Rajkumar - Lilavati Jodi is a popular couple in the film industry : CM

ರಾಜ್ ಕುಮಾರ್ – ಲೀಲಾವತಿ ಜೋಡಿ ಚಿತ್ರರಂಗದದ ಜನಪ್ರಿಯ ಜೋಡಿ : ಸಿಎಂ - CineNewsKannada.com

ರಾಜ್ ಕುಮಾರ್ – ಲೀಲಾವತಿ ಜೋಡಿ ಚಿತ್ರರಂಗದದ ಜನಪ್ರಿಯ ಜೋಡಿ : ಸಿಎಂ

ಕುಲವಧು , ಗೆಜ್ಜೆ ಪೂಜೆ ಚಿತ್ರ ಅತ್ಯಂತ ಇಷ್ಟವಾದ ಚಿತ್ರಗಳು. ಯಶಸ್ವಿಯಾಗುವುದು ಬೇರೆ. ಅವರಿಗೆ ಯಾವುದೇ ಪಾತ್ರ ಕೊಟ್ಟರೂ ಜೀವ ತುಂಬುತ್ತಿದ್ದರು. ಕಲೆಯನ್ನು ಉಳಿಸಿದ್ದರು. ಪರಿಪೂರ್ಣ ಕಲಾವಿದೆ ಎಂದು ಬಣ್ಣಿಸಿದ್ದಾರೆ.

ಕನ್ನಡ ಚಲನಚಿತ್ರ ಕಂಡ ಅಪರೂಪದ ಕಲಾವಿದೆ. ನೈಜ ಕಲಾವಿದೆ. ರಂಗಭೂಮಿಯಿಂದ ಸಿನಿಮಾಕ್ಕೆ ಬಂದು ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲಿ 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಎಲ್ಲಾ ನಟಿಸಿ ಸೈ ಎನಿಸಿಕೊಂಡು ಬಹುಭಾಷ ಕಲಾವಿದೆ. ಯಾವುದೇ ಪಾತ್ರವಾದರೂ ಸರಿ ನಾಯಕಿ, ಪೋಷಕ ಪಾತ್ರವಿದ್ದರೂ ಅದಕ್ಕೆ ಜೀವ ತುಂಬಿ ಅಭಿನಯಿಸುತ್ತಿದ್ದರು ಎಂದು ಗುಣಗಾನ ಮಾಡಿದ್ದಾರೆ.

ಲೀಲಾವತಿ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿ ಶೋಕದಲ್ಲಿರುವ ಪುತ್ರ ವಿನೋದ್ ರಾಜ್ ಅವರಿಗೆ ಸಾಂತ್ವಾನ ಹೇಳಿದ ಬಳಿಕ ಮಾತನಾಡಿದ ಅವರು ಲೀಲಾವತಿ ಅವರ ನಿಧನದ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಠ ವಾರದ ಹಿಂದೆ ಅವರನು ಭೇಟಿ ಮಾಡಿ ಮಾಡಿದ್ದೆ. ತಾಯಿ ನಿನ್ನೆ ಮೇಲೆ ಪ್ರೀತಿ ಇಟ್ಟುಕೊಂಡಿದ್ದರು. ಆದರ್ಶವಾದ ತಾಯಿ ಮಕ್ಕಳು ಕೊನೆ ಬಾರಿ ಚೆನ್ನಾಗಿ ನೋಡಿಕೊಳ್ಳಪ್ಪ ಎಂದಿದ್ದೆ ಎಂದು ಹೇಳಿದ್ಧಾರೆ.

ಲೀಲಾವತಿ ಅವರ ಅನೇಕ ಚಿತ್ರಗಳನ್ನು ನೋಡಿದ್ದೇನೆ. ನಮ್ಮ ಕಾಲದಲ್ಲಿ ರಾಜ್ ಕುಮಾರ್ ಲೀಲಾವತಿ ಅವರ ಜೋಡಿ ಜನಪ್ರಿಯವಾದ ಜೋಡಿ. 60-70 ರದಶಕದಲ್ಲಿ ಬಹುತೇಕ ಸಿನಿಮಾ ನೋಡಿದ್ದೇನೆ. ಕುಲವಧು , ಗೆಜ್ಜೆ ಪೂಜೆ ಚಿತ್ರ ಅತ್ಯಂತ ಇಷ್ಟವಾದ ಚಿತ್ರಗಳು. ಯಶಸ್ವಿಯಾಗುವುದು ಬೇರೆ. ಅವರಿಗೆ ಯಾವುದೇ ಪಾತ್ರ ಕೊಟ್ಟರೂ ಜೀವ ತುಂಬುತ್ತಿದ್ದರು. ಕಲೆಯನ್ನು ಉಳಿಸಿದ್ದರು. ಪರಿಪೂರ್ಣ ಕಲಾವಿದೆ ಎಂದು ಬಣ್ಣಿಸಿದ್ದಾರೆ.

ಐತಿಹಾಸಿಕ, ಸಾಮಾಜಿಕ, ಪೌರಾಣಿಕ ಸೇರಿ ಯಾವುದೇ ಪಾತ್ರ ಕೊಟ್ಟರೂ ಲೀಲಾಜಾಲವಾಗಿ ನಟಿಸುತ್ತಿದ್ದ ಅಪ್ರತಿಮ ಕಲಾವಿದೆ. ಸಾವಿನ ದುಃಖ ಆಗಿದೆ. ಭಕ್ತ ಕುಂಬಾರ ಚಿತ್ರದ ಅಭಿನಯ ಮರೆಯಲಾಗದು. ತಾಯಿ, ತಂಗಿ ಅಜ್ಜಿ ಪಾತ್ರಕ್ಕೂ ಜೀವ ತುಂಬುತ್ತಿದ್ದರು. ಜೊತೆಗೆ ಅದರಲ್ಲಿ ತಲ್ಲೀನರಾಗುತ್ತಿದ್ದರು. ಅದು ಎಲ್ಲರಿಗೂ ಆಗುತ್ತಿರಲಿಲ್ಲ. ರಾಜ್ ಕುಮಾರ್ ಮತ್ತು ಲೀಲಾವತಿ ಅವರಿಗೆ ಇದು ಕರಗತವಾಗಿತ್ತು ಎಂದಿದ್ದಾರೆ.

ಸಾಮಾಜಿಕ ಕೆಲಸದಲ್ಲಿ ಸೇವೆ ಸಲ್ಲಿಸಿದ್ದಾರೆ. ಗಳಿಸಿದ ಹಣವನ್ನು ಸಾರ್ವಜನಿಕರಿಗೆ ಖರ್ಚು ಮಾಡಿದ್ದಾರೆ. ಆಸ್ಪತ್ರೆ ಕಟ್ಟಿಸಿ ಜನರಿಗೆ ನೆರವಾಗಿದ್ದಾರೆ. ಯಾವುದೇ ಜೀವ ರಾಶಿಯನ್ನು ಪ್ರೀತಿಸುವ ಗುಣ ಹೊಂದಿದ್ದರು. ದಯೇಯೇ ಧರ್ಮದ ಮೂಲವಯ್ಯ ಎನ್ನುವುದು ರಕ್ತಗತವಾಗಿ ಬಂದಿತ್ತು. ಚಿತ್ರರಂಗಕ್ಕೆ ದೊಡ್ಡ ನಷ್ಟ ಎಂದು ಹೇಳಿದ್ದಾರೆ.

ಅನೇಕ ಕಲಾವಿದರಿಗೆ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದರು. ಮಗನನ್ನು ಬಹಳವಾಗಿ ಪ್ರೀತಿಸುತ್ತಿದ್ದರು. ಅವರ ತಾಯಿತನ ಅವರಲ್ಲಿತ್ತು. ಅವರೊಬ್ಬ ಅಪರೂಪದ ಕಲಾವಿದೆ. ಮಗನಿಗಾಗಿ ಸಿನಿಮಾ ಮಾಡಿದ್ದರು. ತಾಯಿಯ ಅಗಲಿಗೆ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ

ಸರ್ಕಾರಿ ಗೌರವ

ಹಿರಿಯ ನಟಿ ಲೀಲಾವತಿ ಅವರಿಗೆ ಸರ್ಕಾರದ ಎಲ್ಲಾ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲು ಆದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin