Award for “September 10” directed by senior director Om Sai Prakash
ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ನಿರ್ದೇಶನದ “ಸೆಪ್ಟೆಂಬರ್ 10”ಕ್ಕೆ ಪ್ರಶಸ್ತಿ
ಶತ ಚಿತ್ರಗಳ ಸರದಾರ ಓಂ ಸಾಯಿಪ್ರಕಾಶ್ ನಿರ್ದೇಶನ ಹಾಗೂ ನಿರ್ಮಾಣದ ಸೆಪ್ಟೆಂಬರ್ 10 ಚಿತ್ರ ಬಿಡುಗಡೆಗೂ ಮುನ್ನವೇ ಅಂತರರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿದೆ.
ಎಲ್ಲಾ ಸಮಸ್ಯೆಗಳಿಗೆ ಆತ್ಮಹತ್ಯೆ ಒಂದೇ ಪರಿಹಾರವಲ್ಲ ಎಂಬ ಸಂದೇಶ ಹೊತ್ತು ತೆರೆಗೆ ಬರುತ್ತಿರುವ ಸೆಪ್ಟೆಂಬರ್ 10 ಚಲನಚಿತ್ರಕ್ಕೆ ಇದೀಗ ಯುನಿವರ್ಸಲ್ ಫಿಲಂ ಮೇಕರ್ಸ್ ಕೌನ್ಸಿಲ್, ಜೆನಸಿಸ್ ಅಲ್ಟಿಮಾ ದುಬೈನ ಸಹಯೋಗದೊಂದಿಗೆ ನಡೆದ ಹೈದರಾಬಾದ್ನ ಚಾರ್ ಮಿನಾರ್ 17ನೇ ಅಂತರ ರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಗಳಿಸಿದೆ.
ಹೈದರಾಬಾದ್ ನ ಪ್ರಸಾದ್ ಫಿಲಂ ಲ್ಯಾಬ್ ನಲ್ಲಿ ಜುಲೈ 26, 27ರಂದು ನಡೆಯುತ್ತಿರುವ Áರ್ಯಕ್ರಮದಲ್ಲಿ ನಿರ್ದೇಶಕ ಹಾಗೂ ನಿರ್ಮಾಪಕ ಸಾಯಿಪ್ರಕಾಶ್ ಅವರು ಈ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

