BaadShah Kiccha Sudeep supports Dodmane family's movie "Pepe".

ದೊಡ್ಮನೆ ಕುಟುಂಬದ ಕುಡಿಯ “ಪೆಪೆ” ಚಿತ್ರಕ್ಕೆ ಬಾದ್ ಷಾ ಕಿಚ್ಚ ಸುದೀಪ್ ಬೆಂಬಲ - CineNewsKannada.com

ದೊಡ್ಮನೆ ಕುಟುಂಬದ ಕುಡಿಯ “ಪೆಪೆ” ಚಿತ್ರಕ್ಕೆ ಬಾದ್ ಷಾ ಕಿಚ್ಚ ಸುದೀಪ್ ಬೆಂಬಲ

ದೊಡ್ಮನೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ‘ಪೆಪೆ” ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಕನ್ನಡ ಚಿತ್ರರಂಗದಲ್ಲಿ ಬಾದ್ ಶಾ ಎಂದೇ ಖ್ಯಾತಿ ಪಡೆದಿರುವ ಕಿಚ್ಚ ಸುದೀಪ್ ಟ್ರೈಲರ್ ಬಿಡುಗಡೆ ಮಾಡಿ ನಟ ವಿನಯ್ ರಾಜ್ ಕುಮಾರ್ ನಟನೆಯನ್ನು ಮೆಚ್ಚಿ ಚಪ್ಪಾಳೆ ಹೊಡೆದಿದ್ದಾರೆ. ಇದು ಸಹಜವಾಗಿ ಚಿತ್ರತಂಡದ ಮುಖದಲ್ಲಿ ಗೆಲುವಿನ ಮಂದಹಾಸ ಮೂಡಿಸಿದೆ.

ಇದುವರೆಗೂ ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದ ನಟ ವಿನಯ್ ರಾಜ್ ಕುಮಾರ್ ಮೊದಲ ಬಾರಿಗೆ ಸಖತ್ ಮಾಸ್ ಆಗಿ ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಪೋಸ್ಟರ್, ಟೀಸರ್ ಮೂಲಕ ಸದ್ದು ಮಾಡಿದ್ದ “ಪೆಪೆ” ಈಗ ಟ್ರೇಲರ್ ಮೂಲಕ ಕುತೂಹಲ ಮತ್ತಷ್ಟು ಗರಿಗೆದರುವಂತೆ ಮಾಡಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ದೊಡ್ಮನೆ ಕುಡಿಗೆ ಬೆಂಬಲ ನೀಡಿರುವುದು ಮತ್ತಷ್ಟು ನಿರೀಕ್ಷೆ ದುಪ್ಪಟ್ಟು ಮಾಡಿಸಿದೆ.

ನಟ ಯುವ ರಾಜ್‍ಕುಮಾರ್, ಹಿರಿಯ ನಟ ರಾಘವೇಂದ್ರ ರಾಜ್‍ಕುಮಾರ್, ನಿರ್ದೇಶಕ ಎ.ಪಿ ಅರ್ಜುನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. “ಪೆಪೆ” ಚಿತ್ರಕ್ಕೆ ಉದಯ್ ಶಂಕರ್.ಎಸ್ ಹಾಗೂ ಕೋಲಾರದ ಬಿ.ಎಮ್.ಶ್ರೀರಾಮ್ ಬಂಡವಾಳ ಹಾಕಿದ್ದು, ಶ್ರೀಲೇಶ್ ನಾಯರ್ ಆಕ್ಷನ್ ಕಟ್ ಹೇಳಿದ್ದಾರೆ.

ನಟ ಕಿಚ್ಚ ಸುದೀಪ್ ಮಾತನಾಡಿ , ವಿನಯ್ ಮನೆಗೆ ಬಂದು ಟ್ರೇಲರ್ ತೋರಿಸಿದಾಗ ಗೊತ್ತೋ ಗೊತ್ತಿಲ್ಲದೆಯೋ ನನ್ನ ಮನೆಯಲ್ಲಿ ಎದ್ದು ನಿಂತು ಚಪ್ಪಾಳೆ ತಟ್ಟಿದ್ದೇನೆ. ಎಷ್ಟೋ ಬಾರಿ ಟ್ರೇಲರ್ ಲಾಂಚ್ ಮಾಡಿಕೊಟ್ಟಿದ್ದೇವೆ. ಆದರೆ ಟ್ರೇಲರ್ ಬಿಡುಗಡೆ ಮಾಡಿದಾಗ ಸುದೀಪ್ ಎನ್ನುವುದಕ್ಕಿಂತ ಹೆಚ್ಚಾಗಿ ಪ್ರೇಕ್ಷಕನಾಗಿ ನನಗೆ ಆ ಟ್ರೇಲರ್ ಇಷ್ಟವಾಯ್ತು ಎಂದರೆ ಅದಕ್ಕಿಂತ ಖುಷಿ ಬೇರೆ ಇಲ್ಲ. ನಾನು ಒಬ್ಬ ಪ್ರೇಕ್ಷಕ. ನನಗೂ ಸಿನಿಮಾ ನೋಡಬೇಕು ಎಂಬ ಆಸೆ ಇರುತ್ತದೆ ಎಂದು ಮನದಾಸೆ ಹೊರ ಹಾಕಿದರು.

ನಾವು ಮಾಡಿರುವ ಸಿನಿಮಾಗಳನ್ನು ಎಂಜಾಯ್ ಮಾಡಲು ಆಗುವುದಿಲ್ಲ. “ಪೆಪೆ” ಟ್ರೇಲರ್ ನೋಡಿ ಬಹಳಷ್ಟು ಹೆಮ್ಮೆಯಾಗುತ್ತಿದೆ. ನಟ ವಿನಯ್ ರಾಜ್ ಕುಮಾರ್ ಅವರಲ್ಲಿ ಫೈನಲ್ ಮನುಷ್ಯರಾಗಿದ್ದೀರ. ಚಾಕಲೇಟ್ ಹೀರೋ, ಪ್ರೀತಿ, ಲವ್ ಸ್ಟೋರಿ ಇಲ್ಲಿಂದ ಒಬ್ಬ ಗಂಡಸ್ಸಾಗಿ ಪರದೆಯ ಕಾಣಿಸಿಕೊಳ್ಳುತ್ತಾನೆ ಅಲ್ಲಿಂದ ಹೀರೋ ಆಗಿ ಜರ್ನಿ ಶುರುವಾಗುತ್ತದೆ. ಅದ್ಭುತ ಟ್ರೇಲರ್, ಅದ್ಭುತ ಮ್ಯೂಸಿಕ್, ವಿನಯ್ ಅದ್ಭುತ ಕೆಲಸ ಮಾಡಿದ್ದೀರ. ನಿರ್ದೇಶಕ ಕಲಾವಿದರು ಪ್ರೀತಿಸಿದಾಗ ಈ ರೀತಿ ಸಿನಿಮಾ ಮೂಡಿ ಬರಲು ಸಾಧ್ಯ ಎಂದರು.

ನಟ ವಿನಯ್ ರಾಜ್‍ಕುಮಾರ್ ಮಾತನಾಡಿ,ಚಿಕ್ಕಪ್ಪ ಚಿಕ್ಕಪ್ಪನೇ ದೊಡ್ಡಪ್ಪ ದೊಡ್ಡಪ್ಪನೇ ಅವರಿಗೆ ಹೋಲಿಸಬೇಡಿ. ಸುದೀಪ್ ಸರ್ ಅವರಿಗೆ ಧನ್ಯವಾದ. ನಿಮ್ಮ ಸಲಹೆ, ಬಹಳಷ್ಟು ವಿಷಯ ಕೇಳಿ ಖುಷಿ, ಸಪೋರ್ಟ್ ಹಾಗೂ ಕಾನ್ಫಿಡೆನ್ಸ್ ಬಂತು. ಪೆಪೆ ಇದು ಎರಡು ವರ್ಷದ ಜರ್ನಿ. ಎಲ್ಲರು ಚಿತ್ರಕ್ಕೆ ಶ್ರಮ ಹಾಕಿದ್ದಾರೆ. ಕೂರ್ಗು, ಕಾಡು ಅಂದರೆ ಪ್ರಾಣ. ಇಲ್ಲಿ ಶೂಟಿಂಗ್ ಎಂದರು. ಚಿತ್ರ ಒಪ್ಪಿಕೊಳ್ಳಲು ಇದು ಮೊದಲ ಕಾರಣ. ಚಿತ್ರದ ಕಥೆ ಮತ್ತೊಂದು ಕಾರಣ. ಚಿತ್ರದಲ್ಲಿ ತುಂಬಾ ಸ್ಟ್ರಾಂಗ್ ಪಾತ್ರಗಳಿವೆ. ಸಿನಿಮಾ ನೋಡಿ ಹೊರ ಬರುವ ಪ್ರತಿಯೊಬ್ಬರು ಪಾತ್ರಗಳ ಬಗ್ಗೆ ಯೋಚನೆ ಮಾಡುತ್ತಾರೆ. ಆಗಸ್ಟ್ 30ರಂದು ಚಿತ್ರ ಬಿಡುಗಡೆಯಾಗಲಿದೆ ಎಂದರು.

“ಪೆಪೆ” ಚಿತ್ರದ ಟ್ರೇಲರ್ ನ್ನು ಬಹಳ ಸೊಗಸಾಗಿ ಕಟ್ ಮಾಡಲಾಗಿದೆ. 2 ನಿಮಿಷ 44 ಸೆಕೆಂಡ್ ಇರುವ ಟ್ರೇಲರ್ ನೋಡಿ ದೊಡ್ಮನೆ ಫ್ಯಾನ್ಸ್ ಬೆಂಕಿ, ವಿನಯ್ ಮಾಸ್ ಅವತಾರಕ್ಕೆ ಚಪ್ಪಾಳೆ ತಟ್ಟುತ್ತಿದ್ದಾರೆ. ಕೌರ್ಯ, ರಕ್ತ, ಮಚ್ಚು ಟ್ರೇಲರ್‍ನಲ್ಲಿ ಝಳಪಿಸಿದೆ. ಈ ಚಿತ್ರದಲ್ಲಿ ನಾಯಕಿಯಾಗಿ ಕಾಜಲ್ ಕುಂದರ್ ನಟಿಸಿದ್ದು, ಮಯೂರ್ ಪಟೇಲ್, ಯಶ್ ಶೆಟ್ಟಿ, ಬಲ ರಾಜ್‍ವಾಡಿ, ಮೇದಿನಿ ಕೆಳಮನೆ, ಅರುಣಾ ಬಾಲರಾಜ್, ನವೀನ್ ಡಿ. ಪಡೀಲ್‍ರನ್ನು ಒಳಗೊಂಡ ತಾರಾಬಳಗವಿದೆ.

‘ಪೆಪೆ’ ಸಿನಿಮಾವನ್ನು ಯುವ ನಿರ್ದೇಶಕ ಶ್ರೀಲೇಶ್ ಎಸ್ ನಾಯರ್ ನಿರ್ದೇಶನ ಮಾಡಿದ್ದಾರೆ. ವಿನಯ್ ರಾಜ್‍ಕುಮಾರ್ ಈ ಸಿನಿಮಾ ಪಕ್ಕಾ ಮಾಸ್ ಅವತಾರದಲ್ಲಿ ಅಖಾಡಕ್ಕೆ ಇಳಿದಿದ್ದಾರೆ. ಉದಯ್ ಶಂಕರ್.ಎಸ್ ಹಾಗೂ ಕೋಲಾರದ ಬಿ.ಎಮ್.ಶ್ರೀರಾಮ್ ಈ ಸಿನಿಮಾವನ್ನು ನಿರ್ಮಿಸಿದ್ದು, ಇದೇ ಆಗಸ್ಟ್ 30ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ.

ಸಿನಿಮಾಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದು, ಕ್ಯಾಮೆರಾ ಕೆಲಸ ಮಾಡಿರುವುದು ಅಭಿಷೇಕ್ ಕಾಸರಗೋಡು, ಆಕ್ಷನ್ ದೃಶ್ಯಗಳನ್ನು ನಿರ್ದೇಶನ ಮಾಡಿರುವುದು ರವಿವರ್ಮ, ಚೇತನ್ ಡಿಸೋಝಾ, ಡಿಫರೆಂಟ್ ಡ್ಯಾನಿ ಮತ್ತು ನರಸಿಂಹ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin