"Beguru Colony" to release in January: Teaser raises curiosity

ಜನವರಿಯಲ್ಲಿ “ಬೇಗೂರೂ ಕಾಲೋನಿ’ : ಟೀಸರ್ ಮೂಲಕ ಕುತೂಹಲ ಹೆಚ್ಚಳ - CineNewsKannada.com

ಜನವರಿಯಲ್ಲಿ “ಬೇಗೂರೂ ಕಾಲೋನಿ’ : ಟೀಸರ್ ಮೂಲಕ ಕುತೂಹಲ ಹೆಚ್ಚಳ

ಚಿತ್ರರಂಗದಲ್ಲಿ ಗೆಲ್ಲುವ ಹುಮ್ಮಸ್ಸಿನಿಂದ ಹೊಸ ಪ್ರಯತ್ನ ನಡೆಯುತ್ತಿವೆ ಅದ ಭಾಗವಾಗಿ “ಬೇಗೂರು ಕಾಲೋನಿ” ಚಿತ್ರ ತಯಾರಾಗಿದೆ. ಪೋಸ್ಟರ್ ಮೂಲಕವೇ ನಿರೀಕ್ಷೆ ಹೆಚ್ಚಿಸಿರುವ ಚಿತ್ರದ ಟೀಸರ್ ಬಿಡುಗಡೆಯಾಗಿ ಗಮನ ಸೆಳೆದಿದೆ.

ರಾಜೀವ್ ಹನು ನಾಯಕನಾಗಿ ಕಾಣಿಸಿಕೊಂಡಿರುವ ಚಿತ್ರ ಜನವರಿಯಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ನಿರ್ದೇಶಕ ತರುಣ್ ಸುಧೀರ್ ಹಾಗೂ ಶಾಸಕ ಸತೀಶ್ ರೆಡ್ಡಿ ಟೀಸರ್ ಬಿಡುಗಡೆ ಮಾಡಿ ಹಾರೈಸಿದ್ಧಾರೆ

ಈ ವೇಳೆ ಮಾತನಾಡಿದ ನಿರ್ದೇಶಕ ತರುಣ್ ಸುಧೀರ್ ಮಾತನಾಡಿ, ಒಂದು ಸಿನಿಮಾಗೆ ಟೀಸರ್ ಇನ್ವಿಟೇಷನ್ ತರ. ಆ ಸಿನಿಮಾದಲ್ಲಿ ಏನಿದೆ ಅನ್ನೋದನ್ನು ಜನರಿಗೆ ತಲುಪಿಸುವುದು ಟೀಸರ್. ಟೀಸರ್ ಹಾಗೂ ಟ್ರೇಲರ್ ಸಿನಿಮಾಗೆ ಅಷ್ಟು ಮುಖ್ಯ. ನಮ್ಮ ಇಡೀ ಶ್ರಮ, ಕಷ್ಟಪಟ್ಟಿರುವುದು, ಶೂಟಿಂಗ್ ಇರಬಹುದು. ಇಡೀ ಎಫರ್ಟ್ ಗಿಂತ ಜಾಸ್ತಿ ಟೆನ್ಷನ್ ಆಗುವುದು ಟೀಸರ್ ಹಾಗೂ ಟ್ರೇಲರ್ ಕಟ್ ಮಾಡುವಾಗ. ಅದೇ ಜನರನ್ನು ಥಿಯೇಟರ್ ಒಳಗೆ ಕರೆದುಕೊಂಡು ಬರುವುದು. ಆ ನಿಟ್ಟಿನಲ್ಲಿ ನೋಡುವುದಾದರೆ ಕಾಲೋನಿ ಟೀಸರ್ ಚೆನ್ನಾಗಿ ಕಟ್ ಮಾಡಲಾಗಿದೆ ಎಂದರು

ರಾಜೀವ್ ಆತ್ಮೀಯ ಗೆಳೆಯ. ಐದೈದು ವರ್ಷಗಳ ಜರ್ನಿ. ಕ್ರಿಕೆಟ್ ಟೂರ್ನಮೆಂಟ್ ಟೈಮ್‍ನಲ್ಲಿ ಅವರನ್ನು ನೋಡಿದ್ದು. ಈ ರೀತಿ ಕ್ರಿಕೆಟ್ ಆಡ್ತಾನೆ ಅಂತಾ ಖುಷಿ ಆಯ್ತು. ಬಳಿಕ ಅವನ ಸಿನಿಮಾ ಪ್ರೀತಿ ಗೊತ್ತಾಯ್ತು. ಅವನಲ್ಲಿರುವ ಕ್ರಿಕೆಟರ್ ಹಾಗೂ ಕಲಾವಿದರನ್ನು ಗುರುತಿಸಿದ್ದು ಸುದೀಪ್ ಸರ್. ಅವನ ಜರ್ನಿ ನೋಡಿಕೊಂಡು ಬಂದಿದ್ದೇವೆ. ನಮ್ಮ ಮಣ್ಣಿನ ಕಥೆಗಳು ಅಂತೀವಲ್ಲ. ಆ ರೀತಿಯ ಫೇಸ್ ಇರುವ ಹುಡ್ಗ ಅದ್ಭುತ ನಟ. ಅವನಿಗೆ ಬೇಕಿರುವುದು ಬ್ರೇಕ್ ಬೇಗೂರು ಕಾಲೋನಿ ಮೂಲಕ ಸಿಗಲಿದೆ ಎಂಬ ನಂಬಿಕೆ ಇದೆ ಎಂದರು.

ಶಾಸಕ ಸತೀಶ್ ಶೆಡ್ಡಿ ಮಾತನಾಡಿ, ಮಂಜು ನಿರ್ದೇಶನದಲ್ಲಿ ಅದ್ಭುತ ಸಿನಿಮಾ ಮೂಡಿಬಂದಿದೆ. ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ ಚಿತ್ರ ನೋಡಿದಾಗ ಬಹಳ ಜವಾಬ್ದಾರಿಯಿಂದ ಕೆಲಸ ಮಾಡಿದ್ದಾರೆ. ಟೀಸರ್ ಅದ್ಭುತವಾಗಿದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ತಿಳಿಸಿದರು.

ನಟ ರಾಜೀವ್ ಮಾತನಾಡಿ, ಸರಳತೆ ಅಂದರೆ ಏನೂ ಅನ್ನೋದನ್ನು ತರುಣ್ ಅಣ್ಣ ತೋರಿಸಿದ್ದಾರೆ. ಸಿನಿಮಾಗೆ ಯಾವುದೇ ಪೂಜೆ ಮಾಡಿಲ್ಲ. ಟೀಸರ್ ತುಂಬಾ ಚೆನ್ನಾಗಿ ಬಂದಿದೆ. ರೀತಿ ಸಿನಿಮಾ ಮಾಡಿದ ಬಾಬಾಣ್ಣ ಅವರಿಗೆ ಧನ್ಯವಾದ. ನಿರ್ಮಾಪಕರಿಗೆ ಒಳ್ಳೆದು ಆಗಬೇಕು. ಚಿತ್ರದಲ್ಲಿ ಹೊಸಬರು ನಟಿಸಿದ್ದಾರೆ. ಆದರೆ ಸಿನಿಮಾ ನೋಡಿ ಹೊರಬಂದರೆ ಹೊಸಬರು ಅನಿಸುವುದಿಲ್ಲ. ಎಲ್ಲರೂ ಅದ್ಭುತ ಪಾತ್ರ ಮಾಡಿದ್ದಾರೆ. ಕಾಲೋನಿಯಲ್ಲಿ ಬೆಳೆಯುವ ಮಕ್ಕಳು ಅಲ್ಲೇ ಬೆಳೆಯುತ್ತಾರೆ. ಅಲ್ಲೇ ಸಾಯುತ್ತಾರೆ. ಆದರೆ ಅದರ ಎದುರು ಇರುವ ದೊಡ್ಡ ಜಾಗ ಕಮ್ಮಿಯಾಗುತ್ತಾ ಬರುತ್ತದೆ. ಎಲ್ಲಾ ಬೆಳೆಯುತ್ತಿದ್ದಾರೆ. ಆದರೆ ಕಾಲೋನಿ ಹಾಗೆಯೇ ಇರುತ್ತದೆ. ಅಲ್ಲಿ ಬೆಳೆಯುವ ಕಾಲೋನಿ ಹುಡ್ಗನಿಗೆ ಆಡಲು ಜಾಗ ಇರುವುದಿಲ್ಲ. ಇರುವ ಜಾಗವನ್ನು ಉಳಿಸಿಕೊಳ್ಳಲು ಹೋರಾಡುವ ಕಥೆಯೇ ಬೇಗೂರು ಕಾಲೋನಿ ಎಂದರು.

ಬೆಂಗಳೂರು ಹುಟ್ಟುವ ಮೊದಲೇ ಹುಟ್ಟಿದ್ದು ಬೇಗೂರು ಎಂಬ ಡೈಲಾಗ್ ಮೂಲಕ ಶುರುವಾಗುವ ಬೇಗೂರು ಕಾಲೋನಿ ಟೀಸರ್‍ನಲ್ಲಿ ಆಕ್ಷನ್ , ಎಮೋಷನ್ , ಪ್ರೀತಿ, ನೋವು ನಲಿವುಗಳನ್ನು ಬ್ಲೆಂಡ್ ಮಾಡಿ ಟೀಸರ್ ಕಟ್ ಮಾಡಲಾಗಿದೆ. ಶ್ರೀಮಾ ಸಿನಿಮಾಸ್ ಬ್ಯಾನರ್ ಅಡಿ ಎಂ ಶ್ರೀನಿವಾಸ್ ಬಾಬು ‘ಬೇಗೂರು ಕಾಲೋನಿ’ ಚಿತ್ರ ನಿರ್ಮಾಣ ಮಾಡಿದ್ದಾರೆ.

ಫ್ಲೈಯಿಂಗ್ ಕಿಂಗ್ ಮಂಜು ಎಂಬುವವರು ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಬಿಗ್‍ಬಾಸ್ ಖ್ಯಾತಿಯ ರಾಜೀವ್ ಚಿತ್ರದ ಲೀಡ್ ರೋಲ್‍ನಲ್ಲಿ ನಟಿಸಿದ್ದಾರೆ. ನಿರ್ದೇಶಕ ಮಂಜು ಕೂಡ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಪಲ್ಲವಿ ಪರ್ವ, ಕೀರ್ತಿ ಭಂಡಾರಿ, ತೆಲುಗು ನಟ ಫೋಸಾನಿ ಕೃಷ್ಣ ಮುರಳಿ, ಬಾಲ ರಾಜ್‍ವಾಡಿ ಸೇರಿದಂತೆ ಪ್ರತಿಭಾನ್ವಿತ ಕಲಾವಿದರು ‘ಬೇಗೂರು ಕಾಲೋನಿ’ ಚಿತ್ರದಲ್ಲಿ ನಟಿಸಿದ್ದಾರೆ. ಕಾರ್ತಿಕ್ ಛಾಯಾಗ್ರಹಣ, ಅಭಿನಂದನ್ ಕಶ್ಯಪ್ ಸಂಗೀತ, ಪ್ರಮೋದ್ ತಲ್ವಾರ್ ಸಂಕಲನ ಚಿತ್ರಕ್ಕಿದೆ. ಭರ್ಜರಿ ಮೇಕಿಂಗ್ ಹಾಗೂ ಆಕ್ಷನ್ ಸನ್ನಿವೇಶ ‘ಬೇಗೂರು ಕಾಲೋನಿ’ ಚಿತ್ರದಲ್ಲಿದೆ. ಮಾಸ್ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಸಿನಿಮಾ ಇದು. ಜನವರಿ ತಿಂಗಳಲ್ಲಿ ‘ಬೇಗೂರು ಕಾಲೋನಿ’ ಕಥೆ ಕರ್ನಾಟಕದ ಪ್ರೇಕ್ಷಕರ ಮುಂದೆ ಅನಾವರಣ ಆಗಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin