“ಕಾಟೇರ” ಚಿತ್ರದ ನಟನೆಗೆ ದರ್ಶನ ಗೆ ಅತ್ಯತ್ತಮ ನಟ ಪ್ರಶಸ್ತಿ
ಕೊಲೆ ಆರೋಪ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿ ನ್ಯಾಯಾಂಗ ಬಂಧನದಲ್ಲಿದ್ದಾರೆ.ಈ ನಡುವೆ `ಚಿತ್ತಾರ’ ಸ್ಟಾರ್ ಅವಾರ್ಡ್ ಪ್ರಶಸ್ತಿಯಲ್ಲಿ “ಕಾಟೇರ” ಚಿತ್ರದ ನಟನೆಗಾಗಿ ನಟ ದರ್ಶನ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಬಂದಿದೆ.
ಚಿತ್ತಾರ ಪತ್ರಿಕೆಯ ಗೌರವ ಸಂಪಾದಕ ಸದಾಶಿವ ಶೆಣೈ ಅವರ ಸಾರಥ್ಯದಲ್ಲಿ `ಆಯ್ಕೆ ಸಮಿತಿ’ ರಚನೆಗೊಂಡು, ಹಿರಿಯ ನಿರ್ದೇಶಕ ಸಾಯಿ ಪ್ರಕಾಶ್,ನಿರ್ದೇಶಕ ಮಹೇಶ್ ಬಾಬು, ನಟಿ ಅನುಪ್ರಭಾಕರ್ ಮುಖರ್ಜಿ, ಪತ್ರಿಕಾ ಸಂಪರ್ಕಾಧಿಕಾರಿಯಾದ ಸುಧೀಂದ್ರ ವೆಂಕಟೇಶ್, ಚಿತ್ತಾರ ಪತ್ರಿಕೆಯ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ್ ಮತ್ತು ನಟಿ ಅಪೂರ್ವ ಆಯ್ಕೆ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿ ನಾಮನಿರ್ದೇಶಿತರ ಆಯ್ಕೆ ಪ್ರಕ್ರಿಯೆ ನಡೆಸಿದ್ದರು’
ಯಾರಿಗೆಲ್ಲಾ ಪ್ರಶಸ್ತಿ ಗೊತ್ತಾ:
• ಅತ್ಯುತ್ತಮ ನಿರ್ದೇಶಕ- ತರುಣ್ ಸುಧೀರ್, ಚಿತ್ರ ಕಾಟೇರ
• ಅತ್ಯುತ್ತಮ ನಟ – ದರ್ಶನ್, ಚಿತ್ರ ಕಾಟೇರ
• ಅತ್ಯುತ್ತಮ ನಟಿ – ರುಕ್ಮಿಣಿ ವಸಂತ್, ಚಿತ್ರ `ಸಪ್ತ ಸಾಗರಾದಾಚೆ ಎಲ್ಲೋ’
• ಅತ್ಯುತ್ತಮ ಸಂಗೀತ ನಿರ್ದೇಶಕ-ಚರಣ್ ರಾಜ್, ಚಿತ್ರ ಸಪ್ತ ಸಾಗರದಾಚೆ
• ಅತ್ಯುತ್ತಮ ಪೆÇೀಷಕ ನಟಿ- ಶ್ರುತಿ , ಕಾಟೇರ
• ಅತ್ಯುತ್ತಮ ಪೆÇೀಷಕ ನಟ- ಶರತ್ ಲೋಹಿತಾಶ್ವ, ಸಪ್ತ ಸಾಗರಾದಾಚೆ ಎಲ್ಲೋ
• ಅತ್ಯುತ್ತಮ ಗೀತರಚನೆಕಾರ – ಚೇತನ್ ಕುಮಾರ್, ಕಾಟೇರ,
• ಅತ್ಯುತ್ತಮ ಛಾಯಾಗ್ರಹಣ-ಶ್ವೇತ್ ಪ್ರಿಯಾ ನಾಯಕ್ ,ಕೈವ,
• ಅತ್ಯುತ್ತಮ ಹಿನ್ನಲೆ ಗಾಯಕ- ಹೇಮಂತ್ ,ಕಾಟೇರ,
• ಅತ್ಯುತ್ತಮ ಹಿನ್ನಲೆ ಗಾಯಕಿ-ಪ್ರಥ್ವಿ ಭಟ್ ,ಕೌಸಲ್ಯ ಸುಪ್ರಜಾ ರಾಮ,
• ಅತ್ಯುತ್ತಮ ಪ್ರಥಮ ಚಿತ್ರದ ನಟ -ಶಿಶಿರ್ ಬೈಕಾಡಿ ,ಡೇರ್ ಡೆವಿಲ್ ಮುಸ್ತಾಫಾ
• ಅತ್ಯುತ್ತಮ ಪ್ರಥಮ ಚಿತ್ರದ ನಟಿ- ಆರಾಧನಾ ರಾಮ್ ,ಕಾಟೇರ
• ಅತ್ಯುತ್ತಮ ಚಿತ್ರ-ಕಾಟೇರ,
• ಅತ್ಯುತ್ತಮ ಹಾಸ್ಯ ನಟ-ದತ್ತಣ್ಣ, ನಾನು ಅದು ಮತ್ತು ಸರೋಜ
• ಅತ್ಯುತ್ತಮ ಖಳ ನಟ-ರಮೇಶ್ ಇಂದಿರಾ, ಸಪ್ತ ಸಾಗರಾದಾಚೆ ಎಲ್ಲೋ
• ಅತ್ಯುತ್ತಮ ಸಾಹಸ ನಿರ್ದೇಶಕ-ಥ್ರಿಲ್ಲರ್ ಮಂಜು, ಮಾರಕಾಸ್ತ,
• ಅತ್ಯುತ್ತಮ ಸಂಕಲನಕಾರ-ಆಶಿಕ್ ಕುಸುಗೋಳಿ, ಆಚಾರ್ ಅಂಡ್ ಕೋ,
• ಅತ್ಯುತ್ತಮ ಕಲಾನಿರ್ದೇಶಕ-ವಿಶ್ವಾಸ್ ಕಶ್ಯಪ್, ಗುರುದೇವ ಹೋಯ್ಸಳ,
• ಅತ್ಯುತ್ತಮ ನೃತ್ಯ ನಿರ್ದೇಶಕ-ಮುರಳಿ ಮಾಸ್ಟರ್, ವೀರಂ, ಅತ್ಯುತ್ತಮ ಬಾಲ ನಟ-ಮಾಸ್ಟರ್ ರೋಹಿತ್, ಕಾಟೇರ
• ಅತ್ಯುತ್ತಮ ಬಾಲ ನಟಿ-ಗ್ರೀಷ್ಮಾ ಗೌಡ, ಬಾನದಾರಿಯಲ್ಲಿ,
• ಅತ್ಯುತ್ತಮ ಸಮಾಜಿಕ ಪರಿಣಾಮ ಬೀರಿದ ಚಿತ್ರ-ಬನ್ ಟೀ, ಜಲಪಾತ ಮತ್ತು ಕಾಸಿನ ಸರ.
• ಅತ್ಯುತ್ತಮ ಭರವಸೆ ಮೂಡಿಸಿದ ಚಿತ್ರ ತತ್ಸಮ ತದ್ಭವ ಮತ್ತು ರಾಘು.
`ವಿಶೇಷ ಪ್ರಶಸ್ತಿ ಸಾಧಕರಿಗೆ ಗೌರವ
ಇದೇ ವೇಳೆ ಚಿತ್ರರಂಗದಲ್ಲಿನ ಕೆಲಸ ಗುರಿತಿಸಿ ನಟ ಪ್ರಜ್ವಲ್ ದೇವರಾಜ್, ನಟಿ ಸೋನಲ್ ಮೊಂಟೆರೋ, ಚಿತ್ರರಂಗದ ಸಂಪರ್ಕಕೊಂಡಿ, ಎಸ್.ಕೆ.ಅನಂತ್, ನಟ ಕಾರ್ತಿಕ್ ಮಹೇಶ್, ನಟಿ ಚೈತ್ರ ಜೆ ಆಚಾರ್, ಅನೂಷಾ ರೈ ಅವರಿಗೆ ಪ್ರಶಸ್ತಿ ನೀಡಲಾಗಿದೆ
`ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರ ತಂಡ, ಹಿರಿಯ ನಟಿ ಉಮಾಶ್ರೀ ನಟಿ ಸ್ವಾತಿಷ್ಠ ಕೃಷ್ಣನ್,ನಟ ವಿನÀಯ್ ರಾಜ್‍ಕುಮಾರ್, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‍ಕುಮಾರ್, ನಟಿ ಶಾನ್ವಿ ಶ್ರೀವಾಸ್ತವ್, ನಟ ಶ್ರೀ ಮುರಳಿ, ವಿಶೇಷ ಪ್ರಶಸ್ತಿ ಮಂಜುಮೆಲ್ ಬಾಯ್ಸ್, ಯೂತ್ ಐಕಾನ್ ಪ್ರಶಸ್ತಿ-ಡಾಲಿ ಧನಂಜಯ, ಪ್ರಚಾರ ವಿನ್ಯಾಸ ಮಣಿ, ನಟಿ ಪ್ರಣೀತಾ ಸುಭಾಶ್, ನಟಿ ಮೆಘಾ ಶೆಟ್ಟಿ, ನಟ ಡಾರ್ಲಿಂಗ್ ಕೃಷ್ಣ ಸೇರಿದಂತೆ ಅನೇಕರಿಗೆ ಪ್ರಶಸ್ತಿ ಪಡೆದಿದ್ದಾರೆ.
ಅಶ್ವಿನಿ ಪುನೀತ್ ರಾಜ್‍ಕುಮಾರ್, ವಿನಯ್ ಗುರೂಜಿ, ಅಯೋಧ್ಯೆಯ ಬಾಲ ರಾಮ ಶಿಲ್ಪಿ ಅರುಣ್ ಯೋಗಿ ರಾಜ್, ಬಿ.ಜಿ.ಎಸ್ ಸಮೂಹ ಸಂಸ್ಥೆಯ ರುವಾರಿಗಳಾದ ಪ್ರಕಾಶನಾಥ ಗುರೂಜಿ, ಮಾಸ್ಟರ್ ಆನಂದ್, ಐಎಎಸ್ ಅಧಿಕಾರಿ ರವಿ ಚೆನ್ನಣ್ಣನವರ್, ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎನ್.ಎಮ್.ಸುರೇಶ್, ಭಾ.ಮ.ಹರೀಶ್, ಉಮೇಶ್ ಬಣಕಾರ್ ಸಾಯಿ ಪ್ರಕಾಶ್, ದೊಡ್ಡರಂಗೇ ಗೌಡ್ರು, ನಾಗತಿಹಳ್ಳಿ ಚಂದ್ರಶೇಖರ್, ಮಾಲಾಶ್ರೀ, ವಿಜಯ ರಾಘವೇಂದ್ರ, ಶೈನ್ ಶಟ್ಟಿ, ಕವಿರಾಜ್, ಅನುಪ್ರಭಾಕರ್, ರೂಪಿಕಾ, ದುನಿಯಾ ರಶ್ಮಿ, ಸುಧೀಂದ್ರ ವೆಂಕಟೇಶ್, ಮಹೇಶ್ ಬಾಬು, ಅಪೂರ್ವ ಸೇರಿದಮತೆ ಅನೇಕರು ಭಾಗಿಯಾಗಿದ್ದರು ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಶಿವಕುಮಾರ್ ಅವರು ತಿಳಿಸಿದ್ದಾರೆ.