ದೇಸಾಯಿ : ಕೌಟಂಬಿಕ ಕಥಾ ಹಂದರವೇ ಪ್ರದಾನ
ಚಿತ್ರ: ದೇಸಾಯಿ
ನಿರ್ದೇಶನ:ನಾಗಿರೆಡ್ಡಿ ಭಡ
ತಾರಾಗಣ: ಪ್ರವೀಣ್ ಕುಮಾರ್, ರಾಧ್ಯ, ಒರಟ ಪ್ರಶಾಂತ್, ಚೆಲುವರಾಜು, ಮಧುಸೂಧನ್ ರಾವ್, ಕಲ್ಯಾಣಿ, ಹರಿಣಿ, ನಟನಾ ಪ್ರಶಾಂತ್, ಮಂಜುನಾಥ್ ಹೆಗ್ಡೆ, ಸೃಷ್ಠಿ ಮತ್ತಿತರರು
ರೇಟಿಂಗ್: *** 3/5
ಕನ್ನಡದಲ್ಲಿ ಇತ್ತೀಚೆಗೆ ಹೊಸ ಹೊಸ ತಿರುಳು ಹೊಂದಿರುವ ಕಥೆಗಳು ಪ್ರೇಕ್ಷಕರ ಮುಂದೆ ಬರುತ್ತಿವೆ. ಜೊತೆಗೆ ಜನರ ಮನಗೆಲ್ಲುತ್ತಿವೆ. ಅದರ ಸಾಲಿಗೆ ಮತ್ತೊಂದು ಹೊಸ ಸೇರ್ಪಡೆ “ ದೇಸಾಯಿ”.
ನಿರ್ದೇಶಕ ನಾಗಿರೆಡ್ಡಿ ಭಡ ಅವರು ಕೌಂಟಬಿಕ ಕಥಾ ಹಂದರ ತಿರುಳನ್ನು ಮುಂದಿಟ್ಟುಕೊಂಡು ಮನಮುಟ್ಟುವ ರೀತಿ ತೆರೆಯ ಮೇಲೆ ಕಟ್ಟಿಕೊಟ್ಟಿದ್ದಾರೆ. ಬಹಳ ದಿನಗಳ ನಂತರ ಮನೆಮಂದಿಯೆಲ್ಲಾ ಕುಳಿತು ನೋಡಬಹುದಾದ ಚಿತ್ರವನ್ನು ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ.
ಉತ್ತರ ಕರ್ನಾಟಕದಲ್ಲಿ ದೇಸಾಯಿ ಕುಟುಂಬದಕ್ಕೆ ಆದರದೆ ಆದ ಗತ್ತು ಗೈರತ್ತು. ದೇಸಾಯಿ ಕುಟುಂಬದ ನಡುವಿನ ಕಥೆಯೇ ಚಿತ್ರದ ಪ್ರಮುಖ ತಿರುಳೂ ಹೌದು.
ಮಲ್ಲಯುದ್ದದಲ್ಲಿ ಜಗಜಟ್ಟಿಯ ವಿರುದ್ದ ತೊಡೆತಟ್ಟಿ ಊರಿನ ಗೌರವ ಕಾಪಾಡುವ ಪ್ರವೀಣ್- ಪ್ರವೀಣ್ ಕುಮಾರ್, ದೇಸಾಯಿ ಮನೆತನದ ಮುಖ್ಯಸ್ಥರ ಪ್ರೀತಿಗೂ ಪಾತ್ರರಾಗುತ್ತಾನೆ. ಈ ನಡುವೆ ದೇಸಾಯಿ ಕುಟುಂಬದದ ಮುಖ್ಯಸ್ಥನ ಸಹೋದರನ ಪುತ್ರ ಭದ್ರ- ಒರಟ ಪ್ರಶಾಂತ್ ಪಾಲಿನ ಆಸ್ತಿಯನ್ನು ದುಶ್ಚಟಗಳಿಗೆ ದಾಸನಾಗಿ ಅದನ್ನೆಲ್ಲಾ ಕಳೆದುಕೊಂಡು ಜೈಲಿನ ಅತಿಥಿಯಾಗಿ ಬಂದವ.
ಪೂಜಾರಿ ಪುತ್ರಿ ಅನುಪಮಾ-ರಾಧ್ಯ ಮತ್ತು ಪ್ರವೀಣ್ ನಡುವೆ ಪ್ರೇಮಾಂಕುರವಾಗುತ್ತೆ. ಇದರ ಜೊತೆಗೆ ದೇಸಾಯೊ ಕುಟುಂಬದ ಪ್ಲಾಶ್ ಬ್ಯಾಕ್ ಅನಾವರಣವಾಗಲಿದೆ. ಅಲ್ಲಿಂದ ಕಥೆ ಮತ್ತೊಂದು ಮಗ್ಗಲು ಪಡೆಯುತ್ತದೆ. ಅದು ಏನು.ದೇಸಾಯಿ ಕುಟುಂಬದಲ್ಲಿ ನಡೆದ ಘಟನೆ ಏನು, ಅವರ ಪಶ್ಚಿತ್ತಾಪ ಸೇರಿದಂತೆ ಹಲವು ವಿಷಯಗಳು ಕುತೂಹಲ ಭರಿತವಾಗಿದ್ದು ಅದನ್ನು ಚಿತ್ರದಲ್ಲಿಯೇ ನೋಡಿದರೆ ಚೆನ್ನ.
ನಿರ್ದೇಶಕ ನಾಗಿರೆಡ್ಡಿ ಭಡ ಮನೆ ಮಂದಿಯೆಲ್ಲಾ ಕುಳಿತು ನೋಡಬಹುದುದಾದ ಚಿತ್ರವನ್ನು ಜನರ ಮುಂದೆ ಇಟ್ಟಿದ್ದಾರೆ.ಲವ್ 360 ಚಿತ್ರದ ಮೂಲಕ ಲವ್ವರ್ ಬಾಯ್ ಆಗಿ ಗಮನ ಸೆಳೆದಿದ್ದ ನಾಯಕ ಪ್ರವೀಣ್ ಕುಮಾರ್ ಈ ಚಿತ್ರದ ಮೂಲಕ ಆಕ್ಷನ್ ಹೀರೋ ಆಗಿ ಚಿತ್ರರಂಗದಲ್ಲಿ ಹೊಸ ಭರವಸೆ ಹುಟ್ಟುಹಾಕಿದ್ದಾರೆ.
ನಟಿ ರಾಧ್ಯ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಿದ್ಧಾರೆ. ಉಳಿದಂತೆ ಒರಟ ಪ್ರಶಾಂತ್, ಚೆಲುವರಾಜು, ಮಧುಸೂಧನ್ ರಾವ್, ಕಲ್ಯಾಣಿ, ಹರಿಣಿ, ನಟನಾ ಪ್ರಶಾಂತ್, ಮಂಜುನಾಥ್ ಹೆಗ್ಡೆ, ಸೃಷ್ಠಿ ಮತ್ತಿತರರು ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ.