Minchu Film Review : : ``Minchuhula'' is a touching visual poem

Minchula Film Reviw : “ಮಿಂಚಹುಳ” ಮನಮಿಡಿಯುವ ದೃಶ್ಯಕಾವ್ಯ - CineNewsKannada.com

Minchula Film Reviw :  “ಮಿಂಚಹುಳ” ಮನಮಿಡಿಯುವ ದೃಶ್ಯಕಾವ್ಯ

ಚಿತ್ರ: ಮಿಂಚುಹುಳ
ನಿರ್ದೇಶನ : ಮಹೇಶ್ ಕುಮಾರ್
ತಾರಾಗಣ: ಪೃಥ್ವಿರಾಜ್, ಪ್ರೀತಂ, ಪರಶಿವ ಮೂರ್ತಿ, ಮಾದೇವ್ ಮೂರ್ತಿ, ರಶ್ಮಿ ಗೌಡ, ಪೂರ್ವಿಕ, ಹಿಸಾಕ್ ಮತ್ತಿತರರು
ರೇಟಿಂಗ್: * 3.5 /5

ಕನ್ನಡದಲ್ಲಿ ಮಕ್ಕಳ ಚಿತ್ರಗಳು ಬರುವುದು ಅಪರೂಪ, ಬಂದರೂ ಕೆಲವರು ಸಹಾಯಧನಕ್ಕಾಗಿ ಮಾಡುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇಂತಹ ಮಾತುಗಳ ನಡು ನಡುವೆಯೇ ಅಪರೂಪಕ್ಕೆ ಎನ್ನುವಂತೆ ಅಪ್ಪಟ ಮಕ್ಕಳ ಚಿತ್ರಗಳು ಆಗಾಗ ತೆರೆಗೆ ಬರುತ್ತಿವೆ. ಅಂತಹ ಚಿತ್ರಗಳ ಸಾಲಿಗೆ “ಮಿಂಚುಹುಳ” ಸೇರ್ಪಡೆ.

ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಆಧಾರಸ್ತಂಭಗಳಲ್ಲಿ ಒಬ್ಬರಾಗಿ ತೆರೆಯ ಹಿಂದೆ ಹೆಚ್ಚು ತೊಡಗಿಸಿಕೊಂಡಿದ್ದ ವರದಪ್ಪ ಅವರ ಮೊಮ್ಮಗ ಪೃಥ್ವಿರಾಜ್ ಚಿತ್ರರಂಗದಕ್ಕೆ ಪಾದಾರ್ಪಣೆ ಮಾಡಿದ್ದು ಮೊದಲ ಪ್ರಯತ್ನದಲ್ಲಿ ಗಮನ ಸೆಳೆದಿದ್ದಾರೆ.

ದಾರಿ ಕಾಣದೆ ಕಂಗಾಲಾಗಿ ಕುಳಿತಿದ್ದ ಬಾಲಕನಿಗೆ ಮಿಂಚುಹುಳ ಆತನ ಬದುಕಿನಲ್ಲಿ ಏನೆಲ್ಲಾ ಬದಲಾವಣೆ ಮಾಡಿತು ಎನ್ನುವುದು ಚಿತ್ರದ ಕಥನ ಕುತೂಹಲವನ್ನು ಮನಮುಟ್ಟುವಂತೆ ನಿರ್ದೇಶಕ ಮಹೇಶ್ ಕುಮಾರ್ ತೆರೆಗೆ ಕಟ್ಟಿಕೊಟ್ಟಿದ್ದಾರೆ.

ಮನೆ ಕಳೆದುಕೊಂಡ ಬಾಲಕ-ಪ್ರೀತಂ ಕುಡುಕ ಅಪ್ಪನ ಜೊತೆ ಓದುವ ಹಂಬಲದಿಂದ ಏನೆಲ್ಲಾ ಮಾಡುತ್ತಾನೆ ಎನ್ನುವ ಸಂಗತಿಯನ್ನು ಮನಮಿಡಿಯುವಂತೆ ತೆರೆಯ ಮೇಲೆ ಕಟ್ಟಿಕೊಟ್ಟಿದ್ದಾರೆ. ಅದರಲ್ಲಿ ನಿರ್ದೇಶಕರು ಸಫಲರಾಗಿದ್ದಾರೆ ಕೂಡ.

ಆಟೋ ಓಡಿಸುವ ಕುಡುಕ ಅಪ್ಪ, ಸಕಾಲದಲ್ಲಿ ಮನೆ ಬಾಡಿಗೆ ಕಟ್ಟಲಾಗದೆ ಮನೆ ಮಾಲೀಕ ಮನೆಯಿಂದ ಹೊರಹಾಕುತ್ತಾನೆ. ಸ್ನೇಹಿತರ ಸಹಾಯದಿಂದ ಪಾಳು ಮನೆಯಲ್ಲಿ ಅಪ್ಪ-ಮಗ ಆಶ್ರಯ ಪಡೆಯುತ್ತಾರೆ. ಅಪ್ಪನಿಗೋ ಮಗ ಓದುವುದು ಬಿಟ್ಟು ಕೆಲಸ ಮಾಡಿ ಹಣ ಸಂಪಾದಿಸುವ ಆಸೆ. ಮಗನಿಗೋ ಓದಿ ಸಾಧನೆ ಮಾಡುವ ಹಂಬಲ.

ಪಾಳು ಮನೆಯಲ್ಲಿ ಓದಲು ವಿದ್ಯುತ್ ಇಲ್ಲ. ಹೀಗಾಗಿ ದಿನನಿತ್ಯದ ಶಾಲೆಯ ಹೋಮ್ ವರ್ಕ್ ಮಾಡದೆ ಶಿಕ್ಷಕರಿಂದ ಬೈಸಿಕೊಂಡು ಅವಮಾನ ಎದುಸುತ್ತಾನೆ. ಇಂತಹ ಸಮಯದಲ್ಲಿ ಹೇಗಾದರೂ ಮಾಡಿ ಶಾಲೆಯ ಹೋಮ್ ವರ್ಕ್ ಮಾಡಿ ಶಿಕ್ಷಕರಿಂದ ಶಹಬ್ಬಾಸ್ ಗಿರಿ ಗಿಟ್ಟಿಸಿಕೊಳ್ಳಲು ಬೀದಿದೀಪದ ಬೆಳಕಿನಲ್ಲಿ ಓದಲು ಆರಂಭಿಸುತ್ತಾನೆ

ಅಲ್ಲಿ ಬಾಲಕನ ಶ್ರದ್ದೆ ಕಂಡ ಪೇಪರ್ ಏಜೆಂಟ್- ಪೃಥ್ವಿರಾಜ್ ತನ್ನಲ್ಲಿ ಕೆಲಸ ಕೊಟ್ಟು ಓದಿಗೆ ನೆರವಾಗುತ್ತಾನೆ. ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕೂಡಿಟ್ಟ ಹಣ ಇಲಿಗೆ ಕಡಿದು ಹಾಕುತ್ತದೆ. ಇಂತಹ ಸಮಯದಲ್ಲಿ ಅಪ್ಪನಿಗೋ ಅವನದೇ ಸಮಸ್ಯೆ. ಬಾಲಕ ಇಂತಹ ಸಮಯದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಆತ ಏನೆಲ್ಲಾ ಮಾಡ್ತಾನೆ ಎನ್ನುವುದು ಚಿತ್ರ ತಿರುಳು

ಬಾಲಕನ ಪಾತ್ರದಲ್ಲಿ ಪ್ರೀತಮ್ ನಟನೆ ಮನಸ್ಸಿಗೆ ಮುಟ್ಟಲಿದೆ,. ಕುಡುಕ ಅಪ್ಪ ಮಗನ ಪಾತ್ರ ಚಿತ್ರದ ಜೀವಾಳ. ಜೊತೆಗೆ ಬಾಲಕನಿಗೆ ಸಹಯ ಮಾಡುವ ಪಾತ್ರದಲ್ಲಿ ಪೃಥ್ವಿರಾಜ್ ಗಮನ ಸೆಳೆದಿದ್ದಾರೆ. ಮಿಂಚುಹುಳ ಮನಮಿಡಿಯುವ ದೃಶ್ಯಕಾವ್ಯ

ಪರಶಿವ ಮೂರ್ತಿ, ಮಾದೇವ್ ಮೂರ್ತಿ, ರಶ್ಮಿ ಗೌಡ, ಪೂರ್ವಿಕ, ಹಿಸಾಕ್ ಮತ್ತಿತರು ಚಿತ್ರದ ತಾರಾಬಳದಲ್ಲಿದ್ದಾರೆ.
ಚಲ್ಲ ಛಾಯಾಗ್ರಹಣ, ರಾಜ್‍ಭಾಸ್ಕರ್ ಸಂಗೀತ ಚಿತ್ರಕ್ಕೆ ಪೂರಕವಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin