"Taekwondo Girl" directed by Ravindra Venshi is releasing on August 30

ರವೀಂದ್ರ ವೆಂಶಿ ನಿರ್ದೇಶನದ “ಟೇಕ್ವಾಂಡೋ ಗರ್ಲ್ ” ಚಿತ್ರ ಆಗಸ್ಟ್ 30ಕ್ಕೆ ಬಿಡುಗಡೆ - CineNewsKannada.com

ರವೀಂದ್ರ ವೆಂಶಿ ನಿರ್ದೇಶನದ “ಟೇಕ್ವಾಂಡೋ ಗರ್ಲ್ ” ಚಿತ್ರ ಆಗಸ್ಟ್ 30ಕ್ಕೆ ಬಿಡುಗಡೆ

ಹೆಣ್ಣು ಮಕ್ಕಳು ತಮ್ಮ ಮೇಲಾಗುವ ದೌರ್ಜನ್ಯ, ಅತ್ಯಾಚಾರದಂತಹ ಘಟನೆ ತಡೆಯಲು ಜೊತೆಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಮರ ಕಲೆ ಸಹಕಾರಿ. ಅಂತದ್ದೇ ಒಂದು ಸಮರಭ್ಯಾಸ ಕಲೆಯ ಚಿತ್ರವಾದ “ಟೇಕ್ವಾಂಡೋ ಗರ್ಲ್” ಎಂಬ ಚಿತ್ರ ಇದೇ 30 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ

ಆಗಸ್ಟ್ 30ಕ್ಕೆ ಚಿತ್ರ ತೆರೆಗೆ ಬರಲು ಸಜ್ಜಾಗಿರುವ ಹಿನ್ನೆಲೆಯಲ್ಲಿ ಹಾಡು ಹಾಗೂ ಟೀಸರ್ ಅನ್ನು ನಿರ್ದೇಶಕ ಇಂದ್ರಜಿತ್ ಲಂಕೇಶ್ ಬಿಡುಗಡೆ ಮಾಡಿ ಶುಭ ಹಾರೈಸಿದರು. ಹಿರಿಯ ನಟ ಗಣೇಶ್ ರಾವ್ ,ನಿರ್ದೇಶಕ ಕೆ . ಪುರುಷೋತ್ತಮ್ , ಬೇಬಿ ಋತುಸ್ಪರ್ಶ ಶಾಲೆಯ ಪ್ರಿನ್ಸಿಪಲ್ ಮಂಜುಳಾ, ಟೇಕ್ವಾಂಡೋ ತರಬೇತಿದಾರ ವಿ. ರವಿ ಹಾಗೂ ಅನೇಕರು ಈ ಕ್ಷಣಕ್ಕೆ ಸಾಕ್ಷಿಯಾದರು

ಈ ವೇಳೆ ಮಾತನಾಡಿದ ಇಂದ್ರಜಿತ್ ಲಂಕೇಶ್, ಚಿಕ್ಕ ವಯಸ್ಸಿನಲ್ಲೇ ಇಷ್ಟೊಂದು ಶ್ರಮ ಪಟ್ಟು ಕಲ್ತಿರುವ ಋತುಸ್ಪರ್ಶಗೆ ಉಜ್ವಲ ಭವಿಷ್ಯವಿದೆ. ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದು ಈ ಸೆಲ್ಫ್ ಡಿಫೆನ್ಸ್ ಮೂಲಕ ತಮ್ಮನ್ನು ರಕ್ಷಿಸಿಕೊಳ್ಳುವ ಶಕ್ತಿಯನ್ನು ಹೊಂದಿರುವುದು ಬಹಳ ಮುಖ್ಯ. ಇಂತಹ ಚಿತ್ರಗಳು ಹೆಚ್ಚು ಹೆಚ್ಚಾಗಿ ಬರಬೇಕು. ಹೊಸ ಪ್ರತಿಭೆಗಳು ಆಗಮನವಾಗಬೇಕು , ನಿಂತ ನೀರಾಗದೆ ಹರಿಯುವ ನೀರಾಗಿ ಬೆಳೆಯಬೇಕು. ತಾಯಿ,ತಂದೆ ಸಪೆÇೀರ್ಟ್ ನೀಡಿದ್ದಾರೆ. ಆಕ್ಟಿಂಗ್ , ಡ್ಯಾನ್ಸ್ , ಫೈಟ್ ಎಲ್ಲವೂ ಚೆನ್ನಾಗಿ ಮಾಡುತ್ತಿದ್ದಾಳೆ ಇವಳಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.

ನಟಿ ರೂಪಿಕಾ ಮಾತನಾಡಿ ಬೇಬಿ ಋತುಸ್ಪರ್ಶ ಬಹಳ ಸೊಗಸಾಗಿ ಅಭಿನಯಿಸಿದ್ದಾಳೆ. ಚಿತ್ರಂಗಕ್ಕೆ ಬಾಲ ನಟಿಯಾಗಿ ಬಂದಿದ್ದು , ಆಗ ಅದರ ಶ್ರಮ ಏನು ಅಂತ ನನಗೆ ಗೊತ್ತಿದೆ. ಹೆಣ್ಣು ಮಕ್ಕಳ ಸ್ವಯಂ ರಕ್ಷಣೆ ಬಹಳ ಅಗತ್ಯ. ಈ ಒಂದು ಕಲೆ ಬಗ್ಗೆ ಪಠ್ಯಪುಸ್ತಕ ಆಗುವುದು ಬಹಳ ಮುಖ್ಯ. ಇಡೀ ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದರು.

ನಿರ್ದೇಶಕ ರವೀಂದ್ರ ವಂಶಿ ಮಾತನಾಡಿ ನಟಿ ಮಾಲಾಶ್ರೀ ಅಭಿನಯ ನೈಟ್ ಕಫ್ರ್ಯೂ ಚಿತ್ರದ ನಂತರ ಮಾಡಿರುವ ಮತ್ತೊಂದು ಚಿತ್ರ ಈ “ಟೇಕ್ವಾಂಡೋ ಗರ್ಲ್”. ಇವತ್ತಿನ ಚಿತ್ರಮಂದಿರಗಳ ಸಮಸ್ಯೆ ಎಲ್ಲರಿಗೂ ತಿಳಿದಿದೆ. ದೊಡ್ಡ ಸ್ಟಾರ್ ಚಿತ್ರಗಳ ನಡುವೆ ನಮ್ಮಂತ ಚಿತ್ರಗಳು ಬರುತ್ತಿದೆ. ಯಾವುದು ಗುಣಮಟ್ಟ , ಪ್ರಸ್ತುತ ಅಗತ್ಯ, ಎಂಬುದನ್ನು ಗಮನಿಸಿ ನಮ್ಮ ಚಿತ್ರವನ್ನು ನೋಡಿ ಪ್ರೋತ್ಸಾಹಿಸಬೇಕು ಈ ಚಿತ್ರದಲ್ಲಿ ಒಂದು ಬಡ ಕುಟುಂಬದ ಹೆಣ್ಣು ಮಗಳು ಶಿಕ್ಷಣಕ್ಕಾಗಿ ಎಷ್ಟು ಕಷ್ಟ ಪಡುತ್ತಾಳೆ, ಓದುವುದೇ ಕಷ್ಟ ಇರುವಂತ ಸಮಯದಲ್ಲಿ ಇದರ ಮದ್ಯೆ ಟೇಕ್ವಾಂಡೋ ಸಮರ ಕಲೆ ಹೇಗೆ ಕಲಿಯುತ್ತಾಳೆ, ಈ ವಿದ್ಯೆಯ ಮುಖಾಂತರ ಸಮಾಜಕ್ಕೆ ಹೇಗೆ ಮಾದರಿಯಾಗುತ್ತಾಳೆ ಎನ್ನುವುದೇ ಈ ಚಿತ್ರದ ಮುಖ್ಯ ಸಾರಾಂಶ.

5ನೇ ತರಗತಿಯಲ್ಲಿ ಓದುತ್ತಿರುವ ಋತು ಸ್ಪರ್ಶ 3ನೇ ವಯಸ್ಸಿನಿಂದ ಈ ಕಲೆ ಅಭ್ಯಾಸ ಮಾಡಿದ್ದಾಳೆ. ಒಟ್ಟು ಎಂಟು ಪರೀಕ್ಷೆಗಳನ್ನು ಎದುರಿಸಿ ಈಗ ಬ್ಲಾಕ್ ಬೆಲ್ಟ್ ಪಡೆದು 4 ಅಂತರಾಷ್ಟ್ರೀಯ ಚ್ಯಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಹೆಮ್ಮೆಯ ಟೇಕ್ವಾಂಡೋ ಪಟು ಆಗಿದ್ದಾಳೆ. ನಮ್ಮ ಚಿತ್ರವು ಚಿನ್ನಾಗಿ ಬಂದಿದೆ. ನೀವೆಲ್ಲರೂ ಈ ಚಿತ್ರವನ್ನು ನೋಡಿ ಬೆಂಬಲಿಸಿ ಎಂದರು.

ನಿರ್ಮಾಪಕಿ ಡಾ. ಸುಮೀತಾ ಪ್ರವೀಣ್ ಮಾತನಾಡಿ, ಮಗಳು ಬೇಬಿ ಋತು ಸ್ಪರ್ಶ ಸಾಮಥ್ರ್ಯವನ್ನು ಗಮನಿಸಿ ಈ ಚಿತ್ರವನ್ನ ಮಾಡಿದೇನೆ. ಇದು ಮಗಳಿಗಷ್ಟೇ ಸೀಮಿತವಾಗಬಾರದು ಎಂದು ಒಂದು ಸಿನಿಮಾ ಮುಖಾಂತರ ಸಮಾಜಕ್ಕೆ ಈ ಸಮರ ಕಲೆಯ ಜೊತೆಗೆ ಹಣುಮಕ್ಕಳ ರಕ್ಷಣೆ ಬಗ್ಗೆ ಹೇಳಲು “ಟೇಕ್ವಾಂಡೋ ಗರ್ಲ್”, ಮಕ್ಕಳಿಗಾಗಿ ಚಿತ್ರವನ್ನ ತೋರಿಸಲು ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದೇವೆ ಎಂದರು.

ವಿದ್ಯಾರ್ಥಿಗಳಿಗಾಗಿ ಟಿಕೆಟ್ ನಲ್ಲಿ 50 ಪರ್ಸೆಂಟ್ ಕಡಿಮೆ ಮಾಡಿ ಚಿತ್ರ ವೀಕ್ಷಿಸಲು ಅನುಕೂಲ ಮಾಡುತ್ತೇವೆ. ನಾನು ಈ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ಮಾಡಿದ್ದೇನೆ. ಪತಿ ಕೂಡ ಅಭಿನಯಿಸಿದ್ದಾರೆ ಎಂದು ಕೇಳಿಕೊಂಡರು.

ಬೇಬಿ ಋತು ಸ್ಪರ್ಶ ಮಾತನಾಡಿ ನನಗೆ ಬಾಲ್ಯದಿಂದಲೂ ಕ್ರೀಡೆ ಹಾಗೂ ಸಿನಿಮಾ ಬಗ್ಗೆ ಆಸಕ್ತಿ ಇತ್ತು. ನನಗೆ ನನ್ನ ತಾಯಿ ಹಾಗೂ ನನ್ನ ತಂದೆ ತುಂಬಾ ಸಪೆÇೀರ್ಟ್ ನೀಡಿದ್ದಾರೆ. ಹಾಗೆ ನಾನು ಬ್ಲಾಕ್ ಬಿಲ್ಟ್ ಪಡೆಯಲು ನನ್ನ ಗುರುಗಳು ತುಂಬಾ ಟ್ರೈನಿಂಗ್ ನೀಡಿದ್ದಾರೆ. ಹಾಗೆಯೇ ಶಾಲೆಯಲ್ಲಿ ನನ್ನ ಪ್ರಿನ್ಸಿಪಾಲ್ ಕೂಡ ಸಪೋರ್ಟ್ ಮಾಡುತ್ತಿದ್ದು , ಶಾಲೆ ಹಾಗೂ ಸಿನಿಮಾಗೆ ಯಾವುದೇ ತೊಂದರೆ ಮಾಡಿಕೊಳ್ಳದೆ ಎರಡನ್ನು ನಿಭಾಯಿಸುತ್ತಿದ್ದೇನೆ ಎಂದರು

ಚಿತ್ರದಲ್ಲಿ ಸುಮಾರು ಇನ್ನೂರು ಟೇಕ್ವಾಂಡೋ ವಿಧ್ಯಾರ್ಥಿಗಳು ಅಭಿನಯಿಸಿದ್ದಾರೆ. ಚಿತ್ರಕ್ಕೆ ಸುಮಾರು ನೂರೈವತ್ತು ಚಿತ್ರಗಳಿಗೆ ರಾಗ ಸಂಯೋಜನೆ ಮಾಡಿರುವ ಸಂಗೀತ ನಿರ್ದೇಶಕ ಎಂ.ಎಸ್ ತ್ಯಾಗರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಚಿತ್ರ ಇದೇ ತಿಂಗಳು 30ರಂದು ತೆರೆಗೆ ಬರುತ್ತಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin