"Love Mocktail 3" celebrates its 50th day

“ಲವ್ ಮಾಕ್ಟೇಲ್-3 ಚಿತ್ರಕ್ಕೆ 50ನೇ ದಿನದ ಸಂಭ್ರಮ - CineNewsKannada.com

“ಲವ್ ಮಾಕ್ಟೇಲ್-3 ಚಿತ್ರಕ್ಕೆ 50ನೇ ದಿನದ ಸಂಭ್ರಮ

ಡಾರ್ಲಿಂಗ್ ಕೃಷ್ಣ ನಿರ್ದೇಶನ ಮಾಡಿ, ನಾಯಕನಾಗಿ ನಟಿಸಿರುವ ಲವ್ ಮಾಕ್ಟೇಲ್-3 ಚಿತ್ರ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ದಾಟಿಕೊಂಡಿದೆ. ಯಶಸ್ವಿಯಾಗಿ 50 ದಿನ ಪೂರೈಸಿಕೊಂಡಿದೆ.

ಚಿತ್ರದ ಗೆಲುವಿಗೆ ನಿರ್ದೇಶಕ ಡಾರ್ಲಿಂಗ್ ಕೃಷ್ಣ,ರೋಮಾಂಚಕ ಗೆಲುವು ತಂದುಕೊಟ್ಟ ಪ್ರೇಕ್ಷಕರಿಗೆಲ್ಲ ಧನ್ಯವಾದ ಸಲ್ಲಿಸಿದ್ದಾರೆ. ಲವ್ ಮಾಕ್ಟೇಲ್- 3 ಚಿತ್ರ ಈ ವರ್ಷದ ಸೂಪರ್ ಹಿಟ್ ಚಿತ್ರವಾಗಿ ದಾಖಲಾಗಿದೆ. ಐವತ್ತು ದಿನಗಳನ್ನು ದಾಟಿಕೊಳ್ಳುವ ಮೂಲಕ ಈ ಗೆಲುವಿಗೆ ಮತ್ತಷ್ಟು ರಂಗು ಬಂದಂತಾಗಿದೆ.

ಚಿತ್ರಕ್ಕೆ ಧುರಂಧರ್- 2 ನಂಥಾ ಮಹಾ ಸವಾಲು ಎದುರಾಗಿತ್ತು. ಅದೆಲ್ಲವನ್ನೂ ತನ್ನ ಆಂತರ್ಯದ ಕಸುವಿನಿಂದಲೇ ಎದುರಿಸಿದ ಲೊವ್ ಮಾಕ್ಟೇಲ್- 3 ಇದೀಗ ನೂರರ ಗಡಿಯತ್ತ ದಾಪುಗಾಲಿಡುತ್ತಿದೆ.

ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಚಿತ್ರ ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ದಿಲೀಪ್ ರಾಜ್, ಶ್ವೇತಾ ಪ್ರಸಾದ್, ರಚೆಲ್ ಡೇವಿಡ್, ನಯೇರಾ, ಜಗದೀಶ್, ಅಭಿಲಾಶ್, ಗಿರಿರಾಜ್, ದಳಪತಿ ಮುಂತಾದವರ ತಾರಾಗಣ ಚಿತ್ರಕ್ಕಿದೆ.

ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ ಮತ್ತು ಸಂಕಲನ, ನಕುಲ್ ಅಭಯಂಕರ್ ಸಂಗೀತ, ಅಮರ್ ಮತ್ತು ಜೋನಾ ಕಲಾ ನಿರ್ದೇಶನ ಚಿತ್ರಕ್ಕಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin