ಅಗಲಿದ ಹಿರಿಯ ನಟಿ ಲೀಲಾವತಿ ಬಗ್ಗೆ ನಟ ನಟಿಯರು ಕಂಡಂತೆ …

ವಯೋಸಹಜ ಕಾಯಿಲೆಯಿಂದ ನಿನ್ನೆ ನಿಧನರಾದ ಬಹುಭಾಷಾ ನಟಿ ಲೀಲಾವತಿ ಅವರ ಪಾರ್ಥಿವ ಶರೀರದ ದರ್ಶನ ಪಡೆದ ಅನೇಕ ಮಂದಿ ಲೀಲಾವತಿ ಅವರ ಒಡನಾಟವನ್ನು ಸ್ಮರಣೆ ಮಾಡಿಕೊಂಡಿದ್ದಾರೆ.

ಬದುಕುಕಟ್ಟಿಕೊಂಡಿದ್ದ ಸೋಲದೇವನಹಳ್ಳಿಯಲ್ಲಿ ಗ್ರಾಮಸ್ಥರಲ್ಲಿ ಸೂತಕ ಛಾಯೆ ಮನೆ ಮಾಡಿದೆ. ಸೋಲದೇವನಹಳ್ಳಿ ಆಸ್ಪತ್ರೆ, ಪಶು ಆಸ್ಪತ್ರೆ ಕಲ್ಪಿಸಿದ್ದಾರೆ. ಜೊತೆಗೆ ಅಂಬ್ಯುಲೆನ್ಸ್, ರಸ್ತೆ, ಕುಡಿಯು ನೀರು ಸೇರಿದಂತೆ ಅನೇಕ ಸೌಲಭ್ಯ ಕಲ್ಪಿಸಿದ್ದಾರೆ.
ಲೀಲಾವತಿ ದೊಡ್ಡ ಕಲಾವಿದೆ
ಹಿರಿಯ ನಟಿ ಲೀಲಾವತಿ ಅವರು ದೊಡ್ಡ ನಟಿ. ಅವರಂತಹ ಕಲಾವಿದರು ಮತ್ತೊಮ್ಮೆ ಹುಟ್ಟಿ ಬರಲಾರರು ಎಂದು ಹಿರಿಯ ನಟಿ ಹರಿಣಿ ಹೇಳಿದ್ದಾರೆ.
ತಮ್ಮ ಅನೇಕ ಚಿತ್ರಗಳಲ್ಲಿ ನಾಐಕಿಯಾಗಿ ನಟಿಸಿದ್ದರು. ಅವರನ್ನೇ ಚಿತ್ರದಲ್ಲಿ ಹಾಕಿಕೊಳ್ಳಲು ಎರಡು ಕಾರಣ ಅವರು ಪಾತ್ರಕ್ಕೆ ಒಗ್ಗಿಕೊಳ್ಳುತ್ತಿದ್ದರಿಂದ ಅವರೇ ಬೇಕು ಎನ್ನುವುದು ಒಂದೆಡೆಯಾದರೆ ಚಿತ್ರದ ಸಂಭಾವನೆ ಇಷ್ಟೇ ಬೇಕು ಎಂದೂ ಬೇಡಿಕೆ ಇಟ್ಟವರಲ್ಲ. ನಾವಿಬ್ಬರೂ ಉತ್ತಮ ಸ್ನೇಹಿತರಾಗಿದ್ದೆವು, ನಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದೆವು ಎಂದರು.
ಕೆಲವೊಮ್ಮ ನಮ್ಮೊಳಗೆ ನಾವು ಮಾತನಾಡಿಕೊಳ್ಳುವ ಪರಿಸ್ಥಿತಿ, ಬಣ್ಣದ ಬದುಕಿನಲ್ಲಿ ಕಲಾವಿದರ ಬದುಕು ಬರೀ ಬೆಳಕಲ್ಲೇ ಇರುತ್ತದೆ ಎಂದು ನಂಬಬೇಡಿ ಕತ್ತಲಯಲ್ಲೇ ಇರಲಿದೆ. ನಮಗೂ ನೋವು ಕಷ್ಟಗಳಿವೆ ಎಂದಿದ್ದಾರೆ.
ಲೀಲಮ್ಮ ಎನ್ನುವೆ: ದ್ವಾರಕೀಶ್
ಹಿರಿಯ ನಟಿ ಲೀಲಾವತಿ ಅವರನ್ನು ಲೀಲಮ್ಮ ಅಂತನೇ ಕರೀತಿನಿ. ಕನ್ನಡ ಚಿತ್ರರಂಗ ಕಂಡ ಕಂಡ ಪ್ರತಿಭಾನ್ವಿತ ನಟಿಯರಲ್ಲಿ ಮುಂಚೂಣಿಯಲ್ಲಿದ್ದರು. ನಾಯಕಿ ಅಷ್ಟೇ ಅಲ್ಲ. ಪೋಷಕ ಪಾತ್ರದಲ್ಲಿ ಮಿಂಚಿದ್ದರು. ರಾಜ್‍ಕುಮಾರ್ ಲೀಲಾವತಿ ಜೋಡಿ ಎಂದರೆ ಅತ್ಯಂತ ಜನಪ್ರಿಯ ಜೋಡಿ . 60ರ ದಶಕದಲ್ಲಿ ಮಾಡಿದ ಚಿತ್ರಗಳು ಅತ್ಯಂತ ಯಶಸ್ವಿ ಚಿತ್ರಗಳನ್ನು ಇಬ್ಬರೂ ನೀಡಿದ್ದಾರೆ. ಅವರ ಮಗನ್ನು ಹಾಕಿಕೊಂಡು ಡ್ಯಾನ್ಸ್ ರಾಜ ಡ್ಯಾನ್ಸ್ ಚಿತ್ರ ಮಾಡಿದ್ದೆ ಎಂದಿದ್ದಾರೆ ಎಂದು ಹಿರಿಯ ನಟ ,ನಿರ್ಮಾಪಕ ದ್ವಾರಕೀಶ್ ಹೇಳಿದ್ಧಾರೆ.
ರೋಲ್ ಮಾಡೆಲ್: ಸುಧಾರಾಣಿ
ಲೀಲಾವತಿ ಎಂದಾಗ ಅವರ ನಗುಮುಖ ಸದಾ ನೆಪಾಗುತ್ತದೆ. ಲೀಲಾವತಿ ಅವರು ನಟಿಸಿದ್ದ ಚಿತ್ರದಲ್ಲಿ ನಾನು ಮೊದಲ ಭಾರಿಗೆ ನಟಿಸಿದ್ದೆ. ಇತ್ತೀಚೆಗೆ ಅವರನ್ನು ಭೇಟಿ ಮಾಡಿ ಬಂದಿದ್ದವು. ನನಗೆ ವಯಕ್ತಿಯವಾಗಿ ರೋಲ್ ಮಾಡೆಲ್. ಒಳ್ಳೆಯ ನಟಿಯಾಗಿ, ತಾಯಿ ಯಾಗಿ ಅಷ್ಟೇ ಅಲ್ಲ, ಪರಿಸರ, ಗಿಡ ಮರ ಪ್ರೀತಿಸುತ್ತಿದ್ದರು. ಅವರನ್ನು ಕಳೆದುಕೊಂಡಿರುವುದು ಚಿತ್ರರಂಗದಕ್ಕೆ ದೊಡ್ಡ ನಷ್ಟ. ಲೀಲಾವತಿ ಅವರು ಕೆಲಸ ಮತ್ತು ಚಿತ್ರದ ಮೂಲಕ ಸದಾ ನೆನಪಾಗಿರಲಿದ್ದಾರೆ. ಇತ್ತೀಚೆಗೆ ಅವರ ಮನೆಗೆ ಹೋದಾಗ ಎಲ್ಲರನ್ನು ಪ್ರೀತಿಸುತ್ತಿದ್ದರು. ಚಿತ್ರೀಕರಣದ ಸಮಯದಲ್ಲಿ ಎಲ್ಲರಿಗೂ ಅಡುಗೆ ಮಾಡಿ ಹಾಕುತ್ತಿದ್ದರು. ಆ ಎಲ್ಲಾ ವಿಷಯ ನೆನಪಾಯಿತು ಎಂದು ಹಿರಿಯ ನಟಿ ಸುಧಾರಾಣಿ ಹೇಳಿದ್ದಾರೆ
ಅಮ್ಮ ಸದಾ ನೆನಪು: ಮಾಳವಿಕ
ಲೀಲಾವತಿ ಅಮ್ಮ ಅವರು ಸದಾ ನೆನಪಿನಲ್ಲಿ ಇರಲಿದ್ದಾರೆ. ಇತ್ತೀಚೆಗೆ ಅವರ ಮನೆಗೆ ಹೋದಾಗ ಎಲ್ಲರನ್ನು ಪ್ರೀತಿಯಿಂದ ಕಂಡು ನಡೆಯಲು ಆಗದಿದ್ದರೂ ಊಟ ಮಾಡಿದ್ರಾ, ಹೇಗಿದ್ದೀರಿ ಎಂದು ಎಲ್ಲರನ್ನು ಪ್ರೀತಿಯಿಂದ ವಿಚಾರಿಸಿಕೊಂಡಿದ್ದರು. ಅವರ ಅಗಲಿಕೆ ನೋವು ತಂದಿದೆ. ನಟ ವಿನೋದ್ ರಾಜ್ ಅವರಿಗೆ ಅಗಲಿಕೆಯ ನೋವು ಭರಿಸುವ ಶಕ್ತಿ ನೀಡಲಿ ಎಂದು ನಟಿ ಮಾಳವಿಕ ಅವಿನಾಶ್ ಹೇಳಿದ್ದಾರೆ
ನೋವಿನ ಸಂಗತಿ- ರಾಮಮೂರ್ತಿ
ಕನ್ನಡ ಚಿತ್ರರಂಗದ ಮೇರು ನಟಿ ಲೀಲಾವತಿ ಅವರು ನಿಧನರಾಗಿರುವ ಸುದ್ದಿ ತಿಳಿದು ಬಹಳ ನೋವಾಯಿತು. ಅವರ ಚಿತ್ರಗಳ ಮೂಲಕ ಲೀಲಾವತಿ ಅವರು ಸದಾ ನಮ್ಮೊಂದಿಗೆ ಇರುತ್ತಾರೆ. ದೇವರು ಅವರಿಗೆ ಸದ್ಗತಿ ನೀಡಿಲಿ ಎಂದು ಪ್ರಾರ್ಥಿಸುವುದಾಗಿ ನಿರ್ಮಾಪಕರ ಸಂಘದ ಉಪಾಧ್ಯಕ್ಷ ಎಂ.ಜಿ.ರಾಮಮೂರ್ತಿ ತಿಳಿಸಿದ್ದಾರೆ.
ಪ್ರೀತಿಸುವ ಗುಣ ಇತ್ತು” ಪೂಜಾಗಾಂಧಿ
ಚಿಕ್ಕ ಕಲಾವಿದರನ್ನು ಪ್ರೀತಿಸುವ ಗುಣ ಅವರಲ್ಲಿತ್ತು ಎಂದು ನಟಿ ಪೂಜಾ ಗಾಂಧಿ ಹೇಳಿದ್ದಾರೆ. ಇತ್ತೀಚೆಗೆ ಅವರನ್ನು ಭೇಟಿ ಮಾಡಿದ್ದ ವೇಳೆ ಪೂಜಾಗಾಂಧಿ ಎನ್ನುತ್ತಿದ್ದಂತೆ ಮುಂಗಾರು ಮಳೆ ಚಿತ್ರದಲ್ಲಿ ನಟಿಸಿದ್ದೆ ಅಲ್ಲವೆ ಎಂದು ಅವರ ಒಡನಾಟ ಸ್ಮರಿಸಿಕೊಂಡರು ನಟಿ ಪೂಜಾಗಾಂಧಿ
ತುಂಬಲಾರದ ನಷ್ಟ;
ಕನ್ನಡ ಚಲನಚಿತ್ರರಂಗದ ಹಿರಿಯ ಕಲಾವಿದೆ ಲೀಲಾವತಿ ಅವರ ನಿಧನ ನಿಜಕ್ಕೂ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ತಮ್ಮ ಅಮೋಘ ಅಭಿನಯದಿಂದ ಅಭಿಮಾನಿಗಳ ಮನಗೆದ್ದಿರುವ ಅಪ್ರತಿಮ ಕಲಾವಿದೆ. ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಸ್ಥಾಪಕ ದಿ.ಡಿ.ವಿ.ಸುಧೀಂದ್ರ ಅವರೆಂದರೆ ಲೀಲಾವತಿ ಅವರಿಗೆ ಅಚ್ಚುಮೆಚ್ಚು.
ಡಿ.ವಿ.ಸುಧೀಂದ್ರ ಸ್ನೇಹಿತರೊಂದಿಗೆ ಸೇರಿ ನಿರ್ಮಿಸಿದ್ದ ರೆಬಲ್ ಸ್ಟಾರ್ ಅಂಬರೀಶ್ ಅಭಿನಯದ “ಒಲವಿನ ಉಡುಗೊರೆ” ಚಿತ್ರದಲ್ಲೂ ಲೀಲಾವತಿ ನಟಿಸಿದ್ದರು. ಲೀಲಾವತಿ ಅವರು ಅಭಿನಯಿಸಿರುವ ಸಾಕಷ್ಟು ಚಿತ್ರಗಳಿಗೂ ಸುಧೀಂದ್ರ ಪಿ.ಆರ್.ಓ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲೀಲಾವತಿ ಅವರಿಗೆ ಅತ್ಯುತ್ತಮ ಪೆÇೀಷಕ ನಟಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಹಲವು ದಶಕಗಳ ಕಾಲ ತಮ್ಮ ಅಮೋಘ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಲೀಲಾವತಿ ಅವರ ನಿಧನಕ್ಕೆ ರಾಘವೇಂದ್ರ ಚಿತ್ರವಾಣಿ ಸಂಸ್ಥೆ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಪ್ರೀತಿದಾಯ ವ್ಯಕ್ತಿ
ಹಿರಿಯ ನಟಿ ಲೀಲಾವತಿ ಅವರು ಪ್ರೀತಿದಾಯಕ ವ್ಯಕ್ತಿ. ನಮ್ಮಂತಹ ಅನೇಕ ನಟಿಯರಿಗೆ ಸ್ಪೂರ್ತಿ ಎಂದು ನಟಿ ಹಾಗು ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಹೇಳಿದ್ಧಾರೆ
ಹಾಸ್ಯ ಸಏರಿದಂತೆ ಎಲ್ಲಾ ರೀತಿಯ ಪಾತ್ರಗಳಿಗೆ ಜೀವ ತುಂಬಿದ್ದ ಹಿರಿಯ ಕಲಾವಿದೆ. ಅಂತವರನ್ನು ಕಳೆದಕೊಂಡು ಚಿತ್ರರಂಗ ನೋವು ತಂದಿದೆ ಎಂದಿದ್ದಾರೆ.
ವಯಕ್ತಿಕ ಜೀವನವನ್ನು ವೃತ್ತಿ ಬದುಕಿನ ಜೊತೆ ಯಾರೊಂದಿಗೆ ಮಾಹಿತಿ ಹಂಚಿಕೊಂಡಿರಲಿಲ್ಲ. ತಾಯಿ- ಮಗನ ಬಾಂಧವ್ಯ ಅದರ್ಶ ಎಂದು ಹೇಳಿದರು.
ಅಭಿಜಾತ ಕಲಾವಿದೆ
ಸರಳವಾಗಿ ಬದುಕಿದ ಹಿರಿಯ ನಟಿ ಲೀಲಾವತಿ ಅವರು ಕನ್ನಡ ಚಿತ್ರರಂಗ ಕಂಡ ಅಭಿಜಾತ ಕಲಾವಿದೆ ಎಂದು ಹಿರಿಯ ನಟ ಕುಮಾರ್ ಗೋವಿಂದ್ ಹೇಳಿದ್ದಾರೆ.
ಅಮ್ಮ ಈಗ ಇಲ್ಲ. ಅವರ ನೆನಪು ನಮ್ಮೊಂದಿಗೆ ಇದೆ. ಶ್ರೀಮಂತಿಕೆಯನ್ನು ನಾವು ತೋರಿಸಲು ಆಗಲಲ್ಲ. ಹಸಿರು, ಗಿಡ ಮರ ಬೆಳೆಸಿದ್ದಾರೆ.ಅದನ್ನು ಫೋಷಿಸುವ ಮತ್ತು ಮುಂದುವರಿಸಿಕೊಂಡು ಹೋಗುವ ಮೂಲಕ ಅವನ್ನು ಗೌರವಿಸುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.
ಅಮ್ಮ ಎಲ್ಲವನ್ನೂ ಮಾಡಿದ್ದಾರೆ
ಲೀಲಾವತಿ ಅಮ್ಮ ಅವರು ಗ್ರಾಮಸ್ಥರಿಗಾಗಿ ಆನೇಕ ಕೆಲಸ ಮಾಡಿಕೊಟ್ಟದ್ದಾರೆ ಎನ್ನುವುದನ್ನು ಕೇಳಿದ್ದೇನೆ. ನಿಜಕ್ಕೂ ಅವರೊಬ್ಬ ಅಪ್ರತಿಮೆ ಕಲಾವಿದೆ ಎಂದು ಹಿರಿಯ ನಟಿ ಮಹಾಲಕ್ಷ್ಮಿ ಗುಣಗಾನ ಮಾಡಿದ್ದಾರೆ.
ಅವರ ಜೊತೆ ಚಿತ್ರಗಳಲ್ಲಿ ಕೆಲಸ ಮಾಡುವ ಅನುಭವವೇ ಒಂದು ರೋಚಕ. ದೈಹಿಕವಾಗಿ ಇಲ್ಲದಿದ್ದರೂ ಅವರ ತಮ್ಮ ಚಿತ್ರಗಳ ಮೂಲಕ ಸದಾ ನೆನಪಿನಲ್ಲಿ ಉಳಿಯಲಿದ್ದಾರೆ . ಅವರ ಬಗ್ಗೆ ಎಷ್ಟೇ ಮಾತನಾಡಿದರೂ ಸಾಲದು ಎಂದು ಭಾವುಕರಾಗಿದ್ದಾರೆ.
ಎಲ್ಲರನ್ನು ಪ್ರೀತಿಯಿಂದ ಕಾಣುತ್ತಿದ್ದರು
ಹಿರಿಯ ನಟಿ ಲೀಲಾವತಿ ಅವರು ಸೋಲದೇವನಹಳ್ಳಿಯ ಗ್ರಾಮಸ್ಥರಿಗೆ ಒಂದು ರೀತಿ ದೇವತೆ ರೀತಿ ಇದ್ದರು ಗ್ರಾಮಸ್ಥರಿಗೆ ಬೇಕಾದ ಎಲ್ಲಾ ಕೆಲಸ ಮಾಡಿಕೊಡುತ್ತಿದ್ದರು. ಎಲ್ಲರನ್ನು ಪ್ರೀತಿಯಿಂದ ನೋಡುತ್ತಿದ್ದರು. ಗ್ರಾಮಕ್ಕೆ ಬೇಕಾದ ಎಲ್ಲಾ ಮೌಲ ಸೌಕರ್ಯ ಕಲ್ಪಿಸಿ ಈ ಭಾಗದ ಜನರಿಗೆ ದೇವತೆ ರೂಪದಲ್ಲಿದ್ದರು ಎಂದು ಸೋಲದೇವನಹಳ್ಳಿಯ ಜನರು ಕಣ್ಣಿರು ಹಾಕಿದ್ದಾರೆ.
ಅನೇಕರಿಗೆ ಆರ್ಥಿಕ ನೆರವು
ಚಿತ್ರರಂಗದ ಅಶಕ್ತ ಕಲಾವಿದರಿಗಾಗಿ ಹಿರಿಯ ನಟಿ ಲೀಲಾವತಿ ಅವರು ಕೊರೋನಾ ಸಮಯ ಮತ್ತು ಅದಕ್ಕೂ ಹಿಂದಿನಿದ ಪ್ರತಿ ತಿಂಗಳು ಹಣ ಕಳುಹಿಸುತ್ತಿದ್ದರು ಎನ್ನುವ ಸಂಗತಿ ಇದೀಗ ಬೆಳಕಿಗೆ ಬಂದಿದೆ
ಪ್ರತಿತಿಂಗಳು 40ಕ್ಕೂ ಅಧಿಕ ಚಿತ್ರರಂಗದ ಮಂದಿಗೆ ಸುಮಾರು ಒಂದು ಲಕ್ಷ ರೂಪಾಯಿ ಹಣವನ್ನು ತಮ್ಮ ಕೈಯಿಂದ ಎಲ್ಲರ ಬ್ಯಾಂಕ್ ಖಾತೆಗೆ ಕಳುಹಿಸುವ ಮೂಲಕ ಅವರಿಗೆ ನೆರವಾಗಿದ್ದರು ಎಂದು ಕಲಾವಿದರಿಗೆ ಹಣ ಕಳುಹಿಸಿದ್ದ ಅಂಗಡಿವಯ ಈ ವಿಷಯ ಬಹಿರಂಗ ಪಡಿಸಿದ್ದಾರೆ.