"Bharat Kanda Ayodhya Rama" video song released

“ಭಾರತ ಕಂಡ ಅಯೋಧ್ಯ ರಾಮ’ ವಿಡಿಯೋ ಹಾಡು ಬಿಡುಗಡೆ - CineNewsKannada.com

“ಭಾರತ ಕಂಡ ಅಯೋಧ್ಯ ರಾಮ’ ವಿಡಿಯೋ ಹಾಡು ಬಿಡುಗಡೆ

ವಿಶ್ವ ಆರಾಧ್ಯ ದೈವ, ಶಾಂತಿದೂತ, ಜೈ ಶ್ರೀರಾಂ ಕುರಿತಾದ ‘ರಾಮ ರಾಮ ರಾಮ ಎಂಬ ರಾಮ ಜಪದಲಿ ಜಗವ ಕಾಣಬಹುದು’ ಸಾಲಿನ ‘ಭಾರತ ಕಂಡ ಅಯೋಧ್ಯ ರಾಮ’ ಮೂರು ನಿಮಿಷದ ವಿಡಿಯೋ ಆಲ್ಬಂ ಹಾಡು ಬಿಡುಗಡೆ ಆಗಿದೆ.

ಮಾಜಿ ಶಾಸಕರಾದ ಎಂ.ಡಿ ಲಕ್ಷ್ಮಿನಾರಾಯಣ, ನೆ.ಲ.ನರೇಂದ್ರಬಾಬು ಬಿಡುಗಡೆ ಮಾಡಿ ಶುಭ ಹಾರೈಸಿದರು. ಅತ್ರೇಯ ಕ್ರಿಯೇಷನ್ ಲಾಂಚನದಲ್ಲಿ ಡಾ.ಸುಮಿತಾ ಪ್ರವೀಣ್ ಹಾಗೂ ಪ್ರವೀಣ್.ಸಿ.ಬಾನು ನಿರ್ಮಾಣ ಮಾಡಿದ್ದಾರೆ. ‘ಗಂಗೆಗೌರಿ’ ‘ತಾರಕೇಶ್ವರ’ ‘ಟೇಕ್ವಾಂಡೋ ಗರ್ಲ್’ ಚಿತ್ರಗಳ ಖ್ಯಾತಿಯ ಕು.ಋತುಸ್ಪರ್ಶ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

ನಿರ್ದೇಶಕ ಡಿ.ಸಿ.ವೀರೇಂದ್ರ ಬೆಳ್ಳಿಚುಕ್ಕಿ ಮಾತನಾಡಿ ಹಾಡಿನ ಕೆಲಸ ಮೂರು ತಿಂಗಳ ಹಿಂದೆ ಮುಗಿದಿತ್ತು. ಉತ್ತರ ಪ್ರದೇಶ ಸರ್ಕಾರದ ಸ್ಪರ್ಧಾತ್ಮಕ ವಿಭಾಗಕ್ಕೂ ಇದನ್ನು ಸಲ್ಲಿಸಲಾಗಿತ್ತು. ಕೇವಲ ಹಾಡು ಇದ್ದರೆ ಸಾಲದು. ಶುರುವಾಗುವ ಮುನ್ನ ರಾಮ, ಅಲ್ಲಿನ ದೇವಸ್ಥಾನದ ಬಗ್ಗೆ ಹಿನ್ನಲೆ ಧ್ವನಿ ನೀಡಿದರೆ ಚೆನ್ನಾಗಿರುತ್ತದೆಂದು ನಿರ್ಮಾಪಕರು ಸಲಹೆ ನೀಡಿದ್ದರಿಂದ ತರಾತುರಿಯಲ್ಲಿ ಬರೆದು ಸಿದ್ದಪಡಿಸಲಾಗಿದೆ. ಬೇರೆ ರಾಜ್ಯದವರು ಹಾಡನ್ನು ವೀಕ್ಷಿಸಿ ತುಂಬಾ ಚೆನ್ನಾಗಿ ಮೂಡಿಬಂದಿದೆ.

ಹಿಂದಿ, ಮರಾಠಿಗೆ ಧ್ವನಿಗೂಡಿಸುವ ಕೆಲಸ ನಡೆಯುತ್ತಿದೆ. ಹಿರಿಯ ನಟ ಎಂ.ಎಸ್.ಸತ್ಯು ಮಗ ಶಿವಸತ್ಯ ಸಂಗೀತ ಸಂಯೋಜಸಿದ್ದಾರೆ. ಪೇಜಾವರ ಸ್ವಾಮಿಗಳು ನಮ್ಮನ್ನು ಕರೆಸಿಕೊಂಡು ವಿಶೇಷವಾಗಿ ಸನ್ಮಾನಿಸಿದ್ದಾರೆ. ಋತುಸ್ಪರ್ಶ ಯೂಟ್ಯೂಬ್ ಚಾನಲ್‍ದಲ್ಲಿ ಗೀತೆ ನೋಡಬಹುದು. ಜಯನಗರ ಹಾಗೂ ರಾಜಾಜಿನಗರ ರಾಮಮಂದಿರ ದೇವಸ್ಥಾನದಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂಬುದಾಗಿ ಮಾಹಿತಿ ನೀಡಿದರು.

ಗಾಯಕಿ ಮಾನಸಹೊಳ್ಳ ಮಾತನಾಡಿ ಇಲ್ಲಿಯವರೆಗೂ ಸಾಕಷ್ಟು ಗೀತೆಗಳಿಗೆ ಧ್ವನಿಯಾಗಿದ್ದೇನೆ. ಆದರೆ ರಾಮನ ಬಗ್ಗೆ ಹಾಡಲು ಅವಕಾಶ ಬಂದಾಗ ಇದು ನನ್ನ ಸುಕೃತ ಅಂತ ಭಾವಿಸಿ ಭಕ್ತಿಭಾವದಿಂದ ಹಾಡಿದ್ದೇನೆ ಎಂದು ತಿಳಿಸಿದ್ದಾರೆ

ಛಾಯಾಗ್ರಹಣ ಗಗನ್, ವಿಎಫ್‍ಎಕ್ಸ್ ಅನಿಲ್ ಅವರದಾಗಿದೆ. ಸುಂದರ ಸಮಯದಲ್ಲಿ ಹಿರಿಯ ನಟ,ನಿರ್ಮಾಪಕ ಗಣೇಶ್‍ರಾವ್ ಕೇಸರ್‍ಕರ್, ನಿರ್ದೇಶಕರುಗಳಾದ ಓಂಕಾರ್ ಪುರುಷೋತ್ತಮ್, ರವೀಂದ್ರವಂಶಿ, ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್.ಕೆ.ವಿಶ್ವನಾಥ್ ಮುಂತಾದವರು ಮೊದಲಾದವರಿದ್ದಾರೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin