ನಂದಿ ಫಿಲ್ಮಂ ಅವಾರ್ಡ್ : ಭಾರತಿ ವಿಷ್ಣುವರ್ಧನ್ -ಜೀವಮಾನ ಸಾಧನೆ ಗೆ, ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ,ನಿರ್ದೇಶಕ ಪ್ರಶಸ್ತಿ

ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ನಂದಿ ಚಲನಚಿತ್ರ ಪ್ರಶಸ್ತಿ ಪ್ರಾರಂಭವಾಗಿದೆ. ಪ್ರತಿಭೆಗಳನ್ನು ನಾವೇ ಗುರುತಿಸಿ ಬೆನ್ನು ತಟ್ಟುವ ಪ್ರಯತ್ನ ಮಾಡಬೇಕಿದೆ. ಇದನ್ನೆಲ್ಲಾ ಮನಗಂಡು, ಚರ್ಚಿಸಿ ಮಂಡಳಿ ನಂದಿ ಪ್ರಶಸ್ತಿ ನೀಡಿದೆ.
ನಟ ರವಿಚಂದ್ರನ್, ರಿಷಬ್ ಶೆಟ್ಟಿ, ಧ್ರುವ ಸರ್ಜಾ, ಹಿರಿಯ ನಟ ಶ್ರೀನಾಥ್, ನಟಿ ಪ್ರೇಮ, ವಿನೋದ್ ರಾಜ್, ಅನುಪ್ರಭಾಕರ್, ಉಮಾಶ್ರೀ ಇನ್ನೂ ಹಲವು ನಟ-ನಟಿಯರು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮತ್ತಷ್ಟು ಕಳೆ ತಂದಿದ್ದಾರೆ.

ನೆರೆಯ ಆಂಧ್ರಪ್ರದೇಶ ಮನರಂಜನಾ ಕ್ಷೇತ್ರದ ಸಾಧಕರಿಗೆ ಕೊಡುವ ರಾಜ್ಯ ಪ್ರಶಸ್ತಿಗೂ ನಂದಿ ಅವಾಡ್ರ್ಸ್ ಎಂದೇ ಹೆಸರಿದೆ. ಆ ಪ್ರಶಸ್ತಿಗೂ ಈ ಪ್ರಶಸ್ತಿಗೂ ಸಮಬಂಧವಿಲ್ಲ. ಆಂಧ್ರಪ್ರದೇಶದಂತೆ ಕನ್ನಡದ ಪ್ರಶಸ್ತಿಗೂ ನಂದಿ ಅವಾರ್ಡ್ ಎಂದೇ ಕರೆಯಲಾಗುತ್ತಿದೆ. ನಂದಿ ಎನ್ನುವುದು ಕನ್ನಡದ ಪಾಲಿಗೂ ಒಂದು ಪವರ್‍ಫುಲ್ ಇಮೇಜ್ ಎನಿಸುವ ಲಾಂಛನ. ಆ ಕಾರಣದಿಂದಲೇ `ನಂದಿ’ ಎಂಬ ಹೆಸರನ್ನೇ ಕನ್ನಡದ ಪ್ರಶಸ್ತಿಗೂ ಇಡಲಾಗಿದೆ.
ನಟ ರವಿಚಂದ್ರನ್ ಮಾತನಾಡಿ, `ನಂದಿ ಪ್ರಶಸ್ತಿ ನೀಡುತ್ತಿರುವುದು ಬಹಳ ಖುಷಿಯಾಗಿದೆ. ಪ್ರಶಸ್ತಿ ಬಹಳ ಭಾರವಾಗಿದೆ ಅದು ನನಗೆ ಖುಷಿ ಕೊಟ್ಟಿತು, ನನ್ನಂಥ ಶಿವ ಭಕ್ತನಿಂದ ನಂದಿ ಪ್ರಶಸ್ತಿ ಕೊಡಿಸುತ್ತಿದ್ದೀರ. ಎಲ್ಲರ ಮನೆಗಳಿಗೂ ನಂದಿ ಸೇರುತ್ತದೆ ಎಂಬುದು ನನಗೆ ಖುಷಿ’ ಎಂದರು.
ನಟ ಶ್ರೀನಾಥ್ ಅವರಿಗೆ ಜೀವನಮಾನ ಸಾಧನೆಗೆ ಲೈಫ್ ಟೈಮ್ ಅಚೀವ್ಮೆಂಟ್ ಅವಾರ್ಡ್ ನೀಡಲಾಯ್ತು.
ವಾಣಿಜ್ಯ ಮಂಡಳಿ ನಿಕಟ ಪೂರ್ವ ಅಧ್ಯಕ್ಷ ಭಾ.ಮಾ.ಹರೀಶ್, ನಿರ್ಮಾಪಕ ನಿತ್ಯಾನಂದ ಪ್ರಭು, ಪದ್ಮಾವತಿ ಚಂದ್ರಶೇಖರ್ ಹಾಗೂ ಅನಿತಾ ರೆಡ್ಡಿ ಪ್ರಶಸ್ತಿ ಸಂಸ್ಥಾಪರಾಗಿದ್ದು, ಭಾ.ಮಾ.ಗಿರೀಶ್, ಹರ್ಷಿತಾ, ನಂದಿತಾ ಹಾಗೂ ಆಶೋಕ್ ನಿರ್ದೇಶಕರಾಗಿದ್ದಾರೆ

ಯಾರಿಗೆಲ್ಲ ಪ್ರಶಸ್ತಿ
- ಜೀವನಾದರಿತ ಚಿತ್ರ- ವಿಜಯಾನಂದ ಫಿಲ್ಮ್.
- ಹಿರಿಯ ನಟಿ ಲೀಲಾವತಿ
- ಜೀವಮಾನ ಸಾಧನೆ ಪ್ರಶಸ್ತಿ: ನಟ ಶ್ರೀನಾಥ್ ಹಾಗೂ ಭಾರತಿ ವಿಷ್ಣುವರ್ಧನ್.
- ಅತ್ಯತ್ತಮ ಡಾಕ್ಯುಮೆಂಟ್ರಿ ಪ್ರಶಸ್ತಿ: ಗಂಧದಗುಡಿ.
- ಅತ್ಯತ್ತುಮ ನಟ ಮೊಲದ ಚಿತ್ರ ; ವಿಕ್ರಮ್ ರವಿಚಂದ್ರನ್.
- ಅತ್ಯುತ್ತ ನಟಿ ಮೊದಲ ಚಿತ್ರ; ರೀಷ್ಮಾ ನಾಣಯ್ಯ.
- ಹಾಸ್ಯ ಕಲಾವಿದ- ರಂಗಾಯಣ ರಘು.
- ಹಾಸ್ಯ- ಅಕ್ಟ್ರೆಸ್ ಹೇಮಾದತ್.
- ಪೋಷಕ ನಟಿ : ವೀಣಾ ಸುಂದರ್.
- ಅತ್ಯುತ್ತಮ ಕ್ರಿಟಿಕ್ ಪ್ರಶಸ್ತಿ ನಟ : ಸಂಚಾರಿ ವಿಜಯ್.
- ಅತ್ಯುತ್ತಮ ಸಂಭಾಷಣೆಕಾರ ಮಾಸ್ತಿ.
- ಅತ್ಯುತ್ತಮ ಚಿತ್ರ.777 ಚಾರ್ಲಿ.
- ಅತ್ಯುತ್ತಮ ನಿರ್ದೇಶಕ. ರಿಷಬ್ ಶೆಟ್ಟಿ.
- ಅತ್ಯುತ್ತಮ ನಟ. ರಿಷಬ್ ಶೆಟ್ಟಿ.
- ಅತ್ಯುತ್ತಮ ನಟಿ-ಸಪ್ತಮಿ ಗೌಡ
- ಅತ್ಯುತ್ತಮ ಖಳನಟ-ಡಾಲಿ ಧನಂಜಯ್
- ಪೋಷಕ ನಟ -ಲೂಸ್ ಮಾದ ಯೋಗಿ
- ಕ್ರಿಟಿಕ್ ಪ್ರಶಸ್ತಿ ನಟಿ -ಹರಿಪ್ರಿಯಾ-ಅನುಪ್ರಭಾಕರ್
- ಅತ್ಯುತ್ತಮ ಛಾಯಾಗ್ರಾಹಕ- ಕೆ.ಎನ್.ನಾಗೇಶ್ ಕುಮಾರ್
- ಉತ್ತಮ ಪಿಆರ್‍ಓ -ನಾಗೇಂದ್ರ