Shivanna will release the teaser of 'Son of Muttanna' on October 23

ಅಕ್ಟೋಬರ್ 23ಕ್ಕೆ ಸನ್ ಆಫ್ ಮುತ್ತಣ್ಣ’ ಟೀಸರ್ ಬಿಡುಗಡೆ ಮಾಡಲಿರುವ ಶಿವಣ್ಣ - CineNewsKannada.com

ಅಕ್ಟೋಬರ್ 23ಕ್ಕೆ ಸನ್ ಆಫ್ ಮುತ್ತಣ್ಣ’ ಟೀಸರ್ ಬಿಡುಗಡೆ ಮಾಡಲಿರುವ ಶಿವಣ್ಣ

ನಟ ಪ್ರಣಂ ದೇವರಾಜ್ ಅಭಿನಯದ “ಸನ್ ಆಫ್ ಮುತ್ತಣ್ಣ”ನಿಗೆ ಸಾಥ್ ಕೊಡಲಿರುವ ಸನ್ ಆಫ್ ಮುತ್ತುರಾಜ…ಇದೇ 23ಕ್ಕೆ ಪ್ರಣಂ ದೇವರಾಜ್ ಚಿತ್ರದ ಟೀಸರ್ ಅನಾವರಣ ಮಾಡಲಿದ್ದಾರೆ

ದೇವರಾಜ್ ಎರಡನೇ ಪುತ್ರ ಯಂಗ್ ಡೈನಾಮಿಕ್ ಪ್ರಣಂ ದೇವರಾಜ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಸನ್ ಮುತ್ತಣ್ಣ.. ಟೈಟಲ್ ಹಾಗೂ ಪೋಸ್ಟರ್ ನಿಂದಲೇ ಕುತೂಹಲ ಹೆಚ್ಚಿಸಿರುವ ಈ ಚಿತ್ರದ ಆಡಿಯೋ ಹಕ್ಕು ಒಳ್ಳೆ ಮೊತ್ತಕ್ಕೆ ಬಿಕರಿಯಾಗಿದೆ. ಇದೀಗ ಸನ್ ಆಫ್ ಮುತ್ತಣ್ಣ ಬಳಗದಿಂದ ಹೊಸ ಅಪ್ ಡೇಟ್ ಸಿಕ್ಕಿದೆ. ಸನ್ ಆಫ್ ಮುತ್ತುರಾಜ್ ಸನ್ ಆಫ್ ಮುತ್ತಣ್ಣನಿಗೆ ಸಾಥ್ ಕೊಡುತ್ತಿದ್ದಾರೆ. ಇದೇ 23ರಂದು ಚಿತ್ರದ ಟೀಸರ್ ರಿಲೀಸ್ ಮಾಡಿ ಶಿವಣ್ಣ ಇಡೀ ತಂಡಕ್ಕೆ ಶುಭ ಹಾರೈಸಲಿದ್ದಾರೆ.

ಶ್ರೀಕಾಂತ್ ಹುಣಸೂರು ನಿರ್ದೇಶಿಸುತ್ತಿರುವ “ಸನ್ ಆಫ್ ಮುತ್ತಣ್ಣ’ ಸಿನಿಮಾದಲ್ಲಿ ಪ್ರಣಂ ದೇವರಾಜ್ ಅವರಿಗೆ ಖುಷಿ ರವಿ ನಾಯಕಿಯಾಗಿ ಜೋಡಿಯಾಗುತ್ತಿದ್ದಾರೆ. ರಂಗಾಯಣ ರಘು ನಾಯಕನ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಸುಚೇಂದ್ರ ಪ್ರಸಾದ್, ಗಿರೀಶ್ ಶಿವಣ್ಣ, ತಬಲ ನಾಣಿ, ಶ್ರೀನಿವಾಸ್ ಪ್ರಭು, ಸುಧಾ ಬೆಳವಾಡಿ, ಅರುಣ್ ಚಕ್ರವರ್ತಿ ಮುಂತಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಟೈಟಲ್ ಹೇಳುವಂತೆ ಇದೊಂದು ಅಪ್ಪ-ಮಗನ ಬಾಂಧವ್ಯದ ಕಥೆಯಾಗಿದ್ದು, ಸಿನಿಮಾಗೆ ಸ್ಕೇಟ್ಟಿಂಗ್ ಕೃಷ್ಣ ಛಾಯಾ ಗ್ರಹಣ, ಹರೀಶ್ ಕೊಮ್ಮೆ ಸಂಕಲನ, ಸಚಿನ್ ಬಸ್ರೂರ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಪುರಾತನ ಫಿಲ್ಮಂ ಹಾಗೂ Sಖಏ ಫಿಲಂಸ್ ಸಹಯೋಗದಲ್ಲಿ ಈ ಚಿತ್ರ ನಿರ್ಮಾಣ ಮಾಡಲಾಗುತ್ತಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin