ಕಲಾಕಾರನ ಹೊಸ ಅವತಾರ “ವೆಂಕಟೇಶಾಯ ನಮಃ” : ಮೊದಲ ಹಂತದ ಚಿತ್ರೀಕರಣ ಪೂರ್ಣ
ಬಹಳ ದಿನಗಳ ನಂತರ ಕಲಾಕಾರ ,ನಟ,ನಿರ್ದೇಶಕ ಹರೀಶ್ ರಾಜ್ ಮತ್ತೊಮ್ಮೆ ನಿರ್ದೇಶನ ಮಾಡುತ್ತಿರುವ ಚಿತ್ರ ” ವೆಂಕಟೇಶಾಯ ನಮಃ ” ಚಿತ್ರದ ಅಡಿ ಬರಹದಲ್ಲಿ
ಮತ್ತೆ ಪ್ಯಾರೆಗೆ ಆಗ್ಬಿಟ್ಟೈತೆ… ಎನ್ನುವ ಸಾಲು ಇದೆ
ನಟ,ನಿರ್ದೇಶಕ ಹರೀಶ್ ರಾಜ್ ಗೆ ಬಹಳ ವರ್ಷಗಳ ನಂತರ ನಟನೆ ಮತ್ತು ನಿರ್ದೇಶನದ ಮೇಲೆ ” ಮತ್ತೆ ಪ್ಯಾರ್ ಗೆ ಆಗ್ವಿಟ್ಟೈತೆ .. ಚಿತ್ರದ ಟೀಸರ್ ಬಿಡುಗಡೆ ಆಗಿದೆ.
ನಟ ನಿರ್ದೇಶಕ ಹರೀಶ್ ರಾಜ್ ಮಾತನಾಡಿ , ಚಿತ್ರದಲ್ಲಿ ಸಾಪ್ಟ್ ವೇರ್ ಇಂಜಿನಿಯರ್ ಪಾತ್ರ, ಕೆಲವು ಸನ್ನಿವೇಶದ ಸೂಕ್ಷ್ಮತೆಯನ್ನು ಚಿತ್ರದ ಮೂಲಕ ಯುವ ಸಮುದಾಯಕ್ಕೆ ಸಂದೇಶ ನೀಡುವ ಪಾತ್ರ. ಯುವತಿ ಕೈ ಕೊಟ್ಟ ನಂತರ ವೆಂಕಟೇಶನ ಜೀವನದಲ್ಲಿ ಏನೆಲ್ಲಾ ಆಗಲಿದೆ ಎನ್ನುವುದನ್ನು ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ. ಲವ್ ,ಕಾಮಿಡಿ ರೋಮಾನ್ಸ್ ಮತ್ತು ಸಂದೇಶ ಇರುವ ಚಿತ್ರ. ಹಿರಿಯರಾದ ಅಶೋಕ್, ಎಂ.ಎಸ್ ಉಮೇಶ್ ಅವರಿಗೆ ಆಕ್ಷನ್ ಕಟ್ ಹೇಳುವ ಪ್ರಯತ್ನ ,
ಲವ್ ಮಾಡದೆ, ಹುಡುಗೀರ ಜೊತೆ ಚೆಲ್ಲಾಟವಾಡುತ್ತಾ , ಎಂಜಾಯ್ ಮಾಡಬೇಕೆಂಬ ವೆಂಕಿ ಅಲಿಯಾಸ್ ವೆಂಕಟೇಶನ ಸುತ್ತ ನಡೆಯುವ ಕಥೆಯನ್ನು ಹಾಸ್ಯ ಮಿಶ್ರಣದೊಂದಿಗೆ ಸಂಪೂರ್ಣ ಪ್ಯಾಕೇಜ್ ಮನರಂಜನೆಯ ಚಿತ್ರವಾಗಿ ನೀಡಲು ಮುಂದಾಗಿದ್ದೇನೆ. ತಾಯಿಯ ಪಾತ್ರದಲ್ಲಿ ಹಿರಿಯ ನಟಿ ಉಮಾಶ್ರೀ ಅಭಿನಯಿಸುತ್ತಿದ್ದಾರೆ.. ಚಿತ್ರದಲ್ಲಿ ಎಂಟು ಜನ ಹೀರೋಯಿನ್ ಗಳು ಅಭಿನಯಿಸುತ್ತಿದ್ದು , ಇಬ್ಬರು ನಾಯಕಿಯರು ಪ್ರಮುಖವಾಗಿ ಕಾಣುತ್ತಾರೆ ಎಂದು ಕೇಳಿಕೊಂಡರು.
ನಿರ್ಮಾಪಕ ಪಿ.ಜನಾರ್ಧನ್ ಮಾತನಾಡಿ , ಕಥೆ ಕೇಳಿ ಇಷ್ಟ ಆಯ್ತು, ಒಂದು ಶೆಡೂಲ್ಡ್ ಮುಗಿದಿದೆ. ಇದೇ 20 ರಿಂದ ಎರಡನೇ ಶೆಡ್ಯೂಲ್ಡ್ ನಡೆಯಲಿದೆ ಎಂದರು
ಹಿರಿಯ ನಟ ಅಶೋಕ್ ಮಾತನಾಡಿ ನಟ ನಿರ್ದೇಶಕ ಹರೀಶ್ ರಾಜ್ ನನಗೆ ದಂಡಪಿಂಡಗಳು ಧಾರಾವಾಹಿಯ ಮೂಲಕ ಪರಿಚಯ. ನಟನೆ ಹಾಗೂ ನಿರ್ದೇಶನ ಜವಾಬ್ದಾರಿ ಒಟ್ಟೊಟ್ಟಿಗೆ ಹೇಗೆ ನಿಭಾಯಿಸುತ್ತಾರೆ ಎಂಬುದೇ ನನಗೆ ಆಶ್ಚರ್ಯ , 50ವರ್ಷದ ಸಿನಿಮಾ ಜರ್ನಿಯಲ್ಲಿ ಇಂದಿಗೂ ನಿರ್ದೇಶನ ಮಾಡುವುದಕ್ಕೆ ಭಯ ಪಡುತ್ತೇನೆ. ಈಗಿನ ಸಿನಿಮಾ ಟ್ರೆಂಡೇ ಬದಲಾಗಿದೆ , ವರ್ಷಕ್ಕೆ 200 ಚಿತ್ರಗಳು ಬಂದರೆ ಬೆರಳೆಣಿಕೆಯ ಚಿತ್ರಗಳು ಮಾತ್ರ ಯಶಸ್ಸು ಕಾಣುತ್ತಿದೆ. ಚಿತ್ರದಲ್ಲಿ ನಾಯಕಿಯ ತಂದೆಯ ಪಾತ್ರ , ಕಾಮಿಡಿ ಸಬ್ಜೆಕ್ಟ್ ಜೊತೆ ಮನರಂಜನೆ ಕೂಡ ಸಿಗುತ್ತೆ , ಎಲ್ಲರೂ ನಮ್ಮ ತಂಡಕ್ಕೆ ಸಹಕಾರ , ಬೆಂಬಲ ನೀಡಿ ಎಂದು ಹೇಳಿದರು
ಮತ್ತೊಬ್ಬ ನಟ ಎಂ.ಎಸ್ ಉಮೇಶ್, ಮಾತನಾಡಿ ಚಿತ್ರದಲ್ಲಿ ಹೆಣ್ಣು ತೋರಿಸುವ ಬ್ರೋಕರ್ ಪಾತ್ರ, ಬಣ್ಣದ ಬದುಕಿಗೆ ಬಂದು 75 ವರ್ಷ ಪೂರ್ಣಗೊಂಡಿದೆ. ಇಷ್ಡು ವರ್ಷ ಚಿತ್ರರಂಗದಲ್ಲಿ ಉಳಿಯಲು ಒಂದು ಚಿತ್ರದಿಂದ ಮತ್ತೊಂದು ಚಿತ್ರದ ಹಾವ ಭಾವ ಕಾರಣ ಕಥಾಸಂಗಮ ದಂತಹ ವಿಭಿನ್ನ ಪಾತ್ರವನ್ನು ಕಣಗಾಲ್ ಪುಟ್ಟಣ್ಣ ಮಾಡಿಸಿದ್ದರು ಎಂದು ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು
ಹಾಸ್ಯ ನಟ ತಬಲಾ ನಾಣಿ ಮಾತನಾಡಿ ನಿರ್ದೇಶಕ ಹರೀಶ್ ರಾಜ್ ಮೊದಲು ಕಥೆ ಹೇಳಿದಾಗಲೇ ಇಷ್ಟವಾಗಿತ್ತು. ಪ್ರಸ್ತುತ ಕಾಲಘಟ್ಟಕ್ಕೆ ಸೂಕ್ತ ಎಂದಿದೆ. ಅದರಂತೆ ಈಗ ಚಿತ್ರೀಕರಣ ಆರಂಭಗೊಂಡಿದೆ. ಚಿತ್ರದಲ್ಲಿ ನಿರ್ದೇಶಕನ ಪಾತ್ರ , ಮೊದಲು ಸಣ್ಣ ಪಾತ್ರ ಬೇಡ ಎಂದಿದೆ. ನಂತರ ಪಾತ್ರದ ತೂಕ ಇಷ್ಟವಾಯಿತು. ಇನ್ನು ಚಿತ್ರೀಕರಣದ ಸ್ಥಳದಲ್ಲಿ ನಡೆದ ಇಂಪ್ರೊವೈಸೇಶನ್ ಬಹಳ ಸೊಗಸಾಗಿ ಸಾಗುತ್ತಿದೆ ಎಂದರು.
ಹಿರಿಯ ಕಲಾವಿದೆ ಚಿತ್ಕಲಾ ಬಿರಾದಾರ್ ಮಾತನಾಡಿ, ರೋಮಾಂಟಿಕ್ ಕಾಮಿಡಿ ಜಾನರ್ ಸಿನಿಮಾ, ವೆಂಕಟೇಶಾಯ ನಮಃ , ಫುಲ್ ಮೀಲ್ಸ್ ಅನ್ನು ಪ್ರೇಕ್ಷಕರಿಗೆ ನೀಡಲಿದೆ. ಕಾಮಿಡಿ ಸೇರಿದಂತೆ ಎಲ್ಲಾ ಆಯಾಯಗಳು ಚಿತ್ರದಲ್ಲಿವೆ. ನಿರ್ದೇಶಕ ಹರೀಶ್ ರಾಜ್ ನಟ,ನಿರ್ದೇಶನ ಎರಡೂ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ ಎಂದರು
ಹಾಸ್ಯ ಕಲಾವಿದ ರಾಘು ರಮಣಕೊಪ್ಪ ಮಾತನಾಡಿ , ಯಾವುದೇಪಾತ್ರ ಕೊಟ್ಟರೂ ನಿರ್ವಹಿಸಬಲ್ಲ ನಟ ಹರೀಶ್ ರಾಜ್, ಹಿರಿಯ ನಟ ತಬಲ ನಾಣಿ ಅವರು ಸಹ ನಟರನ್ನು ಎಷ್ಟು ಪ್ರೋತ್ಸಾಹ ಮಾಡುತ್ತಾರೆ ಎನ್ನುವನ್ನು ನೋಡಿ ಕಲಿಯಬೇಕು ಎಂದರು
ಚಿತ್ರದಲ್ಲಿ ನಾಯಕಿಯಾರಾಗಿ ಪ್ರಕೃತಿ , ಆರಾಧನಾ , ರೇಣುಕಾ ಸೇರಿದಂತೆ ಚಿತ್ರತಂಡದವರು ತಮ್ಮ ತಮ್ಮ ಪಾತ್ರದ ಕುರಿತು ಮಾಹಿತಿ ಹಂಚಿಕೊಂಡರು.
ಶ್ರೀ ಲಕ್ಷ್ಮಿ ಜನಾರ್ದನ ಮೂವೀಸ್ ಮೂಲಕ ನಿರ್ಮಾಣವಾಗುತ್ತಿರುವ ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು , ಎರಡನೇ ಹಂತದ ಚಿತ್ರೀಕರಣವನ್ನು ಇದೇ ತಿಂಗಳು 20 ರಿಂದ ಆರಂಭ ಮಾಡಲು ನಿರ್ಧರಿಸಿದ್ದು, ಸುಮಾರು 45 ದಿನಗಳ ಕಾಲ ಚಿತ್ರೀಕರಣ ಮಾಡುವ ಪ್ಲಾನ್ ಚಿತ್ರತಂಡ ಹಾಕಿಕೊಂಡಿದೆ.