ಅಕ್ಟೋಬರ್ 18ಕ್ಕೆ ಗಾನಕೋಗಿಲೆ ಎಸ್. ಜಾನಕಿ ಅವರ ‘ಗಾನಯಾನ’ದ ಸಂಭ್ರಮ
ಭಾರತೀಯ ಚಿತ್ರರಂಗದಲ್ಲಿ ಗಾನಕೋಗಿಲೆ ಎಂದೇ ಖ್ಯಾತಿ ಪಡೆಯುವ ಮೂಲಕ ಕೋಟ್ಯಂತರ ಅಭಿಮಾನಿಗಳ ಮನೆಸೋರೆಗೊಂಡಿರುವ “ಎಸ್ ಜಾನಕಿ” ಅವರ ಗಾನಯಾನದ ಸಂಭ್ರಮವನ್ನು ಸವಿಯುವ ಸುವರ್ಣಾವಕಾಶ “ ಮಾನಸ ಗಾನ ಜಾನಕಿ ಧ್ಯಾನ”ಕ್ಕೆ ವೇದಿಕೆ ಸಿದ್ದಪಡಿಸಲಾಗಿದೆ

ಗಾಯಕಿ ಹಾಗು ಸಂಗೀತ ನಿರ್ದೇಶಕಿ ಮಾನಸ ಹೊಳ್ಳ ಅವರು ಅಕ್ಟೋಬರ್ 18 ರಂದು “ಎಸ್ ಜಾನಕಿಅಮ್ಮ ಅವರ ಸುವರ್ಣ ಧ್ವನಿಯನ್ನು ಆಚರಿಸುವ 12 ಗಂಟೆಗಳ ಬಹುಭಾಷಾ ಸಂಗೀತ ಪ್ರಯಾಣದ ಸಂಗೀತ ಉತ್ಸವದ ಸಂಭಮ ಹಮ್ಮಿಕೊಂಡಿದ್ದಾರೆ
ಕನ್ನದ ಹಾಡುಗಳ ಜೊತೆ ಜೊತೆಗೆ ತಮಿಳು, ತೆಲುಗು, ಹಿಂದಿ ಮತ್ತು ಅದರಾಚೆಗೆ ಗಾನಕೋಗಿಲೆ ಎಸ್ ಜಾನಕಿ ಅವರ ಕಾಲಾತೀತ ಮಾಂತ್ರಿಕತೆಯನ್ನು ಒಟ್ಟಿಗೆ ಅನುಭವಿಸುವ ಮತ್ತು ಸಂಭ್ರಮಿಸುವ ಸದಾವಕಾಶವನ್ನು ಒದಗಿಸಲಾಗಿದೆ.
ಎಸ್ ಜಾನಕಿ ಅಮ್ಮ ಅವರ ಸಂಗೀತ ಕಾರ್ಯಕ್ರಮದ ಮೂಲಕ ಗಾನ ಸುಧೆಯನ್ನು ಹರಿಸಲು ಸಂಗೀತ ನಿರ್ದೇಶಕಿ ಮತ್ತು ಗಾಯಕಿ ಮಾನಸ ಹೊಳ್ಳ ಅವರ ನೇತೃತ್ವದಲ್ಲಿ “ ಮಾನಸ ಗಾನ ಜಾನಕಿ ಧ್ಯಾನ” ಬೆಂಗಳೂರಿನ ಪ್ರೆಸ್ಟೀಜ್ ಸೆಂಟರ್ ಫರ್ಮಾಮಿಂಗ್ ಆಟ್ರ್ಸ್‍ನಲ್ಲಿ ನಡೆಯಲಿದೆ.

ಬಹುಭಾಷಾ ಸಂಗೀತ ಕಚೇರಿಯಲ್ಲಿ ಎಸ್ ಜಾನಕಿ ಅವರು ಕನ್ನಡ ಸೇರಿದಂತೆ ಬಹುಭಾಷೆಯಲ್ಲಿ ಹಾಡಿರುವ ಜನಪ್ರಿಯ ಹಾಡುಗಳನ್ನು ಒಂದೇ ಸೂರಿನಡಿ ಸವಿಯುವ ಮತ್ತು ಸಂಭ್ರಮಿಸುವ ಅವಕಾಶ ಒದಗಿಸಲಾಗಿದೆ

