Karki Film Review: ಜಾತಿ ಸಂಘರ್ಷದಲ್ಲಿ ನಲುಗಿದ ಮಾನವೀಯತೆಯ ಕಥನ “ಕರ್ಕಿ”
ಚಿತ್ರ: ಕರ್ಕಿ
ನಿರ್ದೇಶನ: ಪವಿತ್ರನ್
ನಿರ್ಮಾಣ : ಪಳನಿ ಪ್ರಕಾಶ್
ತಾರಾಗಣ: ಜೆಪಿ ರೆಡ್ಡಿ, ಮೀನಾಕ್ಷಿ ದಿನೇಶ್, ಸಾಧುಕೋಕಿಲ,ಬಾಲರಾಜವಾಡಿ, ಯತಿರಾಜ್ ಮತ್ತಿತರರು
ರೇಟಿಂಗ್: *** 3/5
ಕನ್ನಡದಲ್ಲಿ ಆಗಾಗ್ಗೆ ಸಾಮಾಜಿಕ ಕಳಕಳಿಯ ಚಿತ್ರಗಳು ತೆರೆಗೆ ಬರುತ್ತಿವೆ. ಇದೀಗ ಅಂತಹುದೇ ಮತ್ತೊಂದು ಚಿತ್ರ “ಕರ್ಕಿ” ಈ ವಾರ ತೆರೆಗೆ ಬಂದಿದೆ. ತಮಿಳಿನಲ್ಲಿ ಮೂಡಿಬಂದ ಚಿತ್ರವನ್ನು ಕನ್ನಡಕ್ಕೆ ಇಲ್ಲಿಯ ಸೊಗಡಿಗೆ ತಕ್ಕಂತೆ ತಮಿಳಿನ ನಿರ್ದೇಶಕ ಪವಿತ್ರನ್ ಚಿತ್ರವನ್ನು ತೆರೆಗೆ ಕಟ್ಟಿಕೊಟ್ಟಿದ್ದಾರೆ.
ಮೇಲುವರ್ಗ,ಕೆಳವರ್ಗ ಎನ್ನುವ ಜಾತಿ ವ್ಯವಸ್ಥೆ ಅನಾದಿಕಾಲದಿಂದ ಮುಂದುವರಿದಿದೆ. ಇಂದಿಗೂ ಅದು ಮುಂದುವರಿದುಕೊಂಡು ಬಂದಿರುವುದು ಸಮಾಜದ ಜಾತಿ ವ್ಯವಸ್ಥೆ, ಸಂಘರ್ಷಕ್ಕೆ ಕೈಗನ್ನಡಿ ಹಿಡಿದಿರುವ ಚಿತ್ರ “ಕರ್ಕಿ”, ಜಾತಿ ಸಂಘರ್ಷದಲ್ಲಿ ಓದು, ವಿದ್ಯೆ, ಮಾನವೀಯತೆ ನಲುಗಿ ಹೋಗಿದ್ದು ಬದಲಾಗಿ ಜಾತೀಯತೆ, ಸಂಘರ್ಷ ಮೇಲು ಕೀಳು, ವಿಜೃಂಬಿಸಿದೆ.
ಕಾನೂನು ಪದವೀಧರನಾಗಬೇಕು ಎನ್ನುವ ಕನಸು ಕಟ್ಟಿಕೊಂಡ ತಳ ಸಮುದಾಯದ ಹುಡುಗ ಪ್ರೀತಿಯ ವಿಷಯಕ್ಕೆ ಎಲ್ಲವನ್ನು ಕಳೆದುಕೊಳ್ಳುವ ಅನಿವಾರ್ಯತೆಗೆ ಸಿಲುಕತ್ತಾನೆ. ಸಮಾಜದ ಪೈಶಾಚಿಕ ಕೃತ್ಯಗಳ ನಡುವೆಯೇ ತನ್ನನ್ನು ರಕ್ಷಿಸಿಕೊಳ್ಳಬೇಕು ಎನ್ನುವಾಗ ನಡೆಯುವ ಘಟನೆಗಳು, ಜೀವಕ್ಕೆ ಬೆಲೆ ಇಲ್ಲದ ಪರಿಸ್ಥಿತಿಗಳು, ತನ್ನನ್ನು ತಾನೂ ಕಾಪಾಡಿಕೊಳ್ಳಲು ಆತನ ಮಾಡುವ ಕೆಲಸಗಳು ಚಿತ್ರದಲ್ಲಿ ಕಾಡಿವೆ.
ಮಗಳು ಕೆಳ ವರ್ಗದ ಹುಡುನ ಜೊತೆ ಸ್ನೇಹದಿಂದ ಇದ್ದಾಳೆ ಎನ್ನುವುದನ್ನು ಸಹಿಸದ ಮನೆ ಮಾಡುವ ಕೆಲಸಗಳು ಚಿತ್ರದಲ್ಲಿ ಎದ್ದು ಕಾಣುತ್ತವೆ. ಜೊತೆಗೆ ನಾಯಿ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದೆ ಅದು ಏನು ಎನ್ನುವುದನ್ನು ಚಿತ್ರದಲ್ಲಿ ನೋಡಿದರೆ ಚೆನ್ನ
ತಮಿಳಿನ ಪೇರರಿಯುಮ್ ಪೆರುಮಾಳ್ ಚಿತ್ರವನ್ನು ಕನ್ನಡೀಕರಣ ಮಾಡುವ ಪ್ರಯತ್ನವನ್ನು ನಿರ್ದೇಶಕರು ಮಾಡಿರುವುದು ಸ್ವಾಗತಾರ್ಹ. ಈ ಮೂಲಕ ಸಮಾಜದ ಮೇಲು,ಕೀಲು ಸೇರಿದಂತೆ ಜಾತಿ ತಾರತಮ್ಯದ ವ್ಯವಸ್ಥೆಯನ್ನು ಕಣ್ಣಿಗೆ ಕಟ್ಟಿದ ಹಾಗೆ ತೆರೆಯ ಮೇಲೆ ಕಟ್ಟಿಕೊಡುವಲ್ಲಿ ಸಫಲರಾಗಿದ್ದಾರೆ.
ನಾಯಕ ಜೆಪಿ ರೆಡ್ಡಿ, ಸಿಕ್ಕ ಪಾತ್ರಕ್ಕೆ ನ್ಯಾಯ ಒದಿಗಿದ್ದಾರೆ. ಒಳ್ಳೆಯ ಕತೆಗಳು ಸಿಕ್ಕರೆ ತಾವೊಬ್ಬ ಉತ್ತಮ ನಟನಾಗಬಲ್ಲೆ ಎನ್ನುವುದನ್ನು ನಿರೂಪಿಸಿದ್ದಾರೆ. ನಟಿ ಮೀನಾಕ್ಷಿ ದಿನೇಶ್, ಹಿರಿಯ ಕಲಾವಿದರಾದ ಸಾಧುಕೋಕಿಲ, ಬಲರಾಜವಾಡಿ, ಯತಿರಾಜ್ ಮತ್ತಿತರರು ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ.
ಕನ್ನಡದ ನೆಲದ ಮಣ್ಣಿನ ಸೊಗಡಿಗೆ ತಕ್ಕಂತೆ ಹಾಗು ಶೋಷಣೆ ಮತ್ತು ಅಸಮಾನತೆಯ ವಿರುದ್ದ ಬಳಲುವ ಸಮುದಾಯವನ್ನು ಬಿಂಬಿಸುವ ಹಾಡುಗಳನ್ನು ಚಿತ್ರದ ಮೂಲಕ ನೀಡಿದ್ದಾರೆ.
ಮರ್ಯಾದಾ ಹತ್ಯೆಗಳು ನಡೆಯುತ್ತಿರುವ ಕಾಲಘಟ್ಟದಲ್ಲಿ ಪ್ರೀತಿಯ ಹೆಸರಲ್ಲಿ ನಡೆಯುವ ಕೊಲೆ ಎಂತವರ ಕರಳು ಹಿಂಡದೇ ಇರಲಾರದು. ಮನಮಿಡಿಯುವ ಕಥೆಯನ್ನು ನಿರ್ದೇಶಕರು ಕರ್ಕಿ ಮೂಲಕ ಕನ್ನಡದ ಪ್ರೇಕ್ಷಕರ ಮುಂದಿಟ್ಟಿದ್ದಾರೆ. ರಿಷಿಕೇಶ್ ಛಾಯಾಗ್ರಹಣ ಅರ್ಜುನ್ ಜನ್ಯಾ ಸಂಗೀತ, ಕವಿರಾಜ್ ಹಾಡುಗಳು ಚಿತ್ರಕ್ಕೆ ಪೂರಕವಾಗಿವೆ.
ರೇಟಿಂಗ್ : ಕಳೆಪೆ – * / ಅಷ್ಟಕಷ್ಟೆ – ** / ಪರವಾಗಿಲ್ಲ – ***/ ಉತ್ತಮ – **** / ಅತ್ಯುತ್ತಮ – *****