ಸಿಟಿ ಲೈಟ್ಸ್ ಚಿತ್ರದ “ಬಾವ ಬಾವ” ಹಾಡು ಬಿಡುಗಡೆ : ಹ್ಯಾಟ್ರಿಕ್ ನಿರೀಕ್ಷೆಯಲ್ಲಿ ನಿರ್ದೇಶಕ ವಿಜಯ್ ಕುಮಾರ್
ಸಲಗ, ಭೀಮ ಚಿತ್ರಗಳ ಯಶಸ್ಸಿನ ನಂತರ ಸ್ಯಾಂಡಲ್ ವುಡ್ ಸಲಗ ವಿಜಯ್ ಕುಮಾರ್ ನಿರ್ದೇಶನದ “ಸಿಟಿ ಲೈಟ್ಸ್” ಚಿತ್ರದ “ ಬಾವ ಬಾವ” ಹಾಡು ಬಿಡುಗಡೆಯಾಗಿದ್ದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚು ಮಾಡಿದೆ, ಈ ಚಿತ್ರ ಮೂಲಕ ನಿರ್ದೇಶಕನಾಗಿ ವಿಜಯ್ ಕುಮಾರ್ ಹ್ಯಾಟ್ರಿಲ್ ಹೊಡೆಯುವುದು ಬಹುತೇಕ ಖಚಿತವಾಗಿದೆ.

ಸಿಟಿ ಲೈಟ್ಸ್ ಚಿತ್ರದ ಮೂಲಕ ವಿಜಯ್ ಕುಮಾರ್ ಪುತ್ರಿ ಮೋನಿಷಾ ವಿಜಯ್ಕುಮಾರ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಅಪ್ಪನ ರೀತಿ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡುವ ಎಲ್ಲಾ ಲಕ್ಷಣಗಳಿವೆ
ಬಾವ ಬಾವ ಅನ್ನುವ ರಾಪ್ ಹಾಡಿನ ಮೂಲಕ ದುನಿಯಾ ವಿಜಯ್ ಮತ್ತೆ ಟ್ರೆಂಡಿ ಸಾಂಗ್ ಅನ್ನು ಪ್ರೇಕ್ಷಕರ ಮುಂದೆ ತಂದಿದ್ದಾರೆ. ಈ ಹಾಡನ್ನು ಅಂಕಿತ್ ಕುಮಾರ್ ಬಾವ ಅವರೇ ಬರೆದು ಹಾಡಿದ್ದಾರೆ. ಚರಣ್ ರಾಜ್ ಹಾಡಿಗೆ ಸಂಗೀತ ನೀಡಿದ್ದಾರೆ.
ನಟ ನಿರ್ದೇಶಕ ವಿಜಯ್ ಕುಮಾರ್ ಮಾತನಾಡಿ ` ರಾಪ್ ಹಾಡು ಯಾವಾಗಲು ಕಷ್ಟಗಳನ್ನ ಹೇಳಿಕೊಳ್ಳಲು ಬಳಸುವ ಹಾಡಾಗಿದೆ. ಸಿಟಿಲೈಟ್ಸ್ ನಲ್ಲಿ ನೋವು ಎನ್ನಿಸೋ ವಿಚಾರವನ್ನ ಹೇಳಲು ಹೊರಟಿದ್ದೇನೆ, ಈ ಕಥೆಗೆ ವಿನಯ್ ಅವ್ರೇ ಬೇಕಿತ್ತು ಪರ್ಸನಲಿ ನನಗೆ ವಿನಯ್ ಇಷ್ಟ’ ಎಂದರು.
ಸಂಗೀತ ನಿರ್ದೇಶಕ ಚರಣ್ ರಾಜ್ ಮಾತನಾಡಿ `ದುನಿಯಾ ವಿಜಯ್ ಅವರು ಪ್ರತಿ ಬಾರಿ ಹಾಡು ಇದೇ ರೀತಿ ಬೇಕು ಅನ್ನೋ ಒಂದಷ್ಟು ವಿಚಾರಗಳನ್ನ ಇಟ್ಟುಕೊಂಡೆ ಬಂದಿರುತ್ತಾರೆ ಅದು ನನಗೆ ಸಹಾಯವಾಗುತ್ತೆ ಎಂದು ಹೇಳಿದರು

ಹಾಡನ್ನ ಬರೆದು ಹಾಡಿರೋ ಅಂಕಿತ್ ಕುಮಾರ್ ಬಾವ ಮಾತನಾಡಿ `ನನ್ನ ಹಳೆ ಹಾಡುಗಳನ್ನ ನೋಡಿ ನಮ್ಮ ತಂಡವನ್ನ ಕರೆಸಿ ಅವಕಾಶ ಕೊಟ್ರು.. ವಿಜಿ ಸರ್ ಅವಕಾಶ ಕೊಡ್ತಾರೆ ಅಂತ ಯಾವತ್ತು ಅನ್ಕೊಂಡಿರಲಿಲ್ಲ’ ಎಂದರು.
ನಟ ವಿನಯ್ ರಾಜ್ ಕುಮಾರ್ ಮಾತನಾಡಿ `ಚರಣ್ ರಾಜ್ ಅವರುಎ ಒಳ್ಳೆ ಸಾಂಗ್ ಕೊಡಿ ಅಂತ ಕೇಳಿದ್ದೆ ಆದರೆ ಅವರು ಐದು ಹಾಡುಗಳನ್ನ ಕೊಟ್ಟಿದ್ದಾರೆ ಖುಷಿ ಆಗ್ತಿದೆ’ ಎಂದು ಸಂತಸ ಹಂಚಿಕೊಂಡಿರು

ನಟಿ ಮೋನಿಷಾ ವಿಜಯ್ ಕುಮಾರ್ ಮಾತನಾಡಿ ವಿನಯ್ ರಾಜ್ ಕುಮಾರ್ ಜೊತೆ ಅಭಿನಯ ಮಾಡಿದ್ದು ಖುಷಿ ಕೊಟ್ಟಿದೆ. ತುಂಬಾ ವಿಚಾರಗಳನ್ನ ಕಲಿತಿದ್ದೇನೆ’ ಎಂದರು..
‘ಸಿಟಿ ಲೈಟ್ಸ್’ನಲ್ಲಿ ಚಿತ್ರಕ್ಕೆ “ಜವಾಬ್ ದಾರಿ ದೀಪಗಳು ಎಂಬ ಅಡಿಬರಹವಿದೆ. ಹಳ್ಳಿಯಿಂದ ಬೆಂಗಳೂರಿಗೆ ಬಂದ ಇಬ್ಬರು ಏನೆಲ್ಲ ಕಷ್ಟಗಳನ್ನು ಎದುರಿಸುತ್ತಾರೆ ಎನ್ನುವ ಕಥೆ ಚಿತ್ರದಲ್ಲಿದೆ.
ಚಿತ್ರಕ್ಕೆ ಶಿವಸೇನಾ ಛಾಯಾಚಿತ್ರಗ್ರಹಣ, ದೀಪು ಎಸ್.ಕುಮಾರ್ ಸಂಕಲನ, ಮಾಸ್ತಿ ಸಂಭಾಷಣೆ ಮತ್ತು ಚರಣ್ ರಾಜ್ ಸಂಗೀತವಿದೆ. ದುನಿಯಾ ಟಾಕೀಸ್ ಹಾಗೂ ಯಂತ್ರೋದ್ದಾರಕ ಬ್ಯಾನರ್ ಅಡಿಯಲ್ಲಿ ವಿಜಯ್ ಕುಮಾರ್ ಹಾಗೂ ವಿಕ್ರಂ ಆರ್ಯಾ ನಿರ್ಮಾಣ ಮಾಡಿದ್ದಾರೆ.

