Review : ಅತಿಯಾದ ನಂಬಿಕೆ, ಆಸೆ ಅಪಾಯಕ್ಕೆ ದಾರಿ.. ಎಚ್ಚರ
ಚಿತ್ರ: ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು
ನಿರ್ದೇಶನ: ಕೇಶವಮೂರ್ತಿ
ತಾರಾಗಣ: ದಿಲೀಪ್ ರಾಜ್, ಶಿಲ್ಪಾ ಮಂಜುನಾಥ್, ಮಧುಸೂದನ್,ಅಪೂರ್ವ ಭಾರಧ್ವಜ್,ಪ್ರಸನ್ನ ಶೆಟ್ಟಿ, ವಂಶಿಕೃಷ್ಣ, ಹರಿ ಸಮಸ್ತಿ
ರೇಟಿಂಗ್ : 3.5/ 5
ನಮ್ಮ ನಮ್ಮ ವಸ್ತುಗಳಿಗೆ ನಾವೇ ಜವಾಬ್ದಾರರು. ಯಾವುದನ್ನೂ ಕೂಡ ಅತಿ ಮಾಡಬಾರದು, ಅತಿಯಾದ ಆಸೆ, ನಂಬಿಕೆ ಕೊನೆಗೆ ನಮಗೆ ಮುಳುವಾಗಲಿವೆ ಎನ್ನುವ ಸಂಗತಿಯನ್ನು ಮುಂದಿಟ್ಟುಕೊಂಡು ತೆರೆಗೆ ಬಂದಿರುವ ಚಿತ್ರ “ ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು”
ನಿರ್ದೇಶಕ ಕೇಶವಮೂರ್ತಿ ಸಾಮಾಜಿಕ ಕಳಕಳಿ ಮತ್ತು ಸಂದೇಶ ಸಾರುವ ಚಿತ್ರವನ್ನು ಈ ವಾರ ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಚಿತ್ರದ ಘಟನೆಗಳು ಸಮಾಜದ ವಾಸ್ತವಕ್ಕೆ ಕೈಗನ್ನಡಿಯೂ ಹೌದು.
ಬದುಕಿಗಾಗಿ ಡಿಲವರಿ ಬಾಯ್ ಆಗಿ ಕೆಲಸ ಮಾಡುತ್ತಲೇ ಕಳ್ಳತನ ಮಾಡುವುದು ಒಂದೆಡೆಯಾದರೆ ಕ್ರಿಪ್ಟೋÀಮೇನಿಯಾ ಎನ್ನುವ ರೋಗಕ್ಕೆ ತುತ್ತಾಗಿ ಶ್ರೀಮಂತರೂ ಕೂಡ ಕಣ್ಣಿಗೆ ಕಂಡದನ್ನು ಗಾಯಬ್ ಮಾಡುವ ಚಾಳಿ ಮತ್ತೊಂದೆಡೆ ಹಣವಿರುವ ಮಂದಿಯನ್ನು ಗುರಿಯಾಗಿಸಿಕೊಂಡು ಅವರಿಗೆ ಖೆಡ್ಡಾ ತೋಡಲು ಹೋಗಿ ರಾತ್ರಿ ಕಂಡ ಬಾವಿಗೆ ಹಗಲು ಬಿದ್ದರೆ ಹೇಗಿರುತ್ತದೆ. ಇಂತಹ ವಿಷಯಗಳನ್ನು ಮುಂದಿಟ್ಟುಕೊಂಡು ಸಿನಿಮಾ ಕಟ್ಟಿಕೊಡಲಾಗಿದೆ.
ಚಿತ್ರದ ಮತ್ತೊಂದು ಫ್ಲಸ್ ಪಾಯಿಂದ ಚಿತ್ರದ ಕಲಾವಿದರು, ಕಥಗೆ ಪೂರಕವಾದ ಕಲಾವಿದರು ಸಿಕ್ಕರೆ ನಿರ್ದೇಶಕನ ಪ್ರಯತ್ನ ಅರ್ದದಷ್ಟು ಗೆದ್ದಂತೆ ಎನ್ನುವ ಮಾತಿದೆ. ಅದಕ್ಕೆ ಈ ಚಿತ್ರವೂ ಕೂಡ ಉದಾಹಣೆ. ತಮ್ಮ ಹಾವ ಭಾವ ಕಣ್ಣ ಸನ್ನೆಯಲ್ಲೇ ಮೋಡಿ ಮಾಡುವ ಕಲಾವಿದ ದಿಲೀಪ್ ರಾಜ್, ಅಪೂರ್ವ ಭಾರದ್ವಜ್, ಶಿಲ್ಪಾ ಮಂಜುನಾಥ್, ಪ್ರಸನ್ನ ಶೆಟ್ಟಿ ಮಧುಸೂದನ್ ಹೀಗೆ ಕಲಾವಿದರು ತಮ್ಮ ಪಾತ್ರದ ಜೊತೆ ಜೊತೆಗೆ ಚಿತ್ರದ ಓಟ, ಓಘಕ್ಕೂ ಪೂರಕವಾಗಿದ್ದಾರೆ.
ಮೂರು ವಿಭಿನ್ನ ಕಥೆಗಳು ಮತ್ತು ಆಯಾಮಗಳನ್ನು ಒಟ್ಟುಗೂಡಿಸಿ ನಿರ್ದೇಶಕ ಕೇಶವಮೂರ್ತಿ ಚಿತ್ರವನ್ನು ಸೀಟಿನ ತುದಿಯಲ್ಲಿ ನಿಲ್ಲುವಂತೆ ಮಾಡಿದ್ದಾರೆ. ಒಂದೊಂದು ಕಥೆಯಲ್ಲಿಯೂ ಅದರದೇ ಆದ ಮಜ , ಥ್ರಿಲ್ ಇದೆ. ಅದರಲ್ಲಿಯೂ ಕೊನೆಯ ಭಾಗ ಸಮಾಜಕ್ಕೊಂದು ಸಂದೇಶ ನೀಡಿದೆ. ಅದು ಏನು ಎನ್ನುವುದನ್ನು ಚಿತ್ರದಲ್ಲಿ ನೋಡಿದರೆ ಚೆನ್ನ.
ನಟ ದಿಲೀಪ್ ರಾಜ್ ತಮಗೆ ಎಂತಹುದೇ ಪಾತ್ರ ಸಿಕ್ಕರೂ ನೀರು ಕುಡಿದಷ್ಟು ಸುಲಭ ಮತ್ತು ಸರಾಗವಾಗಿ ಮಾಡಬಲ್ಲ ನಟ, ಅವರ ಪ್ರತಿಭೆಗೆ ತಕ್ಕ ಪಾತ್ರ ಸಿಕ್ಕರೆ ಅವರ ಮತ್ತಷ್ಟು ಬೆಳವಣಿಗೆಯಾಗಲಿದೆ ಎನ್ನುವದರಲ್ಲಿ ಸಂದೇಹವಿಲ್ಲ.
ಉಳಿದಂತೆ ಶಿಲ್ಪಾ ಮಂಜುನಾಥ್, ಅಪೂರ್ವ ಭಾರದ್ವಜ್, ಪ್ರಸನ್ನ ಶೆಟ್ಟಿ, ಮಧುಸೂದನ್, ವಂಶಿಕೃಷ್ಣ, ಹರಿ ಸಮಸ್ತಿ ಮತ್ತಿತರ ಕಲಾವಿದರು ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ.
ಹೊಡಿ ಬಡಿ, ಇಲ್ಲ ಮರ ಸುತ್ತವ ಕಥೆಗಳ ನಡುವೆ ವಿಭಿನ್ನ ಜಾನರ್ ಇಷ್ಟ ಪಡುವ ಪ್ರೇಕ್ಷಕರಿಗೆ ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು” ಕಂಡಿತ ಇಷ್ಟವಾಗಬಹುದು.
ರೇಟಿಂಗ್ : ಕಳೆಪೆ – * / ಅಷ್ಟಕಷ್ಟೆ – ** / ಪರವಾಗಿಲ್ಲ – ***/ ಉತ್ತಮ – **** / ಅತ್ಯುತ್ತಮ – *****