Tejaswi Surya to release trailer of "Hyena" on January 15

ಜನವರಿ 15 ರಂದು “ಹೈನಾ” ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಿರುವ ತೇಜಸ್ವಿ ಸೂರ್ಯ - CineNewsKannada.com

ಜನವರಿ 15 ರಂದು “ಹೈನಾ” ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಿರುವ ತೇಜಸ್ವಿ ಸೂರ್ಯ

ವಿಭಿನ್ನ ಕಥಾಹಂದರ ಹೊಂದಿರುವ “ಹೈನಾ” ಚಿತ್ರದ ಟ್ರೇಲರ್ ಅನ್ನು ಜನವರಿ 15ರಂದು ಸಂಸದ ತೇಜಸ್ವಿ ಸೂರ್ಯ ” ಅನಾವರಣ ಮಾಡಲಿದ್ದಾರೆ.

ಅಮೃತ ಫಿಲಂ ಸೆಂಟರ್ ಲಾಂಛನದಲ್ಲಿ ವೆಂಕಟ್ ಭಾರದ್ವಾಜ್ ಹಾಗೂ ರಾಜ್ ಕಮಲ್ ನಿರ್ಮಿಸಿರುವ ಹಾಗೂ ವೆಂಕಟ್ ಭಾರದ್ವಾಜ್ ಚಿತ್ರಕಥೆ ಬರೆದು ನಿರ್ದೇಶನವಿದೆ

ಈ ಕುರಿತು ಮಾಹಿತಿ ಹಂಚಿಕೊಂಡಿರುವ ನಿರ್ದೇಶಕ ವೆಂಕಟ್ ಭಾರದ್ವಜ್, “ಹೈನಾ” ಚಿತ್ರದ ಬಗ್ಗೆ ತಿಳಿದುಕೊಂಡ ಸಂಸದ ತೇಜಸ್ವಿ ಸೂರ್ಯ ಜನವರಿ 15 ರಂದು ಟ್ರೇಲರ್ ಬಿಡುಗಡೆ ಮಾಡಲು ಒಪ್ಪಿಕೊಂಡಿದ್ದಾರೆ. .”ಹೈನಾ” ಚಿತ್ರ ದೇಶಭಕ್ತಿ ಕುರಿತಾದ ಕಥಾಹಂದರ ಹೊಂದಿರುವ ಚಿತ್ರ. ಗುಪ್ತಾಚಾರ ಇಲಾಖೆ, ಪೆÇಲೀಸ್ ಇಲಾಖೆ ಹಾಗೂ ರಕ್ಷಣಾ ಇಲಾಖೆಯ ಕಾರ್ಯವೈಖರಿಯ ಬಗ್ಗೆ ನಮ್ಮ ಚಿತ್ರದಲ್ಲಿ ತೋರಿಸಲಾಗಿದೆ.

ದೇಶಭಕ್ತಿಯ ಕುರಿತಾದ ಚಿತ್ರಕ್ಕೆ ಸದಾ ನನ್ನ ಬೆಂಬಲ ಇರುತ್ತದೆ. ಹಾಗಾಗಿ ನಾನು ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡುತ್ತೇನೆ ಎಂದು ತೇಜಸ್ವಿ ಸೂರ್ಯ ತಿಳಿಸಿದ್ದಾರೆ. ಸರಳ, ಸಜ್ಜನಿಕೆಗೆ ಹೆಸರಾಗಿರುವ ಸಹೃದಯಿ ಸಂಸದ ತೇಜಸ್ವಿ ಸೂರ್ಯ ಅವರಿಗೆ ನಮ್ಮ ತಂಡದ ಪರವಾಗಿ ಧನ್ಯವಾದ ಎಂದಿದ್ಧಾರೆ

ಇತ್ತೀಚೆಗಷ್ಟೇ ಹೈನಾ ಚಿತ್ರದ ಲಿರಿಕಲ್ ವೀಡಿಯೊ ಜನರ ಮನ ಗೆದ್ದಿದೆ. ಟ್ರೇಲರ್ ಹಾಗೂ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯಿದೆ.

ಹರ್ಷ ಅರ್ಜುನ್, ದಿಗಂತ ಸ್ವರೂಪ, ರಾಜ್ ಕಮಲ್, ಲಕ್ಷ್ಮಣ ಶಿವಶಂಕರ್, ನಂದಕಿಶೋರ್ ಮತ್ತು ಲಾರೆನ್ಸ್ ಪ್ರೀತಂ ಅವರಂತಹ ಪ್ರತಿಭಾನ್ವಿತ ನಟರ ತಾರಾಬಳಗವಿರುವ ‘ಹೈನಾ’ ಚಿತ್ರಕ್ಕೆ ಲಕ್ಷ್ಮಣ್ ಶಿವಶಂಕರ್ ಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಲವ್ ಪ್ರಾಣ್ ಮೆಹ್ತಾ ಸಂಗೀತ ನಿರ್ದೇಶನ, ನಿಶಾಂತ್ ನಾನಿ ಛಾಯಾಗ್ರಹಣ ಹಾಗೂ ಶಮಿಕ್ ವಿ ಭಾರದ್ವಾಜ್ ಸಂಕಲನವಿರುವ “ಹೈನಾ” ಚಿತ್ರ ಈ ತಿಂಗಳ ಕೊನೆಯಲ್ಲಿ ತೆರೆಗೆ ಬರಲಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin