Bhairadevi Film Review:: “ಬೈರಾದೇವಿ” ಪ್ರೇತಾತ್ಮದ ಭಯದಲ್ಲಿ ಅರಳಿದ ಕೌಟಂಬಿಕ ಕಥಾಹಂದರದ ರೋಚಕ ಕಹಾನಿ
ಚಿತ್ರ: ಭೈರಾದೇವಿ
ನಿರ್ದೇಶನ : ಶ್ರೀಜೈ
ತಾರಾಗಣ: ರಾಧಿಕಾ ಕುಮಾರಸ್ವಾಮಿ, ರಮೇಶ್ ಅರವಿಂದ್, ಅನುಪ್ರಭಾಕರ್, ರಂಗಾಯಣ ರಘು, ರವಿಶಂಕರ್, ಮಾಳವಿಕ, ಸ್ಕಂದ ಅಶೋಕ್,ಸುಚೇಂದ್ರ ಪ್ರಸಾದ್, ಶಿವರಾಮಣ್ಣ ಮತ್ತಿತರರು
ರೇಟಿಂಗ್ : *** 3.5/ 5
ಕನ್ನಡದಲ್ಲಿ ಇತ್ತೀಚೆಗೆ ಹೊಸ ಹೊಸ ತಿರುಳು ಹೊಂದಿರುವ ಚಿತ್ರಗಳು ತೆರೆಗೆ ಬರುತ್ತಿವೆ. ಈ ಮೂಲಕ ಜನರನ್ನು ರಂಜಿಸುವ ಪ್ರಯತ್ನ ನಡೆದಿದೆ. ಅಂತಹ ಮತ್ತೊಂದು ಹಾರರ್ ತಿರುಳಿನ ಕೌಟಂಬಿಕ ಕಥಾಹಂದರ ಹೊಂದಿರುವ ಚಿತ್ರ “ಬೈರಾದೇವಿ”.
ಸಾಮಾನ್ಯವಾಗಿ ನಟರು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆಯುತ್ತಾರೆ. ಆದರೆ ಭೈರಾದೇವಿಯಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಅಘೋರಿ ಅವತಾರ ಸೇರಿ ವಿವಿಧ ಗೆಟಪ್‍ಗಳಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ಧಾರೆ. ಈ ಮೂಲಕ ನಟಿಯರೂ ಕೂಡ ಕಠಿಣ ಪಾತ್ರಗಳನ್ನು ಮಾಡಬಹುದು ಎನ್ನುವುದನ್ನು ತೋರಿಸಿದ್ದಾರೆ.
ಆತ್ಮ,ಪ್ರೇತಾತ್ಮ,ಸೇಡು ಪ್ರತೀಕಾರದಲ್ಲಿ ಅರಳಿದ ಕೌಟಂಬಿಕ ಕಥನದಲ್ಲಿ ನಡೆಯುವ ರೋಚಕೆ ಕಹಾನಿಯನ್ನು ತೆರೆಯ ಮೇಲೆ ಅಚ್ಚುಕಟ್ಟಾಗಿ ಕಟ್ಟಿಕೊಡುವ ಕೆಲಸವನನು ನಿರ್ದೇಶಕ ಶ್ರೀಜೈ ಮಾಡಿದ್ದಾರೆ. ಈ ಮೂಲಕ ಭೈರಾದೇವಿ ಎರಡನೇ ಭಾಗಕ್ಕೂ ಮುನ್ನುಡಿ ಬರೆದಿದ್ಧಾರೆ
ಜೊತೆಗೆ ದೆವ್ವ, ಮಾಟ, ಮಂತ್ರ, ತಂತ್ರ ಪ್ರತಿತಂತ್ರ, ಅಘೋರಿ , ಪ್ರೀತಿ, ಪ್ರೇಮ, ತಾಯಿ ಮಗಳ ಸಂಬಂಧ, ಪೊಲೀಸ್ ಅಧಿಕಾರಿ ಸುತ್ತಾ ಸಾಗುವ , ಸೇರಿದಂತೆ ನಾನಾ ವಿಷಯಗಳು ಚಿತ್ರದ ಕಥನ ಕುತೂಹಲ ಹೆಚ್ಚುವಂತೆ ಮಾಡಿದೆ. ಜೊತೆಗೆ ಎರಡು ವಿಭಿನ್ನ ಪಾತ್ರದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಗಮನ ಸೆಳೆದಿದ್ದಾರೆ. ಚಿತ್ರದಲ್ಲಿ ಡ್ಯಾನ್ಸ್ ,ಫೈಟು ಸೇರಿದಂತೆ ಅಘೋರಿ ಗೆಟಪ್‍ನಲ್ಲಿ ಚಿಂದಿ ಉಡಾಯಿಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿ ಅರವಿಂದ್ (ರಮೇಶ್ ಅರವಿಂದ್) ಪತ್ನಿ ಶಾಲಿನಿ (ಅನುಪ್ರಭಾಕರ್) ಹಾಗು ಪುಟ್ಟ ಮುಗುವಿನೊಂದಿಗಿನ ಮುದ್ದಾದ ಕುಟುಂಬ, ಈ ಕುಟುಂಬಕ್ಕೆ ಶಾಲಿನಿ ತಂಗಿ ಭೂಮಿಕಾ (ರಾಧಿಕಾ ಕುಮಾರಸ್ವಾಮಿ) ಪ್ಯಾರಾ ನಾರ್ಮಲ್ ಸಂಶೋಧನೆಯಲ್ಲಿ ನಿರತರಾದವರು.
ಅಕ್ಕನ ಮನೆಯಲ್ಲಿದ್ದರೂ ಕಾಲೇಜಿನಲ್ಲಿ ಚೇತು ( ಸ್ಕಂದ ಅಶೋಕ್) ಜೊತೆ ಸಲುಗೆ. ಈ ನಡುವೆ ಭಾವ ನಾದಿನಿ ಮೇಲೆ ಕಣ್ಣು ಹಾಕುತ್ತಾನೆ. ಇದು ಅಕ್ಕನಿಗೆ ತಿಳಿಯಿತು ಎನ್ನುವಂತೆ ಶಾಲಿನಿ ದಿಢೀರ್ ಸಾವನ್ನಪ್ಪುತ್ತಾಳೆ. ಇದರಿಂದ ವಿಚಲಿತನಾದ ಅರವಿಂದ್ ಚಿಕ್ಕಮಗಳನ್ನು ವಸತಿ ಶಾಲೆಯಲ್ಲಿ ಓದಿಸಲು ನಿರ್ಧರಿಸುತ್ತಾನೆ. ಹೀಗಿರುವಾಗ ಆತನಿಗೆ ಆತ್ಮದ ಕಾಟ ಆರಂಭವಾಗುತ್ತದೆ.
ಖಡಕ್ ಪೊಲೀಸ್ ಅಧಿಕಾರಿ ಆತ್ಮಕ್ಕೆ ಹೆದರಿ ಅದರಿಂದ ಪಾರಾಗಲು ಅಘೋರಿ ಬಾಬಾ ಸ್ವಾಮಿನಾಥ (ರವಿಶಂಕರ್) ಹಾಗೂ ಶಿಷ್ಯೆ ಭೈರಾದೇವಿ (ರಾಧಿಕಾ ಕುಮಾರಸ್ವಾಮಿ) ಬೇಟಿಯಾಗುವ ಅರವಿಂದ್ ಆತ್ಮದ ಕಾಟದಿಂದ ಪಾರಾಗಲು ಮುಂದಾಗುತ್ತಾನೆ. ಆತ್ಮದಿಂದ ತೊಂದರೆಯಿಂದ ಆತ ಹೊರ ಬರ್ತಾನಾ, ನಾದಿನ ಮೇಲೆ ಕಣ್ಣು ಹಾಕಿದ್ದ ಆತ ಆಕೆಯನ್ನು ತನ್ನವಳನ್ನಾಗಿಸಿಕೊಳ್ತಾನಾ, ಆತನ ಹೆಂಡತಿ ಸತ್ತ ಕಾರಣ ಏನು ಎನ್ನುವುದು ಚಿತ್ರದ ಕಥನ ಕುತೂಹಲದ ಸಂಗತಿ.
ಎರಡು ವಿಭಿನ್ನ ಪಾತ್ರದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಗಮನ ಸೆಳೆದಿದ್ಧಾರೆ ಡ್ಯಾನ್ಸ್ ಗೂ ಸೈ, ಫೈಟು ಗೂ ಜೈ ಎಂದಿದ್ದಾರೆ, ಇನ್ನು ಅಭಿನಯದಲ್ಲಿ ಸಾಟಿ ಇಲ್ಲ ಎನ್ನುವಂತೆ ನಟಿಸಿದ್ದಾರೆ
ನಟ ರಮೇಶ್ ಅರವಿಂದ್ ಬಹಳ ವರ್ಷಗಳ ನಂತರ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಹಿಳಾ ಅಭಿಮಾನಿಗಳು ಅವರ ಪಾತ್ರವನ್ನು ಒಪ್ಪುತ್ತಾರೋ ಬಿಡುತ್ತಾರೆ ಆದರೆ ನಟನಾಗಿ ವೈವಿದ್ಯಮ ಪಾತ್ರದ ಮೂಲಕ ಗಮನ ಸೆಳೆದಿದ್ಧಾರೆ.
ಅನುಪ್ರಭಾಕರ್, ರಂಗಾಯಣ ರಘು, ರವಿಶಂಕರ್, ಮಾಳವಿಕ, ಶಿವರಾಮಣ್ಣ, ಸ್ಕಂದ ಅಶೋಕ್,ಸುಚೇಂದ್ರ ಪ್ರಸಾದ್ ಮತ್ತಿತರರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ವಿಭಿನ್ನ ಕಥಾಹಂದರವನ್ನು ಪ್ರೇಕ್ಷಕರ ಮುಂದೆ ತರುವಲ್ಲಿ ನಿರ್ದೇಶಕ ಶ್ರೀಜೈ ಶ್ರಮ ಎದ್ದು ಕಾಣುತ್ತಿದೆ, ಕೆ.ಕೆ .ಸೆಂಥಿಲ್ ಪ್ರಶಾಂತ್ ಸಂಗೀತ ಜೆ.ಎಸ್. ವಾಲಿ ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿದೆ, ಹಾರರ್, ಸಸ್ಪೆನ್ಸ್ ಪ್ರಿಯರಿಗೆ ಹೇಳಿ ಮಾಡಿಸಿದ ಚಿತ್ರ.
ರೇಟಿಂಗ್ : ಕಳೆಪೆ – * / ಅಷ್ಟಕಷ್ಟೆ – ** / ಪರವಾಗಿಲ್ಲ -***/ ಉತ್ತಮ – **** / ಅತ್ಯುತ್ತಮ – ****