"Celebrity Women's Kabaddi League": Actor, producer Navarasan's new endeavor

“ಸೆಲೆಬ್ರಿಟಿ ವುಮೆನ್ಸ್ ಕಬ್ಬಡಿ ಲೀಗ್” : ನಟ, ನಿರ್ಮಾಪಕ ನವರಸನ್ ಹೊಸ ಪ್ರಯತ್ನ - CineNewsKannada.com

“ಸೆಲೆಬ್ರಿಟಿ ವುಮೆನ್ಸ್ ಕಬ್ಬಡಿ ಲೀಗ್” : ನಟ, ನಿರ್ಮಾಪಕ ನವರಸನ್ ಹೊಸ ಪ್ರಯತ್ನ

ನಟ ನಿರ್ಮಾಪಕ, ನಿರ್ದೇಶಕ,ಹಾಗೂ ಈಗಲ್ ಮೀಡಿಯಾ ಕ್ರಿಯೇಷನ್ಸ್ ಮೂಲಕ ಇವೆಂಟ್ ಗಳನ್ನು ಆಯೋಜಿಸುವ ಮೂಲಕ ಜನಪ್ರಿಯರಾಗಿರುವ ನವರಸನ್ “ಸೆಲೆಬ್ರಿಟಿ ವುಮೆನ್ಸ್ ಕಬ್ಬಡಿ ಲೀಗ್” ಆಯೋಜಿಸುವ ಮೂಲಕ ಕ್ರೀಡಾಲೋಕಕ್ಕೆ ಅಡಿಯಿಟ್ಟಿದ್ದಾರೆ.

“ಸಿಡಬ್ಯುಕೆಎಲ್” ಹೆಸರಿನ ಈ ಕಬ್ಬಡಿ ಟೂರ್ನಿಯ ಲೋಗೊವನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅನಾವರಣ ಮಾಡಿ ಟೂರ್ನಿ ಯಶಸ್ವಿಯಾಗಲೆಂದು ಹಾರೈಸಿದರು.

ಈ ವೇಳೆ ಮಾತನಾಡಿದ ನವರಸನ್ ಕಬ್ಬಡಿ ನಮ್ಮ ದೇಸಿ ಕ್ರೀಡೆ. ಈ ಕ್ರೀಡೆಯನ್ನು ಮಹಿಳೆಯರು ಆಡುವುದು ಕಡಿಮೆ. ಆ ನಿಟ್ಟಿನಲ್ಲೇ ಈ “ಸೆಲೆಬ್ರಿಟಿ ವುಮೆನ್ಸ್ ಕಬ್ಬಡಿ ಲೀಗ್” ಆಯೋಜಿಸಿದ್ದೇನೆ. ಲೋಗೊವನ್ನು ಬಿಡುಗಡೆ ಮಾಡಿಕೊಟ್ಟ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಈ ಸಂದರ್ಭದಲ್ಲಿ ಧನ್ಯವಾದ . ಈ ಟೂರ್ನಿಯಲ್ಲಿ 10 ತಂಡಗಳಿರುತ್ತದೆ. ಸುಮಾರು 120 ಕ್ಕೂ ಅಧಿಕ ನಟಿಯರು ಪಾಲ್ಗೊಳಲಿದ್ದಾರೆ. ಹತ್ತು ತಂಡಗಳಲ್ಲಿ ಈಗಾಗಲೇ ಎಂಟು ತಂಡಗಳಿಗೆ ಮಾಲೀಕರು ದೊರಕಿದ್ದಾರೆ. ಏಪ್ರಿಲ್ ನಲ್ಲಿ ಟೂರ್ನಿ ನಡೆಯಲಿದೆ ಎಂದರು

ಕನ್ನಡ ಚಿತ್ರರಂಗದ ಕಲಾವಿದರು, ತಂತ್ರಜ್ಞರು ಹಾಗೂ ನಿರ್ಮಾಪಕರು ಈ ಟೂರ್ನಿಗೆ ಆಗಮಿಸಿ ಸ್ಪರ್ಧಿಗಳಿಗೆ ಉತ್ತೇಜನ ನೀಡಲಿದ್ದಾರೆ. ಸಾಯಿ ಗೋಲ್ಡ್ ಪ್ಯಾಲೇಸ್ ನ ಸರವಣ ಅವರು, ನಿರ್ಮಾಪಕರಾದ ಚೇತನ್ ಗೌಡ, ಸುರೇಶ್ ಗೌಡ ಹಾಗೂ ರಮೇಶ್ ರೆಡ್ಡಿ ಮುಂತಾದವರು ನಮ್ಮ ಜೊತೆಗಿರುವುದು ತುಂಬಾ ಸಂತೋಷವಾಗಿದೆ ಎಂದು ಹೇಳಿದರು

ವಿಧಾನ ಪರಿಷತ್ ಸದಸ್ಯರಾದ ಶರವಣ ಮಾತನಾಡಿ ಈ ಟೂರ್ನಿಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಹೆಣ್ಣುಮಕ್ಕಳಿಗೆ ಸಾಯಿಗೋಲ್ಡ್ ಪ್ಯಾಲೆಸ್ ನ ಕಡೆಯಿಂದ ಹತ್ತು ಸಾವಿರ ರೂಪಾಯಿಯ ಗಿಫ್ಟ್ ವೋಚರ್ ನೀಡುವುದಾಗಿ ಹೇಳಿದರು.

ಹತ್ತು ತಂಡಗಳಲ್ಲಿ ಒಂದು ತಂಡದ ಮಾಲೀಕರಾದ “ವಾಮನ” ಚಿತ್ರದ ನಿರ್ಮಾಪಕ ಚೇತನ್ ಗೌಡ ನವರಸನ್ ಅವರಿಗೆ ಹತ್ತು ಲಕ್ಷದ ಚೆಕ್ ನೀಡಿದರು. ಕಬ್ಬಡಿ ಆಟದ ಕುರಿತು ಕೋಚರ್ ಶೃದಿಯಾ ರಮಣ್ ಗೌಡ ಮಾಹಿತಿ ನೀಡಿದರು.

ನಟಿಯರಾದ ಸಿಂಧೂ ಲೋಕನಾಥ್, ಅಪೂರ್ವ ಹಾಗೂ ಕಾರುಣ್ಯರಾಮ್ ಮುಂತಾದ ನಟಿಯರು “ಅWಏS” ಯಶಸ್ವಿಯಾಗಲೆಂದು ಹಾರೈಸಿದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin