"Nagavalli Bungalow", representing the Arishdvargas, to be released on February 28th
ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ “ನಾಗವಲ್ಲಿ ಬಂಗಲೆ” ಫೆಬ್ರವರಿ 28ಕ್ಕೆ ತೆರೆಗೆ
ಕನ್ನಡದಲ್ಲಿ ಉತ್ತಮ ಕಂಟೆಂಟ್ ವುಳ್ಳ ಚಿತ್ರಗಳೇ ಹೆಚ್ಚಾಗಿ ಜನರನ್ನು ತಲುಪುತ್ತಿದೆ. ಅಂತಹ ಉತ್ತಮ ಹಾಗೂ ವಿಭಿನ್ನ ಕಂಟೆಂಟ್ ಹೊತ್ತು “ನಾಗವಲ್ಲಿ ಬಂಗಲೆ” ನಿರ್ಮಾಣವಾಗಿದೆ.

ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ,ಮೋಹ, ಮದ, ಮತ್ಸರ ಈ ಆರು ಗುಣಗಳನ್ನು ಪ್ರತಿನಿಧಿಸುವ ಆರು ಪಾತ್ರಗಳ ಜೊತೆಗೆ ಮತ್ತೊಂದು ವಿಶೇಷ ಪಾತ್ರವಿರುವ “ನಾಗವಲ್ಲಿ ಬಂಗಲೆ” ಚಿತ್ರ ಈ ಫೆಬ್ರವರಿ 28 ರಂದು ಬಿಡುಗಡೆಯಾಗುತ್ತಿದೆ.

ಈ ಚಿತ್ರವನ್ನು ಹಂಸ ವಿಷನ್ಸ್ ಲಾಂಛನದಲ್ಲಿ ನೆಲ ಮಹೇಶ್ ಮತ್ತು ನೇವಿ ಮಂಜು ನಿರ್ಮಿಸಿದ್ದಾರೆ. ಕವಿ ರಾಜೇಶ ನಿರ್ದೇಶನ, ರೋಹನ್ ದೇಸಾಯಿರವರ ಸಂಗೀತ, ಜೆ. ಎಮ್. ಪ್ರಹ್ಲಾದ್ ರವರ ಕಥೆ -ಚಿತ್ರಕಥೆ-ಸಂಭಾಷಣೆ ಈ ಚಿತ್ರಕ್ಕಿದೆ. ಈ ಚಿತ್ರದ ಪ್ರಮುಖ ತಾರಾಬಳಗದಲ್ಲಿ ನೆ.ಲ.ನರೇಂದ್ರಬಾಬು, ಯಶ್, ತೇಜಸ್ವಿನಿ, ನೇವಿ ಮಂಜು, ರೂಪಶ್ರೀ ಮುಂತಾದವರಿದ್ದಾರೆ.

