"'Bheema' force for Begur Colony: Vijay Kumar supports actor Rajeev Hanu

“ಬೇಗೂರು ಕಾಲೋನಿಗೆ ‘ಭೀಮ’ ಬಲ: ನಟ ರಾಜೀವ್ ಹನುಗೆ ವಿಜಯ್ ಕುಮಾರ್ ಬೆಂಬಲ - CineNewsKannada.com

“ಬೇಗೂರು ಕಾಲೋನಿಗೆ ‘ಭೀಮ’ ಬಲ: ನಟ ರಾಜೀವ್ ಹನುಗೆ ವಿಜಯ್ ಕುಮಾರ್ ಬೆಂಬಲ

ಕನ್ನಡ ಚಿತ್ರರಂಗಕ್ಕೆ ಬಲ ತುಂಬಿರುವ “ಭೀಮ” ಹೊಸಬರಿಗೆ ಸದಾ ಬೆಂಬಲವಾಗಿ ಸದಾ ನಿಂತಿದ್ದಾರೆ.ದುನಿಯಾ ವಿಜಯ್ ಕುಮಾರ್ ಅವರು ಬಿಗ್ ಬಾಸ್ ಖ್ಯಾತಿಯ ರಾಜೀವ್ ಹನು ಹೊಸ ಸಿನಿಮಾಗೆ ಸಾಥ್ ಕೊಟ್ಟಿದ್ದಾರೆ. ಫ್ಲೈಯಿಂಗ್ ಕಿಂಗ್ ಮಂಜು ಕಥೆ ಬರೆದು ನಿರ್ದೇಶಿಸಿರುವ ‘ಬೇಗೂರು ಕಾಲೋನಿ’ ಚಿತ್ರದ ಕ್ಯಾರೆಕ್ಟರ್ ಮೋಷನ್ ಪೆÇೀಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ ಎನ್ ಸುರೇಶ್ ,ಸಂಭಾಷಣೆಗಾರ ಮಾಸ್ತಿ ಸೇರಿದಂತೆ ಮತ್ತಿತರರು ಕಾರ್ಯಕ್ರಮಕ್ಕೆ ಮೆರಗು ನೀಡಿ ನಟ ರಾಜೀವ್ ಮತ್ತವರ ತಂಡಕ್ಕೆ ಶುಭ ಹಾರೈಸಿದರು

ನಟ, ನಿರ್ಮಾಪಕ ವಿಜಯ್ ಕುಮಾರ್ ಮಾತನಾಡಿ, ನಿರ್ಮಾಪಕರು ನಮ್ಮ ಊರಿನ ಕಡೆಯವರು. ನಮ್ಮದು ಅಂತಾ ಸೆಳೆಯುತ್ತದೆ. ನಿರ್ಮಾಪಕ ಹಾಗೂ ನಿರ್ದೇಶಕ ಮಂಜು ಅವರಿಗೆ ಒಳ್ಳೆದಾಗಲಿದೆ. ಮಂಜು ಗೌರವ ಕೊಡ್ತೀಯಾ ಎನ್ನುವುದಕ್ಕಿಂತ. ಹೋರಾಟದ ಶಕ್ತಿ ಕಾಡ್ತಿದೆ. ನ್ಯಾಯಾ ಕೇಳಲಿ ಎಲ್ಲಿ ಕೇಳಲಿ, ಜಾತಿ ಭೇದ ಮತ ನೊಂದವರಿಗಾಗಿ ಆದ ಅನ್ಯಾಯ ಎಂದು ಎದೆ ತಟ್ಟಿಕೊಂಡು ನಿಲ್ಲವರು ಎಂದುಕೊಂಡಿದ್ದೇನೆ. ಮಂಜು ಅವರಲ್ಲಿ ಇದನ್ನು ಕಂಡೆ. ಹೋರಾಟ ಇಟ್ಕೊಂಡು ಮಾಡಿರುವ ಕಥೆ ಬೇಗೂರು ಕಾಲೋನಿ ಎನಿಸುತ್ತದೆ.

ಈ ಹೋರಾಟದ ಕಥೆ ಸರ್ಕಾರಕ್ಕೆ ಮುಟ್ಟಲಿ,. ಕಾಲೋನಿ ಇಲ್ಲದೇ ನಗರ ಆಗಲ್ಲ. ಕಾಲೋನಿ ಶಕ್ತಿ ಶಕ್ತಿಯೇ. ಮಾಲ್ ನಗರ ಆಗುವುದು ಕಾಲೋನಿಯಿಂದ, ಕಾಲೋನಿಯವರು ಕಾಲಿಗೆ ಸಮ ಅಲ್ಲ. ಅವರಿಂದನೇ ಎಲ್ಲಾ. ಕಾಲೋನಿಯವರು ಮೊದಲು ಸಿನಿಮಾ ನೋಡಿ ಆಮೇಲೆ ಮಾಲ್ ನವರು ಬಂದು ನೋಡ್ತಾರೆ. ರಾಜೀವ್ ಕ್ರಿಕೆಟ್ ಆಡುವುದು ನಟನೆಯಲ್ಲಿ ಫೋರ್ಸ್ ಇದೆ. ಆದರೆ ಕರೆಕ್ಟ್ ಟೈಮ್ ನಲ್ಲಿ ಬರ್ತಿಲ್ಲ. ರಾಜೀವ್ ಹಾರ್ಡ್ ವರ್ಕರ್. ಇಡೀ ತಂಡಕ್ಕೆ ಒಳ್ಳೆದಾಗಲಿ ಎಂದರು.

ನಿರ್ದೇಶಕ ಫ್ಲೈಯಿಂಗ್ ಮಂಜು ಮಾತನಾಡಿ, ಕಾಲೋನಿ ಸೊಸೈಟಿ, ಎಲ್ಲಾ ರೀತಿ ಜನ ವಾಸ ಮಾಡ್ತಾರೆ. ಅಲ್ಲಿ ನಡೆಯುವ ಒಂದು ಸಣ್ಣ ಕಥೆ ಕಾಲೋನಿ. ಇದು ಹೋರಾಟದ ಕಥೆ. ಇದರಲ್ಲಿ ಫೈಟ್ಸ್ ಚೆನ್ನಾಗಿ ಮಾಡಿದ್ದರೆ ಆ ಕ್ರೆಡಿಟ್ ವಿಜಯ್ ಅಣ್ಣನಿಗೆ ಹೋಗಲಿ. ನನ್ನ ಸಣ್ಣ ನಿರ್ದೇಶಕನಿಗೆ ವಿಜಯ್ ಅಣ್ಣ ಸಾಥ್ ಕೊಟ್ಟಿದ್ದು ನಾನು ಎಂದಿಗೂ ಮೆರಯುವುದಿಲ್ಲ ಎಂದರು.

ನಟ ರಾಜೀವ್ ಹನು ಮಾತನಾಡಿ, ಫ್ಲೈಕಿಂಗ್ ಮಂಜು ಸತತ 15 ವರ್ಷಗಳ ಪರಿಚಯ. ತನಗೆ ಏನು ಬೇಡ. ಹೊಟ್ಟೆ ತುಂಬಿದರೆ ಸಾಕು ಎಂದು ಕೆಲಸ ಮಾಡುವ ವ್ಯಕ್ತಿ,. ಆ ಕೆಲಸ ಪರದೆಯ ಮೇಲೆ ಕಾಣುತ್ತಿದೆ. ಇವತ್ತು ಇಷ್ಟು ಜನ ಒಟ್ಟುಗೂಡಿಸುವ ಕೆಲಸ ಕೂಡ ಅವರದ್ದು ಹಾಗೂ ನಿರ್ಮಾಪಕರದ್ದು. ರಾಜೀವ್ ರಾಘವನಾಗಿ ನಿಂತುಕೊಳ್ತಾನೆ ಎಂಬ ನಂಬಿಕೆ ಇದೆ ಎಂದರು.

ಆನಂದ್ ಅಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬೇಗೂರು ಕಾಲೋನಿ ಕ್ಯಾರೆಕ್ಟರ್ ಮೋಷನ್ ಪೆÇೀಸ್ಟರ್ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಬರುವ ಎಲ್ಲಾ ಪಾತ್ರಧಾರಿಗಳನ್ನು ಈ ವಿಡಿಯೋದಲ್ಲಿ ಪರಿಚಯಿಸಲಾಗಿದ್ದು, ಇನ್ನೇನು ಶೀಘ್ರದಲ್ಲೇ ಚಿತ್ರತಂಡ ಟೀಸರ್ ರಿಲೀಸ್ ಮಾಡುವ ನಿರೀಕ್ಷೆಯಲ್ಲಿದೆ.

ಈ ಚಿತ್ರವನ್ನು ಶ್ರೀಮಾ ಸಿನಿಮಾಸ್ ಬ್ಯಾನರ್ ನಲ್ಲಿ ಎಂ ಶ್ರೀನಿವಾಸ್ ಬಾಬು ನಿರ್ಮಾಣ ಮಾಡಿದ್ದು, ರಾಜೀವ್ ಹನು ಸೇರಿದಂತೆ ಫೈಯಿಂಗ್ ಕಿಂಗ್ ಮಂಜು, ಪಲ್ಲವಿ ಹರ್ವ, ಕೀರ್ತಿ ಭಂಡಾರಿ, ಪೆÇೀಸಾಗ್ನಿ ಕೃಷ್ಣ ಮುರಳಿ, ಬಾಲ ರಾಜವಾಡಿ ಬಣ್ಣ ಹಚ್ಚಿದ್ದಾರೆ. ವಿಜಯ್ ಸೋವರ್ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದು, ಪ್ರಮೋದ್ ತಳವಾರ್ ಸಂಕಲನ, ಹಾಗೂ ಕಾರ್ತಿಕ್ ಛಾಯಾಗ್ರಹಣ, ಅಭಿನಂದನ್ ಕಶ್ಯಪ್ ಸಂಗೀತ ಚಿತ್ರಕ್ಕಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin