Bollywood actor Sunny Deol in mass avatar for 'Jatt'

‘ಜಟ್’ಗಾಗಿ ಮಾಸ್ ಅವತಾರವೆತ್ತ ಬಾಲಿವುಡ್ ನಟ ಸನ್ನಿ ಡಿಯೋಲ್ - CineNewsKannada.com

‘ಜಟ್’ಗಾಗಿ ಮಾಸ್ ಅವತಾರವೆತ್ತ ಬಾಲಿವುಡ್ ನಟ ಸನ್ನಿ ಡಿಯೋಲ್

ದೇಶಪ್ರೇಮಕ್ಕೆ ಕೇರ್ ಆಫ್ ಅಡ್ರೆಸ್ ಎನಿಸಿಕೊಂಡಿರುವ ಸನ್ನಿ ಡಿಯೋಲ್ ಬರ್ತಡೇ ಸಂಭ್ರಮದಲ್ಲಿದ್ದಾರೆ. ‘ಗದರ್-2’ ಹಿಟ್ ಬಳಿಕ ಸನ್ನಿ ಡಿಯೋಲ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಪೈಕಿ ನಿರೀಕ್ಷೆ ಹೆಚ್ಚಿಸಿರುವ ಸಿನಿಮಾ ‘ಜಟ್’. ತೆಲುಗಿನಲ್ಲಿ ಕ್ರ್ಯಾಕ್, ವೀರ ಸಿಂಹ ರೆಡ್ಡಿ ಸಿನಿಮಾಗಳ ನಿರ್ದೇಶಕ ಗೋಪಿಚಂದ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಜಟ್ ಸಿನಿಮಾದ ಫಸ್ಟ್ ಲುಕ್ ಬಾರ್ಡರ್ ಬಾಯ್ ಬರ್ತಡೇ ಸ್ಪೆಷಲ್ ಆಗಿ ರಿಲೀಸ್ ಮಾಡಲಾಗಿದೆ.

ಜಟ್ ಸಿನಿಮಾಗಾಗಿ ಸನ್ನಿ ಡಿಯೋಲ್ ಮಾಸ್ ಅವತಾರವೆತ್ತಿದ್ದಾರೆ. ಕೈಯಲ್ಲಿ ಭಾರೀ ಗಾತ್ರದ ಫ್ಯಾನ್ ಹಿಡಿದು ಗಂಭೀರವಾದ ಲುಕ್ ಕೊಟ್ಟಿರುವ ಸನ್ನಿ ಕೈ ತುಂಬಾ ಹಾಗೂ ಫ್ಯಾನ್ಸ್ ಮುಂಭಾಗ ರಕ್ತ ಹೈಲೆಟ್ ಆಗಿದೆ. ಈ ಚಿತ್ರದಲ್ಲಿ ಸನ್ನಿ ಡಿಯೋಲ್ ಕಂಪ್ಲೀಟ್ ಮಾಸ್ ಅವತಾರದಲ್ಲಿ ದರ್ಶನ ಕೊಡಲಿದ್ದಾರೆ.

ಆಕ್ಷನ್ ಪ್ಯಾಕ್ಡ್ ಜಟ್ ಸಿನಿಮಾದಲ್ಲಿ ರಣದೀಪ್ ಹೂಡಾ, ವಿನೀತ್ ಕುಮಾರ್ ಸಿಂಗ್, ಸೈಯಾಮಿ ಖೇರ್ ಮತ್ತು ರೆಜಿನಾ ಕಸ್ಸಂದ್ರ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ತಮನ್ ಎಸ್ ಸಂಗೀತ, ರಿಷಿ ಪಂಜಾಬಿ ಛಾಯಾಗ್ರಹಣ, ನವೀನ್ ನೂಲಿ ಸಂಕಲನ ಚಿತ್ರಕ್ಕಿದೆ. ಪೀಟರ್ ಹೆನ್, ಅನ್ಲ್ ಅರಸು, ರಾಮ್ ಲಕ್ಷ್ಮಣ್ ಮತ್ತು ವೆಂಕಟ್ ಸಾಹಸ ನಿರ್ದೇಶನ ಜಟ್ ಸಿನಿಮಾದಲ್ಲಿರಲಿದೆ.

ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್ ನಡಿ ನವೀನ್ ಯೆರ್ನೇನಿ ಹಾಗೂ ವೈ ರವಿಶಂಕರ್, ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ನಡಿ ಟಿ.ಜಿ ವಿಶ್ವ ಪ್ರಸಾದ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ, ಬಹಳ ಅದ್ಧೂರಿಯಾಗಿ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ತಯಾರಾಗುತ್ತಿರುವ ಚಿತ್ರದ ಶೂಟಿಂಗ್ ಸದ್ಯ ಹೈದ್ರಾಬಾದ್ ನಲ್ಲಿ ಭರದಿಂದ ಸಾಗುತ್ತಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin