಗಿ ಮೂಡಿ ಬಂದಿದೆ. ನಿರ್ದೇಶಕ ಚಂದ್ರಜಿತ್ ನಾನು ಕಿರಿಕ್ ಪಾರ್ಟಿ ಯಿಂದ ಜೊತೆಯಾಗಿ ಕೆಲಸ ಮಾಡಿದ್ದೇವೆ. ಪ್ರತಿ ಬಾರಿ‌ ಟ್ರೈಲರ್ ನೋಡಿದ ಮೇಲೆ ಅವರನ್ನು ಬಾರಿ ತಬ್ಬಿಕೊಳ್ಳಬೇಕು ಅನ್ನಿಸಿತು.‌ಗೆಲ್ಲಲು ಎಲ್ಲಾ ಅರ್ಹತೆ ಇರುವ ಸಿನಿಮಾ . ಚಿತ್ರದಲ್ಲಿ ನನ್ನದೊಂದು ಪಾತ್ರ ನೀಡಿದ್ದಾರೆ ಎಂದು ಹೇಳಿದರು.

ಈ ನಡುವೆ ನಿರ್ದೇಶಕ ಚಂದ್ರಜಿತ್ ಮಾತನಾಡಿ ಹಿರಿಯ ಕಲಾವಿದೆ ಗಿರಿಜಾ ಶೆಟ್ಟರ್ 20 ವರ್ಷದ ನಂತರ ಕನ್ನಡ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಸೂಕ್ತವಾದ ಪಾತ್ರ ಅನ್ನಿಸಿತು. ಎಲ್ಲರನ್ನೂ ಇದೇ ಕಾರಣಕ್ಕೆ ಅಯ್ಕೆ ಮಾಡಲಾಗಿದೆ. ತಾಯಿ ಪಾತ್ರದಲ್ಲಿ ಗಿರಿಜಾ ಅವರು ಕಾಣಿಸಿಕೊಂಡಿದ್ದಾರೆ .ಗೀತಾಂಜಲಿ ಚಿತ್ರ ನೋಡಿದ ಮೇಲೆ ಅವರ ಪಾತ್ರ ಆವರಿಸಿಕೊಂಡಿತ್ತು. ಹೀಗಾಗಿ ಅವರನ್ನು ಹುಡುಕಿ ಆಯ್ಕೆ ಮಾಡಿದೆವು ಎಂದು ಹೇಳಿಕೊಂಡರು.

ಸಂಗೀತ ನಿರ್ದೇಶಕ ಗಗನ್ ಬಡೇರಿಯಾ , ಸಂಕಲನಕಾರ ರಕ್ಷಿತ್ ಕಾಪು ಮತ್ತಿತರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin