Dare Devil Mustafa The film releases on May 19

ಡೇರ್ ಡೆವಿಲ್ ಮುಸ್ತಫಾ’ಚಿತ್ರ : ಮೇ 19ಕ್ಕೆ ಬಿಡುಗಡೆ - CineNewsKannada.com

ಡೇರ್ ಡೆವಿಲ್ ಮುಸ್ತಫಾ’ಚಿತ್ರ :  ಮೇ 19ಕ್ಕೆ ಬಿಡುಗಡೆ

ಡೇರ್ ಡೆವಿಲ್ ಮುಸ್ತಫಾ ಟ್ರೇಲರ್ ರಿಲೀಸ್…ಪೂಚಂತೇ ಪ್ರಪಂಚ ಮೊದಲ ನೋಟ ಸೂಪರ್. ಡೇರ್ ಡೆವಿಲ್ ಮುಸ್ತಫಾ’ಚಿತ್ರ : ಮೇ 19ಕ್ಕೆ ಬಿಡುಗಡೆ. ಪೂರ್ಣಚಂದ್ರ ತೇಜಸ್ವಿ ಅವರ ಕಥೆಗಳನ್ನು ಓದುಗರೇ ಹಣ ಹಾಕಿ ಸಿನಿಮಾ ಮಾಡುತ್ತಿರುವುದು ಗೊತ್ತೇ‌ ಇದೆ.

ಡೇರ್ ಡೆವಿಲ್ ಮುಸ್ತಫಾ ಎಂಬ ಶೀರ್ಷಿಕೆಯಡಿ ಮೂಡಿಬರ್ತಿರುವ ಈ ಚಿತ್ರ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ಈಗಾಗಲೇ ವಿಭಿನ್ನವಾಗಿ ಪ್ರಚಾರ ನಡೆಸುತ್ತಿರುವ ಚಿತ್ರತಂಡ ಮೇ 19ಕ್ಕೆ ರಾಜ್ಯಾದ್ಯಂತ ಸಿನಿಮಾ ಬಿಡುಗಡೆ ಮಾಡಲು ಸಜ್ಜಾಗಿದೆ.

ಅಂದಹಾಗೇ ಡೇರ್ ಡೆವಿಲ್ ಮುಸ್ತಫಾ ಸಿನಿಮಾಗೆ ಶಶಾಂಕ್ ಸೋಗಾಲ್ ಸಾರಥಿ. ಅವರೇ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಫಟಿಂಗ ಎಂಬ ಜನಪ್ರಿಯ ಕಿರುಚಿತ್ರ ನಿರ್ದೇಶಿಸಿದ್ದ ಶಶಾಂಕ್ ಸೋಗಾಲ್ ಈ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ.

ಆರಂಭದಲ್ಲಿ ನಾನಾ ಬಗೆಯಲ್ಲಿ ಸಿನಿರಸಿಕರನ್ನು ಗಮನಸೆಳೆಯುತ್ತಿರುವ ಡೇರ್ ಡೆವಿಲ್ ಮುಸ್ತಫಾ ಸಿನಿಮಾದ ನಿನ್ನಂಥೋರ್ ಯಾರೂ ಇಲ್ವಲ್ಲೋ ಎಂಬ ಹಾಡು ಸೂಪರ್ ಹಿಟ್ ಲಿಸ್ಟ್ ಸೇರಿದೆ. ಅಣ್ಣಾವ್ರ ಅನಿಮೇಷನ್ ಮೂಲಕ ಗಮನಸೆಳೆದಿರುವ ಈ ಗಾನಲಹರಿಗೆ ವಾಸುಕಿ ವೈಭವ್ ಹಾಗೂ ಸಿದ್ದಾರ್ಥ್ ಬೆಳ್ಮಣ್ಣು ಧ್ವನಿಯಾಗಿದ್ದಾರೆ. ವಿಭಿನ್ನವಾಗಿ ಮೂಡಿಬಂದಿರುವ ನಿನ್ನಂಥೋರ್ ಯಾರೂ ಇಲ್ವಲ್ಲೋ ಹಾಡು ಸಿನಿಮಾದಲ್ಲಿ ಹೇಗಿರಲಿ ಎಂಬ ನಿರೀಕ್ಷೆ ಹೆಚ್ಚಿಸಿದೆ.

ಆನಿಮೇಷನ್‌ ಹಾಡಿನ ಮೂಲಕ ಗಮನಸೆಳೆದಿರುವ ಡೇರ್ ಡೆವಿಲ್ ಮುಸ್ತಫಾ ಟ್ರೇಲರ್ ಬಿಡುಗಡೆಯಾಗಿದೆ. ಯೂಟ್ಯೂಬ್ ಸೆನ್ಸೇಷನ್ ಸ್ಟಾರ್ ಡಾ.ಬ್ರೋ ವಾಯ್ಸ್ ನಿಂದ ಪೂಚಂತೇ ಪ್ರಪಂಚ ಪರಿಚಯ ಮಾಡಿಕೊಡಲಾಗುತ್ತದೆ. ಬಾಲ್ಯದ ಆಟ ಪಾಠ ತುಂಟಾಟದ ಡೇರ್ ಡೆವಿಲ್ ಮುಸ್ತಫಾ ಮೊದಲ ನೋಟ ನೋಡುಗರಿಗೆ ಇಂಪ್ರೆಸ್ ಮಾಡುತ್ತಿದೆ.

ಪೂರ್ಣಚಂದ್ರ ತೇಜಸ್ವಿ ಅಭಿಮಾನಿಗಳಿಂದಲೇ ತಯಾರಾಗಿರುವ ಸಿನಿಮಾಗೆ ನಟರಾಕ್ಷಸ ಡಾಲಿ ಧನಂಜಯ್ ಬೆಂಬಲವಾಗಿ ನಿಂತಿದ್ದಾರೆ. ಹೇಳಿಕೇಳಿ ಸಾಹಿತ್ಯ ಪ್ರೇಮಿಯಾಗಿರುವ ಧನಂಜಯ್ ಈ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿದ್ದು, ಕೆ ಆರ್ ಜಿ ಸ್ಟುಡಿಯೊಸ್ ರಾಜ್ಯದೆಲ್ಲೆಡೆ ವಿತರಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ರಾಹುಲ್‌ ರಾಯ್‌ ಛಾಯಾಗ್ರಹಣ, ಶಶಾಂಕ್ ಸೋಗಾಲ್, ಸಂಪತ್ ಸಿರಿಮನೆ, ಡಾಲಿ ಧನಂಜಯ್ ಸಾಹಿತ್ಯದ ಹಾಡುಗಳಿಗೆ ನವನೀತ್‌ ಶ್ಯಾಮ್‌ ಸಂಗೀತವಿದೆ. ಶಿಶಿರ್‌ ಬೈಕಾಡಿ, ಆದಿತ್ಯ ಅಶ್ರೀ, ಅಭಯ್‌, ಸುಪ್ರೀತ್‌ ಭಾರದ್ವಾಜ್‌, ಆಶಿತ್, ಶ್ರೀವತ್ಸ, ಪ್ರೇರಣಾ, ಎಂ.ಎಸ್‌. ಉಮೇಶ್‌, ಮಂಡ್ಯ ರಮೇಶ್‌, ಮೈಸೂರ್‌ ಆನಂದ್‌, ಸುಂದರ್‌ ವೀಣಾ, ನಾಗಭೂಷಣ್‌, ಪೂರ್ಣಚಂದ್ರ ಮೈಸೂರು ಸೇರಿ ಅನೇಕ ಕಲಾವಿದರು ಈ ಸಿನಿಮಾದ ಭಾಗವಾಗಿದ್ದಾರೆ. ಸಿನಿಮಾಮರ ಬ್ಯಾನರ್‌ನಲ್ಲಿ ಡೇರ್ ಡೆವಿಲ್ ಮುಸ್ತಫಾ ನಿರ್ಮಾಣವಾಗಿದೆ.
ಕನ್ನಡ ಚಿತ್ರರಸಿಕರನ್ನು ಪೂಚಂತೇ ಪ್ರಪಂಚಕ್ಕೆ ಕರೆದುಕೊಂಡು ಹೋಗಲು ಹೊಸ ಉತ್ಸಾಹಿ ಯುವಕರೇ ಕೂಡಿರುವ ಇಡೀ ಚಿತ್ರ ತಂಡ ಅತ್ಯಂತ ಫ್ಯಾಷನೆಟೇಡ್ ಆಗಿ ಕೆಲಸ ಮಾಡಿದೆ. ಇದು ದೊಡ್ಡ ಪರದೆಯಲ್ಲಿ ಅದ್ಭುತ ಅನುಭವ ಅಂತಾರೆ ನಿರ್ದೇಶಕ ಶಶಾಂಕ್ ಸೋಗಾಲ್.

ಪೂರ್ತಿಯಾಗಿ ಓದಿ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin